ಬೆಂಗಳೂರು –
ಈಗಾಗಲೇ ಮತ್ತೆ ಮೂರನೇ ಅಲೆಯ ಅಬ್ಬರ ಹೆಚ್ಚಾಗುತ್ತಿದ್ದು ಅದಕ್ಕಾಗಿ ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಶಾಲೆಗಳಿಗೆ ಸ್ಯಾನಿಟೈಜರ್ ಮಾಸ್ಕ್ ಆರೋಗ್ಯ ಇಲಾಖೆ ನೆರವಿನೊಂದಿಗೆ ವೈದ್ಯಕೀಯ ಸೌಲಭ್ಯ ನೀಡಿ ಹಂತ ಹಂತವಾಗಿ ಶಾಲೆ ಪ್ರಾರಂಭಿ ಸುವುದು ಸೂಕ್ತ.ಇನ್ನೂ ಈಗಾಲೇ ಶಿಕ್ಷಣ ಸಚಿವರು ಆಗಸ್ಟ್ 23 ಕ್ಕೆ ಶಾಲೆ ಪ್ರಾರಂಭಿಸುವುದಾಗಿ ಹೇಳಿ ದ್ದಾರೆ ಅಷ್ಟರೊಳಗಾಗಿ ಸೂಕ್ತ ಮುಂಜಾಗ್ರತಾ ಕ್ರಮ ಗಳನ್ನು ಕೈಗೊಂಡು ಶಾಲೆಗಳನ್ನು ಪ್ರಾರಂಭಿಸಬೇ ಕೆಂದು ಗ್ರಾಮೀಣ ಪ್ರೌಢಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಪವಾಡೆಪ್ಪ ಆಗ್ರಹಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ಮೂಲಕ ರಾಜ್ಯ ಸರ್ಕಾರವನ್ನು ಒತ್ತಾಯ ಮಾಡಿದ್ದಾರೆ