ಹುಬ್ಬಳ್ಳಿ –
ಸರ್ಕಾರಿ ಶಾಲೆಗೆ ಕಾಯಕಲ್ಪದೊಂದಿಗೆ ಮಕ್ಕಳ ದಾಖಲಾತಿಯನ್ನು ಹೆಚ್ಚಿಸಿದ ಹನುಮಪ್ಪ ಕುಂದರಗಿ ಯವರಿಗೆ ಒಲಿದು ಬಂದ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಗೌರವ – ಧಾರವಾಡ ಜಿಲ್ಲೆಯ ಶಿಕ್ಷಕ ಬಂಧು ಗಳಿಂದ ಪ್ರಶಸ್ತಿ ಪಡೆದ ಹಿರಿಯ ಶಿಕ್ಷಕರಿಗೆ ಅಭಿನಂದನೆ ಗಳ ಮಹಾಪೂರ…..
ಶಿಕ್ಷಕರ ದಿನಾಚರಣೆ ದಿನದಂದು ಪ್ರತಿ ವರ್ಷ ನೀಡುವ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಕಟಗೊಂಡಿದೆ. ರಾಜ್ಯದ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಕರ್ತವ್ಯ. ವನ್ನು ನಿರ್ವಹಿಸುತ್ತಿರುವ ಶಿಕ್ಷಕರ ಸೇವೆಯನ್ನು ಗುರುತಿಸಿ ಈ ಒಂದು ಪ್ರಶಸ್ತಿಯನ್ನು ನೀಡಲಾಗುತ್ತಿದ್ದು ಧಾರವಾಡ ಜಿಲ್ಲೆಯಲ್ಲಿ ಇಬ್ಬರು ಶಿಕ್ಷಕರಿಗೆ ಈ ಒಂದು ಪ್ರಶಸ್ತಿ ಲಭಿಸಿದೆ.
ಪ್ರಾಥಮಿಕ ಶಾಲಾ ವಿಭಾಗದಲ್ಲಿ ಹಳೆ ಹುಬ್ಬಳ್ಳಿಯ ನಂಬರ್ 19ರ ಶಾಲೆಯ ಪ್ರಧಾನ ಗುರುಗಳಾದ ಹನುಮಪ್ಪ ಎಂ ಕುಂದರಗಿ ಯವರಿಗೆ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಲಭಿಸಿದೆ.ಹುಬ್ಬಳ್ಳಿ ಶಹರ ವಲಯದ ಹಿರಿಯ ಶಿಕ್ಷಕರು, ಹಳೇ ಹುಬ್ಬಳ್ಳಿಯ ನಂ 1 ಶಾಲೆಗೆ ಪುನರ್ ಕಾಯಕಲ್ಪ ನೀಡಿ ಮಕ್ಕಳ ದಾಖಲಾತಿ ಹೆಚ್ಚಿಸಿ ಮಕ್ಕಳ ಶೈಕ್ಷಣಿಕ ಪ್ರಗತಿ ಸಾಧಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ.
ಪ್ರಧಾನ ಗುರುಗಳು, ಉತ್ತಮ ಹೋರಾಟಗಾರರು ಮಾರ್ಗದರ್ಶಕರು ಹಾಗೂ ಪ್ರಸ್ತುತ ಸ ಹಿ ಪ್ರಾ ಶಾಲೆ ಇಂಡಿ ಪಂಪ್ ಹಳೇ ಹುಬ್ಬಳ್ಳಿ ಶಾಲೆಯಲ್ಲಿ ಪ್ರಧಾನ ಗುರುಗಳಾಗಿ ಸೇವೆ ಸಲ್ಲಿಸುತ್ತಿರುವ ಎಚ್ ಎಂ ಕುಂದರಗಿ ಅವರಿಗೆ ಶಿಕ್ಷಕರ ದಿನಾಚರಣೆ ಅಂಗವಾಗಿ ರಾಜ್ಯ ಸರ್ಕಾರ ಕೊಡುವ 2024-25 ನೇ ಸಾಲಿನ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಲಭಿಸಿದ್ದು
ಜಿಲ್ಲೆಯ ಅದರಲ್ಲೂ ಶಿಕ್ಷಕರ ಸಮುದಾಯದ ಗೌರವ ವನ್ನು ಮತ್ತಷ್ಟು ಹೆಚ್ಚಿಸಿದೆ.ಪ್ರಶಸ್ತಿಗೆ ಭಾಜನರಾಜ ಇವರಿಗೆ ಜಿಲ್ಲೆಯ ಸಮಸ್ತ ಶಿಕ್ಷಕ ಬಂಧುಗಳು ಮತ್ತು ಕೆಎಸ್ ಪಿಎಸ್ ಟಿ ಸಂಘಟನೆಯಿಂದಲೂ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಲಾಗಿದೆ.ಬಸವಂತಪ್ಪ ಬ ಕೆರಿ ಮತ್ತು ಟೀಮ್ ನಿಂದ ಶುಭಾಶಯಗಳೊಂದಿಗೆ ಅಭಿನಂದನೆಗಳನ್ನು ಸಲ್ಲಿಸಲಾಗಿದೆ.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ……