ಬೀದರ್ –
ಪ್ರಾಥಮಿಕ ಶಾಲಾ ಶಿಕ್ಷಕರ ವಿವಿಧ ಬೇಡಿಕೆಗಳನ್ನು ಈಡೇರಿ ಸಲು ರಾಜ್ಯ ಸರ್ಕಾರದ ಮೇಲೆ ಒತ್ತಡ ತರಲಾಗುವುದು ಎಂದು ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಅಧ್ಯಕ್ಷ ಶಂಭುಲಿಂಗನಗೌಡ ಪಾಟೀಲ ಹೇಳಿದರು. ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕವು ಬೀದರ್ ನ ಪ್ರತಾಪನಗರದ ರಾಜ್ಯ ಸರ್ಕಾರಿ ನೌಕರರ ಸಮುದಾಯ ಭವನದಲ್ಲಿ ಆಯೋಜಿ ಸಿದ್ದ ನಾಯಕತ್ವ ಬೆಳವಣಿಗೆ ಕಾರ್ಯಾಗಾರ ಹಾಗೂ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾ ಡಿದರು.ಶೇ 25 ರಷ್ಟು ಹುದ್ದೆ ಖಾಲಿ ಇರುವ 52 ತಾಲ್ಲೂಕು ಗಳ ಶಿಕ್ಷಕರ ವರ್ಗಾವಣೆಗೂ ಅವಕಾಶ ಕಲ್ಪಿಸಬೇಕೆಂದು ಒತ್ತಾಯವನ್ನು ಮಾಡಿದರು.
ಇನ್ನೂ ನೂತನ ಪಿಂಚಣಿ ಯೋಜನೆ ರದ್ದುಪಡಿಸಿ ಹಳೆಯ ಪಿಂಚಣಿ ಯೋಜನೆಯನ್ನೇ ಮುಂದುವರಿಸಬೇಕು.ವಿಶೇಷ ನೇಮಕಾತಿ ಮೂಲಕ ಕಲ್ಯಾಣ ಕರ್ನಾಟಕದಲ್ಲಿನ ಶಿಕ್ಷಕರ ಖಾಲಿ ಹುದ್ದೆಗಳನ್ನು ಭರ್ತಿ ಮಾಡಬೇಕು.ರಾಜ್ಯದಲ್ಲಿ ಖಾಲಿ ಇರುವ 31 ಸಾವಿರ ಹುದ್ದೆಗಳನ್ನು ತುಂಬಬೇಕು.ಕೇಂದ್ರ ನೌಕರರಿಗೆ ಸರಿ ಸಮನಾದ ವೇತನ ಕೊಡಬೇಕು.ಹಾಗೆ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರಿಗಾಗಿಯೇ ಪ್ರತ್ಯೇಕ ವೇತನ ಆಯೋಗ ರಚಿಸಬೇಕು.ಶಿಕ್ಷಕರ ಮೇಲಿನ ವಿವಿಧ ಇಲಾಖೆಗಳ ಕಾರ್ಯಭಾರ ಕಡಿಮೆ ಮಾಡಬೇಕು ಎಂದು ಒತ್ತಾಯಿಸಿದರು.
ಶಿಕ್ಷಕರ ನ್ಯಾಯಯುತ ಬೇಡಿಕೆಗಳಿಗಾಗಿ ಬರುವ ದಿನಗಳಲ್ಲಿ ಹಂತ ಹಂತವಾಗಿ ಹೋರಾಟ ನಡೆಸಲಾಗುವುದುಸಂಘವು ನಿರಂತರ ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸುತ್ತ ಬಂದಿದೆ ಎಂದು ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಚಂದ್ರಶೇ ಖರ ನುಗ್ಲಿ ಹೇಳಿದರು.ಹೊಸ ತಾಲ್ಲೂಕುಗಳಲ್ಲಿ ಬಿಇಒ ಕಚೇರಿ ಆರಂಭ ಸೇರಿದಂತೆ ಶಿಕ್ಷಕರ ಸಮಸ್ಯೆ ಕುಂದು ಕೊರತೆಗಳನ್ನು ಶಿಕ್ಷಣ ಸಚಿವರ ಗಮನಕ್ಕೆ ತರಲಾಗುವುದು ಎಂದರು.
ಸಂಘದ ಕಲಬುರಗಿ ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಯ್ಯ ಗುತ್ತೇದಾರ್,ಯಾದಗಿರಿ ಜಿಲ್ಲಾ ಘಟಕದ ಅಧ್ಯಕ್ಷ ರಾಘ ವೇಂದ್ರ,ಬೀದರ್ ಜಿಲ್ಲಾ ಘಟಕದ ಉಪಾಧ್ಯಕ್ಷ ಪಂಢರಿ ಆಡೆ,ತಾಲ್ಲೂಕು ಘಟಕಗಳ ಅಧ್ಯಕ್ಷರಾದ ರಾಜು ಸಾಗರ, ಗಜಾನನ ಮಳ್ಳಾ,ಮುರುಗೇಂದ್ರ ಸಂಗಶೆಟ್ಟಿ,ಬಸವರಾಜ ಪಾಟೀಲ,ಸೂರ್ಯಕಾಂತ ಸುಂಟೆ,ಜಗನ್ನಾಥ ಪತಂಗೆ, ರಾಜಪ್ಪ ಜಮಾದಾರ್,ರಾಜಪ್ಪ ನಂದೋಡೆ,ಯೋಗ ಸಾಧಕ ಯೋಗೇಂದ್ರ ಯದಲಾಪೂರೆ, ಬಾಬುಕುಮಾರ, ಡೇವಿಡ್,ರಾಜಪ್ಪ ಪಾಟೀಲ,ಶಿವಶರಣಪ್ಪ ಹಣಮಶೆಟ್ಟಿ, ವಿಜಯಕುಮಾರ ಸೋನಾರೆ,ಬಸಯ್ಯ ಸ್ವಾಮಿ, ವೆಂಕಟ ರೆಡ್ಡಿ ಕೋಪಗಿರ,ಕಾಶೀನಾಥ ಚಲುವಾ, ಬಾಬುರಾವ್ ಮೆಹಕರ್, ಸುನಿತಾ ಮಮ್ಮಾ,ಜಿಲ್ಲಾ,ತಾಲ್ಲೂಕು ಘಟಕಗಳ ಪದಾಧಿಕಾರಿಗಳು, ಶಿಕ್ಷಕರು ಇದ್ದರು.ಸಂಘದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಪ್ರಭುಲಿಂಗ ತೂಗಾವೆ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಸಹ ಕಾರ್ಯದರ್ಶಿ ಅಬ್ದುಲ್ ಸತ್ತಾರ್ ನಿರೂಪಿಸಿದರು. ಮನೋಹರ ಕಾಶಿ ವಂದಿಸಿದರು.