ಬೆಂಗಳೂರು –
ರಾಜ್ಯದ ಸರ್ಕಾರಿ ನೌಕರರ 7ನೇ ವೇತನ ಆಯೋಗದ ವರದಿ ಏನೇನಾಯಿತು ಎಲ್ಲಿಗೆ ಬಂತು – ಶೀಘ್ರದಲ್ಲೇ ರಾಜ್ಯದಲ್ಲಿ ಘೋಷಣೆ ಯಾಗಲಿದೆ ವಿಧಾನಸಭೆಗೆ ಮಹೂರ್ತ ಕೊಟ್ಟ ಮಾತನ್ನು ಉಳಿಸಿಕೊಳ್ಳಿ CM ಸಾಹೆಬ್ರ…..
ರಾಜ್ಯದ ಸರ್ಕಾರಿ ನೌಕರರಿಗೆ ವೇತನ ಪರಿಷ್ಕ್ರರಣೆ ವಿಚಾರ ಕುರಿತಂತೆ ಈಗಾಗಲೇ ರಾಜ್ಯ ಸರ್ಕಾರ 7ನೇ ಆಯೋಗದ ಸಮಿತಿಯೊಂದನ್ನು ರಚನೆ ಮಾಡಿದೆ.ಈ ಒಂದು ಆಯೋಗ ರಚನೆಗೊಂಡು ನಾಲ್ಕು ತಿಂಗಳು ಕಳೆದಿದ್ದು ಇದರ ನಡುವೆ ಇನ್ನೇನು ಕೆಲವೆ ಕೆಲವು ದಿನಗಳಲ್ಲಿ ರಾಜ್ಯದ ವಿಧಾನ ಸಭೆಗೆ ಚುನಾವಣೆ ಘೋಷಣೆಯಾಗ ಲಿದೆ.
ಕಳೆದ ವಾರವಷ್ಟೇ ಈ ಒಂದು ವಿಳಂಬ ಧೋರಣೆ ಯನ್ನು ಖಂಡಿಸಿ ಈಗಾಗಲೇ ರಾಜ್ಯದ ಸರ್ಕಾರಿ ನೌಕರರು ಪ್ರತಿಭಟನೆಗೆ ಕರೆ ನೀಡಿದ ಬೆನ್ನಲ್ಲೇ ರಾಜ್ಯದ ಸರ್ಕಾರಿ ನೌಕರರಿಗೆ ರಾಜ್ಯ ಸರ್ಕಾರ ಮಧ್ಯಂತರ ಪರಿಹಾರದ ರೂಪದಲ್ಲಿ ವೇತನವನ್ನು ಹೆಚ್ಚಳ ಮಾಡಿ ಆದೇಶವನ್ನು ಮಾಡಿದೆ.ಹೌದು 2018 ರ ಪರಿಷ್ಕೃತ ವೇತನ ಶ್ರೇಣಿಯಲ್ಲಿ ವೇತನ ವನ್ನು ಪಡೆಯುತ್ತಿರುವ ರಾಜ್ಯ ಸರ್ಕಾರಿ ನೌಕರರಿಗೆ ಏಪ್ರಿಲ್ 1 , 2023 ರಿಂದ ಜಾರಿಗೆ ಬರುವಂತೆ ಮೂಲ ವೇತನದ ಶೇ 17 ರಷ್ಟು ಮಧ್ಯಂತರ ಪರಿಹಾರವನ್ನು ಮಂಜೂರು ಮಾಡಲು ಸರ್ಕಾರ ಆದೇಶವನ್ನು ಮಾಡಿದೆ.
