ನವಲಗುಂದ –
ಹೌದು ಧಾರವಾಡ ಜಿಲ್ಲೆಯ ನವಲಗುಂದ ವಿಧಾನ ಸಭಾ ಕ್ಷೇತ್ರದಲ್ಲಿ ಶಾಸಕ ಎನ್ ಹೆಚ್ ಕೋನರೆಡ್ಡಿಯವರ ಕನಸಿನ ಕಾರ್ಯಕ್ರಮ ವೊಂದು ಇಂದು ನಡೆಯಲಿದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಗಣ್ಯಾತಿ ಗಣ್ಯರು ಈ ಒಂದು ಐತಿಹಾಸಿಕ ಸಮಾರಂಭಕ್ಕೆ ಸಾಕ್ಷಿಯಾಗಲಿ ದ್ದಾರೆ
ಇನ್ನೂ ಕಾರ್ಯಕ್ರಮಕ್ಕೆ ಬಂದವರಿಗೆ ಹೊಟ್ಟೆ ತುಂಬಾ ಸ್ಪೆಶಲ್ ಗೋದಿಹುಗ್ಗಿ ಅಣ್ಣಾ ಸಾಂಬಾರ್ ಮಾಡಿಸುತ್ತಿದ್ದಾರೆ Mla NH ಕೋನರೆಡ್ಡಿ ಯವರು ನವಲಗುಂದ ದ ಐತಿಹಾಸಿಕ ಕಾರ್ಯ ಕ್ರಮಕ್ಕೆ ಸಿದ್ದವಾಗುತ್ತಿದೆ ಉತ್ತರ ಕರ್ನಾಟಕದ ವಿಶೇಷ ಊಟ
24/02/2024 ರ ಸಂಜೆ 4 ಗಂಟೆಗೆ ನವಲಗುಂದ ವಿಧಾನಸಭಾ ಮತಕ್ಷೇತ್ರದ ನವಲಗುಂದ ನಗರದ ಮಾಡೆಲ್ ಹೈಸ್ಕೂಲ್ ಮೈದಾನದಲ್ಲಿ ಬಡವರ ಮಾದರಿ ವಸತಿ ಬಡಾವಣೆಗೆ ವಸತಿ ರಹಿತರಿಗೆ ಹಕ್ಕುಪತ್ರಗಳನ್ನು ವಿತರಿಸುವ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಕಟ್ಟಡಗಳ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ
ಈ ಒಂದು ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಾಗೂ ಗೌರವಾನ್ವಿತ ಸಚಿವ ಮಿತ್ರರುಗಳು ಆಗಮಿಸುತ್ತಿದ್ದು ಇನ್ನೂ ಸುತ್ತ ಮುತ್ತಲಿಂದ ಆಗಮಿಸುತ್ತಿರುವ ಸಾವಿರಾರು ಸಾರ್ವಜನಿಕರಿಗೆ ಕಲ್ಪಿಸಲಾಗಿರುವ ಊಟದ ವ್ಯವಸ್ಥೆಯನ್ನು ಮಾಡಲಾಗಿದ್ದು ವಿಶೇಷವಾಗಿ ಗೋದಿಹುಗ್ಗಿ ಬದನೆಕಾಯಿ ಪಲ್ಯ ಅಣ್ಣಾ ಸಾಂಬಾರ್ ಸಿದ್ದವಾಗುತ್ತಿದೆ.
ಸುದ್ದಿ ಸಂತೆ ನ್ಯೂಸ್ ನವಲಗುಂದ…..