ಮುದಗಲ್ಲ್ –
ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ಮುದಗಲ್ಲ್ ಹೋಬಳಿ ಘಟಕ ರಚನಾ ಸಭೆಯನ್ನು ಭಾನುವಾರ ಸಿ ಆರ್ ಸಿ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿತ್ತು.ಈ ಕಾರ್ಯಕ್ರಮದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಜಿಲ್ಲಾಧ್ಯಕ್ಷರಾದ ಚಿರಂಜೀವಿ ರೋಡಕರ್ ಅವರು ಈ ಪರಿಷತ್ತು ಡಾಕ್ಟರ್ ಹುಲಿಕಲ್ ನಟರಾಜ್ ಅವರ ರಾಜ್ಯಾಧ್ಯಕ್ಷ ತೆಯಲ್ಲಿ ಕರ್ನಾಟಕದ ಎಲ್ಲಾ ಪ್ರಗತಿಪರ ಚಿಂತಕರ ನ್ನು ಒಳಗೊಂಡ ಸಂಸ್ಥೆಯಾಗಿದೆ.
ಗ್ರಾಮೀಣ ಮಟ್ಟದಿಂದಲೂ ನಮ್ಮ ಪರಿಷತ್ತಿಗೆ ಸದಸ್ಯರಿದ್ದಾರೆ.ದೇವರ ಹೆಸರಿನಲ್ಲಿ ಮುಗ್ಧ ಜನರಿಗೆ ಮೋಸ ಮಾಡುತ್ತಿರುವ ಸ್ವಯಂಘೋಷಿತ ಬಾಬಾ, ಸ್ವಾಮಿಗಳು, ಪವಾಡ ಪುರುಷರು ನಡೆಸುತ್ತಿರುವ ಮಾನಸಿಕ ಭಯೋತ್ಪಾದನೆಯ ವಿರುದ್ಧ ನಾವು ಹೋರಾಡಬೇಕಾಗಿದೆ.ಜನರಲ್ಲಿ ವೈಜ್ಞಾನಿಕ ಮನೋ ಭಾವ ಬೆಳೆಸುವಲ್ಲಿ ನಿರತರಾಗಬೇಕಾಗಿದೆ ಎಂದು ಹೇಳಿದರು.ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಶಂಕರ್ ವಾಲಿಕಾರ್ ಅವರು ಮನುಷ್ಯನ ಭಾವನೆ ಯಲ್ಲಿರುವ ನಂಬಿಕೆ ಮತ್ತು ಅಪನಂಬಿಕೆ, ವೈಜ್ಞಾನಿ ಕತೆ ಮತ್ತು ಅವೈಜ್ಞಾನಿಕತೆ ಕುರಿತು ಹೇಳಿ ಇಂದಿನ ದಿನಮಾನದಲ್ಲಿ ಯಾವ ರೀತಿ ಮೂಢನಂಬಿಕೆಗಳಿಗೆ ಒಂದೊಂದು ವೈಜ್ಞಾನಿಕತೆಯ ಲೇಪನವನ್ನು ಪಟ್ಟ ಬದ್ಧ ಹಿತಾಸಕ್ತಿಗಳು ಬಳಿಯುತ್ತಿದ್ದಾರೆ ಎಂದು ತಿಳಿಸಿ ಜನ ಜಾಗೃತಿ ಮಾಡಬೇಕಾಗಿದೆಯೆಂದು ತಿಳಿಸಿದರು.
