ಬೆಂಗಳೂರು –
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಅಧ್ಯಕ್ಷರು ಹಾಗೂ ಪ್ರಧಾನ ಕಾರ್ಯದರ್ಶಿಗಳೇ
2024-25 ನೇ ಸಾಲಿನಲ್ಲಿ ಸರಕಾರ ಹೊಸದಾಗಿ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಮಾಡಲು ಶಿಕ್ಷಣ ಸಚಿವರು ಮುಂದಾಗಿದ್ದಾರೆ ಹೀಗೆ ಹೊರಟಿರುವದಕ್ಕೆ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಬಲವಾಗಿ ವಿರೋಧಿಸಿ ಆಕ್ಷೇಪಣೆ ಸಲ್ಲಿಸಿ PST ಶಿಕ್ಷಕರಿಗೆ ನ್ಯಾಯ ಒದಗಿಸಬೇಕೆಂದು ಒತ್ತಾಯ ಕೇಳಿ ಬಂದಿದೆ.
2016 ಕ್ಕಿಂತ ಮುಂಚೆ ನೇಮಕಾತಿಯಾದ ಶಿಕ್ಷಕರ ಬೇಡಿಕೆಗಳ ಈಡೇರಿಕೆಗೆ ಸಮಿತಿ ಕಾರ್ಯೋನ್ಮುಖವಾ ಗಿರುವಾಗ ತರಾತುರಿಯಲ್ಲಿ 6-8 ಕ್ಕೆ ನೇಮಕಾತಿ ಮಾಡಹೊರಟಿರುವುದು ಸರಿಯಾದ ಕ್ರಮವಲ್ಲ ಎಂಬ ಮಾತುಗಳು ರಾಜ್ಯಾದ್ಯಂತ ಕೇಳಿ ಬರುತ್ತಿವೆ.
ಇದು ಮತ್ತೊಮ್ಮೆ ಶಿಕ್ಷಕರಿಗೆ ಮಾಡುತ್ತಿರುವ ಅನ್ಯಾಯ ವೆಂದೇ ಭಾವಿಸಬಹುದು.2016 ಕ್ಕಿಂತ ಪೂರ್ವದಲ್ಲಿ 1-7/8 ಕ್ಕೆ ನೇಮಕಾತಿಯಾದ ಹಾಗೂ ಪದವಿ ವಿದ್ಯಾರ್ಹತೆ ಹೊಂದಿದ ಶಿಕ್ಷಕರನ್ನು ಸೇವಾಜೇಷ್ಠತೆಯೊಂದಿಗೆ ಪದವೀಧರ GPT (6-8) ಶಿಕ್ಷಕರೆಂದು ಪದನಾಮೀ ಕರಿಸಬೇಕಾದ ಕಾರಣ, ಸದರಿ ಶಿಕ್ಷಕರ ಸಂಖ್ಯೆ ಖಾಲಿ GPT ಹುದ್ದೆಗಳಿಗಿಂತಲೂ ಹೆಚ್ಚಿರುವ ಕಾರಣ ಯಾವುದೇ ಕಾರಣಕ್ಕೂ GPT ಹುದ್ದೆಗಳನ್ನು ನೇಮಕ ಮಾಡಕೂಡದು ಎಂಬ ಒತ್ತಾಯ ಶಿಕ್ಷಕರಿಂದ ಕೇಳಿ ಬಂದಿದೆ
ಇದಕ್ಕೆ ಶಿಕ್ಷಕ ಸಂಘಟನೆ ಕೂಡಲೇ ಆಕ್ಷೇಪಣೆ ಸಲ್ಲಿಸಿ, GPT ಶಿಕ್ಷಕರ ನೇಮಕಾತಿಯನ್ನು ನಿಲ್ಲಿಸಲು ಕ್ರಮ ತೆಗೆದುಕೊಳ್ಳುವರೆಂಬ ವಿಶ್ವಾಸವಿದೆ ಎಂಬ ನಂಬಿಕೆ ಯನ್ನು ರಾಜ್ಯದ ಶಿಕ್ಷಕರು ವ್ಯಕ್ತಪಡಿಸಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..