ಹುಬ್ಬಳ್ಳಿ –
ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ಸಾಂಸ್ಕೃತಿಕ ಮಹೋತ್ಸವ ಹಾಗೂ ಕ್ಷಮತಾ ಸೇವಾ ಸಂಸ್ಥೆ ಸಹಯೋಗದಲ್ಲಿ ಜನವರಿ 21,22 ಎರಡು ದಿನಗಳ ಕಾಲ ಅಂತರಾಷ್ಟ್ರೀಯ ಗಾಳಿ ಪಟ ಹಾಗೂ ಸಾಂಸ್ಕೃತಿಕ ಉತ್ಸವ ಹುಬ್ಬಳ್ಳಿಯ ಜೆ.ಕೆ. ಶಾಲೆ ಮಾರ್ಗ ವೆಂಕಟರಮಣ ದೇವಸ್ಥಾನ ಎದುರಿಗೆ ಹಮ್ಮಿಕೊಳ್ಳಲಾಗಿದೆ ಎಂದು ಕ್ಷಮತಾ ಸೇವಾ ಸಂಸ್ಥೆಯ ಸಂಚಾಲಕ ಗೋವಿಂದ ಜೋಶಿ ಹೇಳಿದರು.
ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದ ಅವರು ಕಳೆದ ನಾಲ್ಕು ವರ್ಷದಿಂದ ಗಾಳಿಪಟ ಉತ್ಸವ ಮಾಡಲಾಗುತ್ತಿದೆ.ಇದರ ಜೊತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಸಹ ಏರ್ಪಡಿಸಲಾಗಿದೆ.ಗಾಳಿಪಟದ ಉತ್ಸವದಲ್ಲಿ ಲಂಡನ್,ಇಂಗ್ಲೆಂಡ್,ಅಮೇರಿಕಾ,ಪ್ರಾನ್ಸ್ ಸೇರಿ ಒಟ್ಟು 15 ದೇಶದ 25 ಸ್ಪರ್ಧಿಗಳು ಭಾಗವಹಿಸ ಲಿದ್ದಾರೆ ಎಂದರು.
ಎಲ್ಲಾ ವಯಸ್ಸಿನವರು ಕುಟುಂಬ ಸಮೇತ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ. ದೇಶಿಯ ಕ್ರೀಡೆಗಳನ್ನು ಪ್ರೋತ್ಸಾಹಿಸುವ ನಿಟ್ಟಿ ನಲ್ಲಿ ಉತ್ಸವ ಏರ್ಪಡಿಸಲಾಗಿದೆ ಎಂದರು. ಜನವರಿ 21 ರಂದು ಬೆಳಿಗ್ಗೆ 10:30 ಕ್ಕೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಉದ್ಘಾಟಿಸಲಿದ್ದಾರೆ ಅಧ್ಯಕ್ಷತೆಯನ್ನು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ,ಅತಿಥಿಗಳಾಗಿ ಸಭಾಪತಿ ಬಸವರಾಜ ಹೊರಟ್ಟಿ,ಸಚಿವ ಶಂಕರ ಪಾಟೀಲ ಮುನೇನ ಕೊಪ್ಪ, ಶಾಸಕರಾದ ಅರವಿಂದ ಬೆಲ್ಲದ,ಅಮೃತ ದೇಸಾಯಿ ಭಾಗವಹಿಸುವರು ಎಂದರು
ಬೆಳಿಗ್ಗೆ 11 ಗಂಟೆಗೆ 9 ರಿಂದ 12 ತರಗತಿ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಪ್ರಧಾನಿ ಮೋದಿಯ ವರ ಬರೆದಿರುವ ಎಕ್ಸಾಮ ವಾರಿಯಸ್೯ ವಿಷಯದ ಕುರಿತು ಪರೀಕ್ಷಾ ಪೇ ಚರ್ಚೆಗೆ ಸಚಿವ ಮುನಿರತ್ನ ಚಾಲನೆ ನೀಡುವರು.ಸಭಾಪತಿ ಬಸವರಾಜ ಹೊರಟ್ಟಿ ಅವರು ಬಹುಮಾನ ವಿತರಿಸುವರು ಎಂದು ತಿಳಿಸಿದರು.
ಜನವರಿ 22 ರಂದು 12:30 ಕ್ಕೆ ದೇಸಿ ಕ್ರೀಡೆಗಳಿಗೆ ಶಾಸಕ ಅಮೃತ ದೇಸಾಯಿ ಚಾಲನೆ ನೀಡುವರು. ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಸಚಿವ ಸಿ.ಸಿ. ಪಾಟೀಲ ಚಾಲನೆ ನೀಡಲಿದ್ದಾರೆ ಹಾಗೂ ಪಿ.ರಾಜೀವ ಭಾಗವಹಿಸುವರು ಎಂದರು.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..