ಇತಿಹಾಸ ಕಾಲದಿಂದಲೂ ಮೌಡ್ಯತೆ ವಿರುದ್ಧ ಹೋರಾಡಿದ ಮಹನೀಯರ ಕೊಡುಗೆಯನ್ನು ಸ್ಮರಿಸಿದರು. ಲಿಂಗಸುಗೂರು ತಾಲೂಕ ಅಧ್ಯಕ್ಷರಾದ ರುದ್ರಮುನಿ ಗೋರಬಾಳ ಮಾತನಾಡಲಾಗಿ ಜನರ ಮುಗ್ಧತೆಯನ್ನು ಬಂಡವಾಳವಾಗಿರಿಸಿಕೊಂಡು ಹಣ ಸುಲಿಗೆ ಮಾಡುವವರಿಂದ ಜನರನ್ನು ಎಚ್ಚರಿಸುವ ಕೆಲಸ ನಮ್ಮ ಸಂಸ್ಥೆ ಮಾಡುತ್ತಿದೆ ಎಂದರು. ಸಿಂಧನೂರಿನ ಶಿವು ಎಂಬುವರು ಹಲವು ಪವಾಡ ಬಯಲು ಮಾಡುತ್ತ ಅದರ ಹಿಂದಿನ ಸತ್ಯಸತ್ಯತೆ ತಿಳಿಸಿದರು.
ಈ ಸಮಿತಿ ರಚನಾ ಸಭೆಯಲ್ಲಿ ಗೌರವ ಅಧ್ಯಕ್ಷರಾಗಿ ಪ್ರಮೋದ ಬಡಿಗೇರ್,ಗೌರವ ಅಧ್ಯಕ್ಷರಾಗಿ ರಾಮ ಚಂದ್ರ ಢವಳೇ, ಅಧ್ಯಕ್ಷರಾಗಿ ಮಹಮ್ಮದ್ ರಫಿ, ಉಪಾಧ್ಯಕ್ಷರಾಗಿ ಶಿವರಾಜ್ ತಳವಾರ್,ಸುನಂದಾ ಮೋದಿ, ಪ್ರಧಾನ ಕಾರ್ಯದರ್ಶಿಯಾಗಿ ಬಂಗಾ ರಮ್ಮ,ಖಜಾಂಚಿಯಾಗಿ ಉಮೇಶ್ ರೇವಳಮಠ, ಸಹ ಕಾರ್ಯದರ್ಶಿಯಾಗಿ ಶ್ರೀನಿವಾಸ್, ಸಂಘ ಟನಾ ಕಾರ್ಯದರ್ಶಿಯಾಗಿ ಸಲ್ಮಾನ್ ಪಹಡವಾಲ, ಸಂಚಾಲಕರಾಗಿ ಅಕ್ಕಮಹಾದೇವಿ, ರಫಿ ತೆಗ್ಗಿ, ನಿರ್ದೇಶಕರಾಗಿ ಹುಲುಗಪ್ಪ, ಸಲೀಂ ಪಾಸಾ, ಗಣೇಶ್ ,ಆದಪ್ಪ,ಮಹಾಂತೇಶ್,ಈ ಹೋಬಳಿ ಘಟಕದ ಮೇಲ್ವಿಚಾರಕರಾಗಿ ಶರಣಬಸವ ಬನ್ನಿಗೋಳ,ರಿಯಾಜ್ ಶಿಕ್ಷಕರು ಸರ್ವಾನುಮತ ದಿಂದ ಆಯ್ಕೆಯಾಗಿದ್ದಾರೆ, ಈ ಕಾರ್ಯಕ್ರಮದಲ್ಲಿ ಜಿಲ್ಲಾ ಉಪಾಧ್ಯಕ್ಷರಾದ ಮಲ್ಲಿಕಾರ್ಜುನ ವೀರಾಪುರ,ತಾಲೂಕ ಖಜಾಂಚಿ ಗಳಾದ ಶಾಮಿಲಿ ಅಲಿ,ಶಿಕ್ಷಕರಾದ ರವಿ ಟಂಕಸಾಲಿ, ಮಲ್ಲಿಕಾರ್ಜುನ ಕೆಂಚರೆಡ್ಡಿ ಮುಂತಾದವರು ಉಪಸ್ಥಿತರಿದ್ದರು