ಬೆಂಗಳೂರು –
ಮಧ್ಯರಾತ್ರಿ ಶಿಕ್ಷಣ ಸಚಿವರಿಗೆ ಪೊನ್ ಮಾಡಿದ ವಿದ್ಯಾರ್ಥಿ – ಮಧ್ಯರಾತ್ರಿ ಮಾಡಿದ ವಿದ್ಯಾರ್ಥಿ ಯ ಪೊನ್ ಕಾಲ್ ಗೆ ಸ್ಪಂದಿಸಿ ನೆರವಾದ ಶಿಕ್ಷಣ ಸಚಿವರ ಕಾರ್ಯವೈಖರಿಗೆ ಮೆಚ್ಚುಗೆ
ದ್ವಿತೀಯ ಪಿಯುಸಿ ವಿದ್ಯಾರ್ಥಿಯೊರ್ವ ಮಧ್ಯ ರಾತ್ರಿ ಶಿಕ್ಷಣ ಸಚಿವರಿಗೆ ಪೊನ್ ಕಾಲ್ ಮಾಡಿ ಸಮಸ್ಯೆ ಹೇಳಿಕೊಂಡಿದ್ದಾನೆ.ಹೌದು ರಾಜ್ಯ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಅವರಿಗೆ ವಿಶೇಷಚೇತನ ವಿದ್ಯಾರ್ಥಿಯೊರ್ವ ಪೊನ್ ಕಾಲ್ ಮಾಡಿದ್ದಾನೆ.
ಇನ್ನೂ ತಡರಾತ್ರಿ ಪೊನ್ ಕಾಲ್ ಮಾಡಿದರು ಕೂಡಾ ಇವರ ಕಾರ್ಯವೈಖರಿ ಬಗ್ಗೆ ರಾಷ್ಟ್ರಮಟ್ಟ ದಲ್ಲಿ ಸಚಿವರ ಕಾರ್ಯವೈಖರಿಗೆ ಮೆಚ್ಚುಗೆವ್ಯಕ್ತ ವಾಗಿದೆ.ದ್ವಿತೀಯ ಪಿಯುಸಿಯ ದೃಷ್ಟಿ ವಿಶೇಷ ಚೇತನ ವಿದ್ಯಾರ್ಥಿಯೊಬ್ಬರು ರಾತ್ರೋರಾತ್ರಿ ಶಿಕ್ಷಣ ಸಚಿವ ಬಿಸಿ ನಾಗೇಶ್ ಅವ್ರಿಗೆ ಫೋನ್ ಮಾಡಿದ್ದು ಆತನಿಗೆ ಸಚಿವರು ಪಾಸಿಟಿವ್ ಆಗಿ ರೆಸ್ಪಾನ್ಸ್ ಮಾಡಿದ್ದಾರೆ.
ಬಳ್ಳಾರಿ ಮೂಲದ ವಿಧ್ಯಾರ್ಥಿಯೊಬ್ಬರಿಗೆ ಲಿಪಿಕಾರ ಅಂದ್ರೆ ವಿದ್ಯಾರ್ಥಿ ಹೇಳಿದ್ದನ್ನು ಬರೆದುಕೊಡುವರರು ಕಾರಣಾಂತರದಿಂದ ಪರೀಕ್ಷೆ ಬರೆಯಲು ಬರಲ್ಲ ಅಂತ ಹೇಳಿದ್ದಾರೆ. ಬೆಳಿಗ್ಗೆ ಪರೀಕ್ಷೆಯಿದೆ. ಆದ್ರೆ ರಾತ್ರಿ ಲಿಪಿಕಾರ ಬರಲ್ಲ ಅಂತ ಹೇಳಿದ್ದಾರೆ.
ಇದರಿಂದ ಆತಂಕಕ್ಕೀಡಾದ ವಿದ್ಯಾರ್ಥಿ ಹಾಗೂ ಅವರ ಪೋಷಕರು ಸ್ಥಳೀಯ ಶಿಕ್ಷಣ ಅಧಿಕಾರಿ ಗಳಿಗೆ ಫೋನ್ ಮಾಡಿದ್ದಾರೆ. ಬೇರೆ ಲಿಪಿಕಾರ ನನ್ನು ರೆಡಿ ಮಾಡೋದು ದೀರ್ಘ ಪ್ರಕ್ರಿಯೆ ಆಗುತ್ತೆ ಅಂತ ಅಧಿಕಾರಿಗಳು ಹೇಳಿದ್ದಾರೆ. ಇದರ ಬೆನ್ನಲ್ಲೇ ರಾಜ್ಯದ ಶಿಕ್ಷಣ ಸಚಿವರಿಗೆ ಆ ವಿದ್ಯಾರ್ಥಿ ಕುಟುಂಬ ಕಾಲ್ ಮಾಡಿ ಸಮಸ್ಯೆ ಹೇಳಿಕೊಂಡಿ ದ್ದಾನೆ. ಆರಂಭದಲ್ಲಿ ಫೋನ್ ಮಾಡೋ ಟೈಮಾ ಇದು ಅಂತ ಹಾಗೇ ಹೀಗೆ ಅಂತ ರೇಗಿದ ಬಿ.ಸಿ ನಾಗೇಶ್ ಅವರು ನಂತರ ವಿದ್ಯಾರ್ಥಿ ಹೇಳಿದ ವಿಷಯ ತಿಳಿದು ಬಳಿಕ ಶಾಂತರಾಗಿ ಸೂಕ್ತ ಸ್ಪಂದನೆ ನೀಡಿದ್ದಾರೆ.
ಕರ್ನಾಟಕ ಶಾಲಾ ಪರೀಕ್ಷಾ ಮತ್ತು ಮೌಲ್ಯಮಾ ಪನ ಮಂಡಳಿಯ ಪರೀಕ್ಷಾ ನಿರ್ದೇಶಕರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.ಬಳಿಕ ಎಲ್ಲಾ ಅಧಿಕಾರಿಗಳು ರಾತ್ರಿ 2.30ಕ್ಕೆ ಕಾನ್ಫರೆನ್ಸ್ ಕಾಲ್ ಮಾಡಿ, ಬೆಳಿಗ್ಗೆ ಪರೀಕ್ಷೆಗೂ ಮೊದಲು ಎಲ್ಲಾ ಪ್ರಕ್ರಿಯೆ ಮುಗಿಸಿದ್ದಾರೆ.ವಿದ್ಯಾರ್ಥಿ ಹೊಸ ಲಿಪಿಕಾರನೊಂದಿಗೆ ಪರೀಕ್ಷೆ ಬರೆದಿದ್ದಾನೆ.
ಇನ್ನೂ ಮಧ್ಯರಾತ್ರಿ ಸಚಿವರ ಕೆಲಸಕ್ಕೆ ಅದರಲ್ಲೂ ಇಲಾಖೆಯ ಅಧಿಕಾರಿಗಳ ಕಾರ್ಯಕ್ಕೆ ಎಲ್ಲರಿಂದ ಲೂ ಮೆಚ್ಚುಗೆ ವ್ಯಕ್ತವಾಗಿದೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..