ದಾವಣಗೆರೆ –
ಕಾಲೇಜು ಆರಂಭದ ದಿನವೇ ವಿದ್ಯಾರ್ಥಿಗಳು ದಾವಣಗೇರಿಯಲ್ಲಿ ಪ್ರತಿಭಟನೆ ಮಾಡಿದ್ದಾರೆ.ಹೌದು ಕೆಲ ಶಿಕ್ಷಕರನ್ನ ಕಾಲೇಜಿನಿಂದ ತಗೆದು ಹಾಕಿದ್ದಾರೆಂದು ಆರೋಪಿಸಿ ವಿದ್ಯಾರ್ಥಿಗಳು ಕಾಲೇಜಿನ ಮುಂದೆ ಪ್ರತಿಭಟನೆ ಮಾಡಿದರು.
ದಾವಣಗೆರೆ ನಗರದ ಬಾಡಾ ಕ್ರಾಸ್ ಬಳಿ ಇರುವ ಜೈನ್ ಕಾಲೇಜಿನಲ್ಲಿ ಇಬ್ಬರು ಉಪಸ್ಯಾಸಕರನ್ನು ತೆಗೆದಿದ್ದಾರಂತೆ. ಕಾಲೇಜಿಗೆ ವಿದ್ಯಾರ್ಥಿಗಳು ಬರುತ್ತಿದ್ದಂತೆ ಶಿಕ್ಷಕರನ್ನು ತಗೆದ ವಿಷಯ ತಿಳಿದ ವಿದ್ಯಾರ್ಥಿಗಳು ಆಡಳಿತ ಮಂಡಳಿಯ ವಿರುದ್ದ ಪ್ರತಿಭಟನೆ ಮಾಡಿದರು.
ಕಾಲೇಜಿನ ಮುಂದೆ ವರ್ಗಗಳನ್ನು ಬಹಿಷ್ಕರಿಸಿ ಹೋರಾಟ ಮಾಡಿದರು.ಕೂಡಲೇ ಸೇವೆಗೆ ತೆಗೆದುಕೊಳ್ಳುವಂತೆ ಆಗ್ರಹವನ್ನು ವಿದ್ಯಾರ್ಥಿಗಳು ಮಾಡಿದರು. ಇನ್ನೂ ಕಾಲೇಜು ಆರಂಭ ದಿನವೇ ಹೋರಾಟಕ್ಕಿಳಿದ ವಿದ್ಯಾರ್ಥಿಗಳ ಪ್ರತಿಭಟನೆಗೆ ಆಡಳಿತ ಮಂಡಳಿಯವರು ಕ್ಯಾರೆ ಎನ್ನದೇ ಸುಮ್ಮನಿದ್ದರು.
ಶಿಕ್ಷಕರನ್ನು ತೆಗೆದು ಹಾಕಿದದ ಕಾಲೇಜು ಆಡಳಿತ ಮಂಡಳಿ ವಿರುದ್ದ ಘೋಷಣೆಗಳನ್ನು ಕೂಗಿದರು. ಆಡಳಿತ ಮಂಡಳಿ ನಿರ್ಧಾರವನ್ನು ವಿರೋಧಿಸಿ ತರಗತಿ ಬಹುಷ್ಕರಿಸಿ ಪ್ರತಿಭಟನೆ ಮಾಡಿದರು ಸ್ಪಂದಿಸದ ದಾವಣಗೆರೆ ಜೈನ್ ಕಾಲೇಜ್ ಮುಖ್ಯಸ್ಥರ ವಿರುದ್ದ ವಿದ್ಯಾರ್ಥಿಗಳು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.
ತೆಗೆದ ಶಿಕ್ಷಕರನ್ನು ಕೂಡಲೇ ಸೇವೆಗೆ ತೆಗೆದುಕೊಳ್ಳುವಂತೆ ವಿದ್ಯಾರ್ಥಿಗಳು ಆಗ್ರಹವನ್ನು ಮಾಡಿದರು. ಇನ್ನೂ ಕಾಲೇಜು ಆರಂಭದ ಮೊದಲನೇಯ ದಿನವೇ ವಿಘ್ನ ಶುರುವಾಗಿದ್ದು ಕಾಲೇಜು ಆಡಳಿತ ಮಂಡಳಿಯವರು ಮುಂದೇನು ಮಾಡ್ತಾರೆ ಎಂಬುದನ್ನು ಕಾದು ನೋಡಬೇಕಿದೆ.