ಕಿಸ್ ಮಾಡಿದ ತಹಶೀಲ್ದಾರಗೆ ಗೇಟ್ ಪಾಸ್ – ಮನೆಗೆ ಕಳಿಸಿದ ರಾಜ್ಯ ಸರ್ಕಾರ

Suddi Sante Desk

ಕೊಪ್ಪಳ –

ಮಹಿಳಾ ಗ್ರಾಮ ಲೆಕ್ಕಾಧಿಕಾರಿಗೆ ಕಿಸ್ ಮಾಡಿದ ಕೊಪ್ಪಳದ ತಹಶೀಲ್ದಾರನನ್ನು ಅಮಾನತು ಮಾಡಲಾಗಿದೆ.ಕೊಪ್ಪಳದ ಪುರಸಭೆಯ ತಹಸೀಲ್ದಾರ್ ಕೆ ಎಮ್ ಗುರುಬಸವರಾಜ ತಮ್ಮ ಕಚೇರಿಯಲ್ಲಿನ ಮಹಿಳಾ ಗ್ರಾಮ ಲೆಕ್ಕಾಧಿಕಾರಿಗೆ ಕಚೇರಿಯಲ್ಲಿಯೇ ಕಿಸ್ ಮಾಡಿದ್ದರು. ಈ ಒಂದು ಪ್ರಕರಣವು ಮಾಧ್ಯಮಗಳಲ್ಲಿ ಪ್ರಸಾರವಾಗಿತ್ತು.

ಕೊನೆಗೂ ಇದನ್ನು ಗಂಭಿರವಾಗಿ ತಗೆದುಕೊಂಡ ರಾಜ್ಯ ಸರ್ಕಾರ ಮಹಿಳಾ ಲೆಕ್ಕಾಧಿಕಾರಿಗೆ ಕಿಸ್ ಮಾಡಿದ ತಹಶೀಲ್ದಾರರಿಗೆ ಗೇಟ್ ಪಾಸ್ ಕೊಟ್ಟು ಮನೆಗೆ ಕಳುಹಿಸಿದೆ.ಕಿಸ್ಸಿಂಗ್ ತಹಸೀಲ್ದಾರ್ ಕೆ.ಎಂ.ಗುರುಬಸವರಾಜ ಅಮಾನತು ಮಾಡಿರುವ ರಾಜ್ಯ ಸರ್ಕಾರ ಆದೇಶವನ್ನು ಹೊರಡಿಸಿದೆ. ಸಧ್ಯ ಕೊಪ್ಪಳದ ಪುರಸಭೆ ತಹಸೀಲ್ದಾರ್ ಕೆ.ಎಂ.ಗುರುಬಸವರಾಜ ಅಮಾನತಾಗಿದ್ದು ಗುರುಬಸವರಾಜ ಈ ಹಿಂದೆ ಕುಷ್ಟಗಿಯಲ್ಲಿ ತಹಸೀಲ್ದಾರ್ ‌ಆಗಿದ್ದಾಗ ಈ ಒಂದು ಘಟನೆ ನಡೆದಿದೆಯಂತೆ.

ತಹಶಿಲ್ದಾರ ಗುರುಬಸವರಾಜ

ಅಲ್ಲಿನ ಮಹಿಳಾ ಸಿಬ್ಬಂದಿಗೆ ತಹಶೀಲ್ದಾರ ಸಾಹೇಬ್ರು ಕಚೇರಿಯಲ್ಲಿ ಕಿಸ್ ಕೊಟ್ಟಿದ್ರರಂತೆ. ಹಳೇಯ ವಿಡಿಯೋ ಈಗ ವೈರಲ್ ಆಗಿದ್ದು ಕಿಸ್ ಕೊಟ್ಟಿದ್ದ ದೃಶ್ಯ ಸಿಸಿ ಕ್ಯಾಮೆರಾದಲ್ಲೂ ಕೂಡಾ ಸೆರೆಯಾಗಿತ್ತು.

ಅಮಾನತು ಆದೇಶದ ಪ್ರತಿ

ಸಧ್ಯ ಇದು ವೈರಲ್ ಆಗಿದ್ದು ಇತ್ತ ಮಾಧ್ಯಮಗಳಲ್ಲಿ ಬಂದ ಹಿನ್ನೆಲೆಯಲ್ಲಿ ಕುಷ್ಟಗಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಸಧ್ಯ ಕೊಪ್ಪಳ ಜಿಲ್ಲಾಧಿಕಾರಿ‌ ಶಿಫಾರಸ್ಸು ಆಧರಿಸಿ ರಾಜ್ಯ ಸರ್ಕಾರ ಅಮಾನತು ಆದೇಶವನ್ನು ಹೊರಡಿಸಿದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.