ಬೆಂಗಳೂರು –
ಕರೋನಾ ಎರಡನೇಯ ಮಹಾಮಾರಿಯನ್ನು ಕಟ್ಟಿ ಹಾಕುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ರಾಜ್ಯದಲ್ಲಿ ಸೋಮವಾರಿಂದ ಸಂಪೂರ್ಣವಾಗಿ ಲಾಕ್ ಡೌನ್ ಮಾಡಲು ನಿರ್ಧರಿಸಲಾಗಿದೆ. ಹೌದು ದಿನದಿಂದ ದಿನಕ್ಕೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿ ರುವ ಹಿನ್ನಲೆಯಲ್ಲಿ ರಾಜ್ಯದಲ್ಲಿ ಸೋಮವಾರ ಅಂದರೆ ಮೇ 10 ರಿಂದ ರಾಜ್ಯವನ್ನು ಸಂಪೂರ್ಣ ವಾಗಿ ಲಾಕ್ ಡೌನ್ ಮಾಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು.

ಬೆಂಗಳೂರಿನಲ್ಲಿ ಮಾತನಾಡಿದ ಅವರು ಇದೊಂದು ತಾತ್ಕಾಲಿಕವಾರುವ ಲಾಕ್ ಡೌನ್ ಆಗಿದ್ದು ಹೀಗಾಗಿ ನಮ್ಮೊಂದಿಗೆ ಸಹಕರಿಸುವಂತೆ ಯಡಿಯೂರಪ್ಪ ಹೇಳಿದರು.ಸೋಮವಾರದಿಂದ ಆರಂಭವಾಗಲಿ ರುವ ಲಾಕ್ ಡೌನ್ ನಲ್ಲಿ
ಇವುಗಳಿಗೆ ಅವಕಾಶ ನೀಡಲಾಗಿದೆ
ಬೆಳಿಗ್ಗೆ 6 ಗಂಟೆಯಿಂದ 10 ಗಂಟೆಯವರೆಗೆ ದಿನಸಿ ಅಂಗಡಿ ಮತ್ತು ತರಕಾರಿ ಮಾರುಕಟ್ಟೆಗೆ ಅವಕಾಶ
ಆಸ್ಪತ್ರೆ ವೈಧ್ಯಕೀಯ ಚಿಕಿತ್ಸೆಗೆ ಜನರಿಗೆ ಸಂಚಾರಕ್ಕೆ ಅವಕಾಶ ಸರ್ಕಾರಿ ಕಚೇರಿಗಳು ಭಾಗಶಃ ಕಾರ್ಯ ನಿರ್ವಹಿಸಲಿವೆ.ರಸ್ತೆ ಕಾಮಗಾರಿ ಕಟ್ಟಡ ನಿರ್ಮಾಣ ಕ್ಕೆ ಅವಕಾಶ.ವಿವಾಹಕ್ಕೆ 50 ಜನರಿಗೆ ಅವಕಾಶ ಕಟ್ಟು ನಿಟ್ಟಿನ ಕ್ರಮಗಳ ನಡುವೆ ಮಾಡಬೇಕು
ಹೊಟೇಲ್ ಮತ್ತು ಮಧ್ಯದ ಅಂಗಡಿಗಳಿಗೆ ಪಾರ್ಸ ಲ್ ವ್ಯವಸ್ಥೆ ಹಾಲಿನ ಭೂತ್ ಗಳಿಗೆ ಸಂಜೆಯವರೆಗೆ ತೆರೆಯಲು ಅವಕಾಶ



ಯಾವುದಕ್ಕೆ ನಿರ್ಭಂಧ
ಬಾರ್ ಮತ್ತು ರೆಸ್ಟೊರೆಂಟ್ ಗಳ ಬಂದ್
ಅಂತರ್ ಜಿಲ್ಲಾ ಸಂಚಾರವಿಲ್ಲ
ಕೈಗಾರಿಕೆಗಳಿಗೆ ಷರತ್ತು ಬದ್ದ ಆರಂಭಕ್ಕೆ ಸೂಚನೆ ಇನ್ನೂಳಿದಂತೆ ಕೆಲ ಹಳೇಯ ಸಂಪೂರ್ಣ ಚಟುವ ಟಿಕೆಗಳು ಸಂಪೂರ್ಣ ಬಂದ್ ಉಳಿದಂತೆ ಎಲ್ಲವೂಗಳಿಗೆ ನಿರ್ಭಂಧವನ್ನು ವಿಧಿಸಲಾಗಿದೆ.
ಇನ್ನೂ ಇದೇ ವೇಳೆ ಇದೊಂದು ತಾತ್ಕಾಲಿಕವಾದ ಲಾಕ್ ಡೌನ್ ನಿರ್ಧಾರವಾಗಿದ್ದು ಇದಕ್ಕೆ ಎಲ್ಲರೂ ಸಹಕಾರವನ್ನು ಕೊಡುವಂತೆ ಮುಖ್ಯಮಂತ್ರಿ ಯಡಿಯೂರಪ್ಪ ನಾಡಿನ ಜನರಿಗೆ ವಿನಂತಿಯನ್ನು ಮಾಡಿಕೊಂಡರು. ಹಾಗೇ ಬೆಂಗಳೂರಿನಲ್ಲಿರುವ ಕಾರ್ಮಿಕರಿಗೆ ಯಾವುದೇ ಕಾರಣಕ್ಕೂ ಬೆಂಗಳೂರ ನ್ನು ಬಿಟ್ಟು ಹೊಗಬೇಡಿ ಎಂದು ವಿನಂತಿಯನ್ನು ಮಾಡಿಕೊಂಡರು. ಒಟ್ಟಾರೆ ಸೋಮವಾರದಿಂದ ರಾಜ್ಯವೂ ಸಂಪೂರ್ಣವಾಗಿ ಲಾಕ್ ಡೌನ್ ಆಗಲಿ ದ್ದು ಕೆಲವು ಚಟುವಟಿಕೆಗಳಿಗೆ ಅನುಕೂಲ ಮಾಡಿ ಕೊಡಲಾಗಿದ್ದು ಇನ್ನೂ ಕೆಲ ಚಟುವಟಿಕೆಗಳಿಗೆ ಸಂಪೂರ್ಣವಾಗಿ ಕಡಿವಾಣ ಹಾಕಿ ರಾಜ್ಯ ಸರ್ಕಾರ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.