ಬೆಂಗಳೂರು –
ಈಗಾಗಲೇ ಸಾಕಷ್ಟು ಮನವಿಗಳನ್ನು ಸರ್ಕಾರಕ್ಕೆ ನೀಡಲಾಗಿದೆ ಶಿಕ್ಷಕರ ತಾಳ್ಮೆ ಕಟ್ಟೆ ಒಡೆದಿದೆ ಗ್ರಾಮೀಣ ಶಿಕ್ಷಕರಿಗೆ ನಿರಂತರ ಅನ್ಯಾಯ ಮುಂದುವರಿಸಿದ್ದು ಇನ್ನು ಮುಂದೆ ಗ್ರಾಮೀಣ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ಸಂಘಗಳು ಸುಮ್ಮನಿರಲು ಸಾಧ್ಯವಿಲ್ಲ ನಾಳಿನ ಸಭೆಯಲ್ಲಿ ಶಿಕ್ಷಕರ ವರ್ಗಾವಣೆ ಪ್ರಾರಂಭ ಮಾಡಿಸಬೇಕು ಗ್ರಾಮೀಣ ಭತ್ಯೆ ಚರ್ಚೆಯಾಗಬೇಕು ನಮ್ಮ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಕ್ಷರಿ ಅವರ ಮೇಲೆ ಸಾಕಷ್ಟು ಶಿಕ್ಷಕರು ನಂಬಿಕೆ ಇಟ್ಟಿದ್ದಾರೆ.
ಇನ್ನೂ ವರ್ಗಾವಣೆ ವಿಷಯದಲ್ಲಿ ಶಿಕ್ಷಕರು ಸಾಕಷ್ಟು ತಾಳ್ಮೆಯಿಂದ ಇದ್ದು ಸಾಕಾಗಿದೆ ಕಟ್ಟಿದ ತಾಳಿ ಹರಿದು ಹೋಗುವ ಹಂತದಲ್ಲಿ ಇದ್ದು ನಾಳೆ ಯಾವುದೇ ಪರಿಸ್ಥಿತಿ ಯಲ್ಲಿ ಕೊನೆಯ ಹಂತಕ್ಕೆ ಬಂದು ಜಲ್ವಂತ ಶಿಕ್ಷಕರ ಸಮಸ್ಯೆ ಗಳ ಪರಿಹಾರಕ್ಕೆ ಅಂತ್ಯ ಹಾಡಲಿ ಒಂದು ವೇಳೆ ಈ ಸಭೆಯಲ್ಲಿ ಯಾವುದೇ ರೀತಿಯ ವಿಳಂಬ ಧೋರಣೆ ಅನುಸರಿಸಿದರೆ ಗ್ರಾಮೀಣ ಪ್ರಾಥಮಿಕ ಮತ್ತು ಗ್ರಾಮೀಣ ಪ್ರೌಢಶಾಲಾ ಶಿಕ್ಷಕರ ಸಂಘದಿಂದ ಬೃಹತ್ ಪ್ರಮಾಣದಲ್ಲಿ ಹೇೂರಾಟಕ್ಕೆ ಕರೆ ನೀಡಲಾಗುವುದು ಎಂದು ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಅಶೋಕ ಸಜ್ಜನ ಹಾಗೂ ಗ್ರಾಮೀಣ ಪ್ರೌಢಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಪವಾಡೆಪ್ಪ ಅವರು ಹೇಳಿದ್ದಾರೆ
18 ರ ಸಭೆಯಲ್ಲಿ ಶಿಕ್ಷಕರ ವರ್ಗಾವಣೆ ಗಂಭೀರವಾಗಿ ಪರಿಗಣಿಸಿ ಜಂಟಿ ಹೇಳಿಕೆ ನೀಡಿದ ಗ್ರಾಮೀಣ ಪ್ರಾಥಮಿಕ ಮತ್ತು ಗ್ರಾಮೀಣ ಪ್ರೌಢಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷರು ಪವಾಡೆಪ್ಪ ಹಾಗೂ ಅಶೋಕ ಸಜ್ಜನ ಅವರು ಒತ್ತಾಯ ಮಾಡಿದರು