ಹೊಸ ದಾಖಲೆ ಬರೆದವು ರಾಜ್ಯದ ಸರ್ಕಾರಿ ಶಾಲೆಗಳು, ದಾಖಲೆಯ ಪ್ರಮಾಣದಲ್ಲಿ ಮಕ್ಕಳ ದಾಖಲಾತಿ ರಾಜ್ಯದ ಕಂಪ್ಲೀಟ್ ಮಾಹಿತಿ…..

Suddi Sante Desk

ಬೆಂಗಳೂರು –

ಕರ್ನಾಟಕದ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ದಾಖ ಲಾತಿಯ ಪ್ರಮಾಣ ಒಂದು ವರ್ಷದಲ್ಲಿ ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡಿದೆ.ಹೌದು 2018ರಲ್ಲಿ ಶೇ.69.4 ಹಾಗೂ 2020ರಲ್ಲಿ ಶೇ.68.6ರಷ್ಟಿದ್ದ ದಾಖಲಾತಿ ಪ್ರಮಾಣ ಈಗ ಶೇ.77.7ಕ್ಕೆ ಏರಿಕೆಯಾಗಿದೆ. ಕೋವಿಡ್-19 ನಂತರದ ಶಿಕ್ಷಣದ ವಾರ್ಷಿಕ ಸ್ಥಿತಿ ವರದಿ ಈ ಬಗ್ಗೆ ಸಮೀಕ್ಷೆ ನಡೆಸಿದ್ದು ನ.17 ರಂದು ವರದಿ ಬಿಡುಗಡೆಯಾಗಿದೆ.30 ಜಿಲ್ಲೆಗಳ 890 ಗ್ರಾಮಗಳಲ್ಲಿ ಈ ಸಮೀಕ್ಷೆ ನಡೆದಿದ್ದು 2021 ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಶೇ.77.7( ಶೇ.76.8 ರಷ್ಟು ವಿದ್ಯಾರ್ಥಿಗಳು ಹಾಗೂ ಶೇ.78.6 ರಷ್ಟು ವಿದ್ಯಾರ್ಥಿನಿ ಯರು) ಸರ್ಕಾರಿ ಶಾಲೆಗಳಿಗೆ ದಾಖಲಾಗಿದ್ದಾರೆ.ಈ ನಡುವೆ ಖಾಸಗಿ ಬೋಧನೆಗಳನ್ನು ತೆಗೆದುಕೊಳ್ಳುತ್ತಿರುವ ವಿದ್ಯಾರ್ಥಿ ಗಳ ಸಂಖ್ಯೆಯೂ ಗಣನೀಯವಾಗಿ ಏರಿಕೆ ಕಂಡಿದೆ.

ದೇಶಾದ್ಯಂತ 17,814 ಗ್ರಾಮಗಳಲ್ಲಿ 76,606 ಮನೆಗ ಳನ್ನು ಸಮೀಕ್ಷೆಗೆ ಒಳಪಡಿಸಲಾಗಿದ್ದು ಈ ಪೈಕಿ 4,841 ಮನೆಗಳು ಕರ್ನಾಟಕ ರಾಜ್ಯದ್ದಾಗಿವೆಇತ್ತೀಚಿನ ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಖಾಸಗಿ ಶಾಲೆಗಳಲ್ಲಿನ ದಾಖಲಾತಿ 2020 ರ ಶೇ.28.8 ರಿಂದ 2021 ರಲ್ಲಿ ಶೇ.24.4 ಕ್ಕೆ ಕುಸಿತ ಕಂಡಿದೆ. ಸರ್ಕಾರಿ ಶಾಲೆಗಳಲ್ಲಿನ ದಾಖಲಾತಿ ಹೆಚ್ಚುವುದಕ್ಕೆ ಹಲವಾರು ಕಾರಣಗಳಿರಬಹುದು. ಕೋವಿಡ್-19 ಸಂದರ್ಭದಲ್ಲಿ ಕುಟುಂಬಗಳು ತೀವ್ರ ಆರ್ಥಿಕ ನಷ್ಟ ಎದುರಿಸಿವೆ.

ಇನ್ನೂ ಕೈಗೆಟುಕುವ ದರದಲ್ಲಿ ಶಿಕ್ಷಣ ನೀಡುತ್ತಿದ್ದ ಹಲವು ಶಾಲೆಗಳು ಮುಚ್ಚಿವೆ. ಖಾಸಗಿ ಶಾಲೆಗಳು ಮುಚ್ಚಿದ ಬಳಿಕ ಅಲ್ಲಿನ ಶಿಕ್ಷಕರೂ ತಮ್ಮ ವೃತ್ತಿಯನ್ನು ಬದಲಾಯಿಸಿದ್ದಾರೆ ಸರ್ಕಾರವೂ ಸಹ ಇತ್ತೀಚಿನ ದಿನಗಳಲ್ಲಿ ಆಂಗ್ಲ ಮಾಧ್ಯಮ ಶಾಲೆಗಳನ್ನು ಪ್ರಾರಂಭಿಸಿದೆ. ನಗರ ಪ್ರದೇಶಗಳಲ್ಲಿ ಇದ್ದ ಹಲವು ವಲಸಿಗ ಕುಟುಂಬಗಳು ವಾಪಾಸ್ ತಮ್ಮ ಊರು ಗಳಿಗೆ ತೆರಳಿವೆ ಇವೆಲ್ಲದರ ಕಾರಣದಿಂದಾಗಿ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಹೆಚ್ಚಾಗಿರಬಹುದು ಎಂದು ವಿಶ್ಲೇಷಿಸಲಾಗಿದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.