ಅಕ್ಟೋಬರ್ 1 ರಂದು ನಡೆಯಲಿದೆ ರಾಜ್ಯ ಸರ್ಕಾರಿ ನೌಕರರ ವಿಶೇಷ ಸಭೆ – ಸಭೆಯಲ್ಲಿ ಪಾಲ್ಗೊಂಡು ಯಶಶ್ವಿಗೊಳಿಸಿ ರಾಜ್ಯ ಸಂಘಟನಾ ಕಾರ್ಯದರ್ಶಿ RM ಹೊಲ್ತಿಕೋಟಿ ಕರೆ…..

Suddi Sante Desk
ಅಕ್ಟೋಬರ್ 1 ರಂದು ನಡೆಯಲಿದೆ ರಾಜ್ಯ ಸರ್ಕಾರಿ ನೌಕರರ ವಿಶೇಷ ಸಭೆ – ಸಭೆಯಲ್ಲಿ ಪಾಲ್ಗೊಂಡು ಯಶಶ್ವಿಗೊಳಿಸಿ ರಾಜ್ಯ ಸಂಘಟನಾ ಕಾರ್ಯದರ್ಶಿ RM ಹೊಲ್ತಿಕೋಟಿ ಕರೆ…..

ಧಾರವಾಡ

2023 ಅಕ್ಟೋಬರ್ 1 ರಂದು ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಸರ್ವ ಸದಸ್ಯರ ವಿಶೇಷ ಮಹಾಸಭೆ ಕೊಪ್ಪಳದ ಹಿರೆಸಿಂಧೋಗಿ ರಸ್ತೆಯ ಮಹಾವೀರ ಕಲ್ಯಾಣ ಮಂಟಪದಲ್ಲಿ ಬೆಳಿಗ್ಗೆ 11.00 ಗಂಟೆಗೆ ರಾಜ್ಯಾಧ್ಯಕ್ಷರಾದ ಸಿ ಎಸ್ ಷಡಾಕ್ಷರಿ ರವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.

ವಾಸ್ತವ ಹಾಗೂ ವರ್ಚುವಲ್ ಮೂಲಕ ನಡೆ ಯಲಿದೆ ಸದರಿ ಸಭೆಯಲ್ಲಿ ಸಂಘದ ಬೈಲಾ ಉಪವಿಧಿಗಳು 2022 ರ ಕೆಲವು ಉಪ ವಿಧಿ ಗಳಿಗೆ ತಿದ್ದುಪಡಿ ತರಲು ಉದ್ದೇಶಿಸಿದ್ದು ಸದರಿ ಸಭೆಯಲ್ಲಿ ನಮ್ಮ ತಾಲೂಕಿನ ಎಲ್ಲ ಇಲಾಖೆಗಳ ನೌಕರ ಸಂಘದ ಪದಾಧಿಕಾರಿಗಳು ಅಧಿಕಾರಿ ಗಳು ವೃಂದ ಸಂಘಗಳ ಅಧ್ಯಕ್ಷರು ಪದಾಧಿಕಾರಿ ಗಳು ಹಾಗೂ ನೌಕರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಹಾಗೂ ಕಲಘಟಗಿ ತಾಲೂಕಿನ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ ಆರ್ ಎಂ ಹೊಲ್ತಿಕೋಟಿ ಯವರು ಕೋರಿದ್ದಾರೆ.

ವಿಶೇಷ ಮಹಾಸಭೆಯ ಹೆಚ್ಚಿನ ಮಾಹಿತಿಗೆ ತಾಲೂಕು ಸಂಘದ ಅಧ್ಯಕ್ಷರು ಹಾಗೂ ಪದಾಧಿ ಕಾರಿಗಳು ರಾಜ್ಯ ಸಂಘದ ವ್ಯವಸ್ಥಾಪಕ ರಾಜು ಆರ್ ಕುಮಾರ ಮೋ ನಂ 948140239 ರವರನ್ನು ಸಂಪರ್ಕಿಸಬಹುದು ಎಂದು ರಾಜ್ಯ ಸಂಘಟನಾ ಕಾರ್ಯದರ್ಶಿ ಹಾಗೂ ಕಲಘಟಗಿ ತಾಲೂಕಿನ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ ಆರ್ ಎಂ ಹೊಲ್ತಿಕೋಟಿ ಯವರು ಕೋರಿದ್ದಾರೆ

ಅನಿಲಕುಮಾರ. ಸುದ್ದಿ ಸಂತೆ ನ್ಯೂಸ್ ಧಾರವಾಡ……

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.