ಮಧ್ಯಂತರ ಪರಿಹಾರದ ಉದ್ದೇಶಕ್ಕಾಗಿ ಮೂಲ ವೇತನ ಎಂದರೆ ಸರ್ಕಾರಿ ನೌಕರನು ಧಾರಣ ಮಾಡಿರುವ ಹುದ್ದೆಗೆ ಅನ್ವಯವಾಗುವ ವೇತನ ಶ್ರೇಣಿಯಲ್ಲಿ ಪಡೆಯುತ್ತಿರುವ ವೇತನ ಮತ್ತು ಅದರಲ್ಲಿ ಅ- ವೇತನ ಶ್ರೇಣಿಯ ಗರಿಷ್ಠಕ್ಕಿಂತ ಹೆಚ್ಚಾಗಿ ಸ್ಥಗಿತ ವೇತನ ಬಡ್ತಿಯನ್ನು ನೀಡಲಾಗಿ ದ್ದರೆ ಆ ಸ್ಥಗಿತ ವೇತನ ಬಡ್ತಿ ಆ- 2018 ರ ಕರ್ನಾಟಕ ನಾಗರೀಕ ಸೇವಾ(ಪರಿಷ್ಕೃತ ವೇತನ) ನಿಯಮಗಳ ನಿಯಮ 3 (ಸಿ) ಯನ್ನು ನೀಡಲಾಗಿದೆ
7 ನೇ ನಿಯಮದ (3) ನೇ ಉಪ ನಿಯಮದ ಮೇರೆಗೆ ಅವನಿಗೆ ನೀಡಲಾದ ವೈಯಕ್ತಿಕ ವೇತನ ಯಾವುದಾದರೂ ಇದ್ದರೆ ಆ ವೈಯಕ್ತಿಕ ವೇತನ ಇ- ವೇತನ ಶ್ರೇಣಿಯ ಗರಿಷ್ಠಕ್ಕಿಂತ ಹೆಚ್ಚಾಗಿ ಮಂಜೂರು ಮಾಡಲಾಗಿರುವ ಹೆಚ್ಚುವರಿ ವೇತನ ಬಡ್ತಿ ಯಾವುದಾದರೂ ಇದ್ದಲ್ಲಿ ಅವುಗಳು ಸೇರು ತ್ತವೆ ಎಂದು ಉಲ್ಲೇಖ ಮಾಡಲಾಗಿದ್ದು ಈ ಒಂದು ವಿಚಾರವು ಒಂದೇಡೆಯಾದರೆ
ಇನ್ನೂ ಪ್ರಮುಖವಾಗಿ ಇದರ ನಡುವೆ ಇನ್ನೇನು ಕೆಲವೆ ಕೆಲವು ದಿನಗಳು ಕಳೆದರೆ ಸಾಕು ರಾಜ್ಯ ದಲ್ಲಿ ವಿಧಾನ ಸಭೆಗಳಿಗೆ ಚುನಾವಣೆ ಮಹೂರ್ತ ಘೋಷಣೆಯಾಗಲಿದ್ದು ಹೀಗಾಗಿ ನೀತಿ ಸಂಹಿತಿ ಕೂಡಾ ಜಾರಿಗೆ ಬರಲಿದೆ ಹೀಗಾಗಿ ಮತ್ತೆ ವಿಳಂಬ ವಾಗುವ ಆತಂಕ ಎದುರಾಗಲಿದ್ದು ಈ ಒಂದು ಕಾರಣಕ್ಕಾಗಿ ಮುಖ್ಯಮಂತ್ರಿಯವರು ಈಗಾಗಲೇ ಈ ಕುರಿತಂತೆ ಶೀಘ್ರದಲ್ಲೇ ವರದಿಯನ್ನು ತರಿಸಿ ಕೊಂಡು ಜಾರಿಗೆ ತರುವ ಮಾತನ್ನು ಹೇಳಿದ್ದಾರೆ ಹೀಗಾಗಿ ಈ ಒಂದು ವರದಿಯನ್ನು 7ನೇ ವೇತನ ಆಯೋಗವು ಸರ್ಕಾರಕ್ಕೆ ನೀಡಿದರೆ ಅದನ್ನು ಜಾರಿಗೆ ತಂದರೆ ಇತ್ತ ಸರ್ಕಾರಿ ನೌಕರರಿಗೆ ಅನು ಕೂಲವಾಗುತ್ತದೆ
ಅತ್ತ ಬಿಜೆಪಿ ಸರ್ಕಾರಕ್ಕೆ ಒಂದು ಒಳ್ಳೇಯ ಹೆಸರು ಬರುತ್ತದೆ ಅಲ್ಲದೇ ಬರುವ ಚುನಾವಣೆಯಲ್ಲಿ ಒಂದಿಷ್ಟು ಅನುಕೂಲವಾಗಲಿದೆ ಎಂಬ ಲೆಕ್ಕಾ ಚಾರ ಕಂಡು ಬರಲಿದ್ದು ಹೀಗಾಗಿ ಏನೇನಾಗುತ್ತದೆ ಎಂಬೊದನ್ನು ಕಾದು ನೋಡಬೇಕಿದೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..