ಮೈಸೂರು –
ಆನ್ ಲೈನ್ ಕ್ಲಾಸ್ ಗಾಗಿ ಮೊಬೈಲ್ ಅವಶ್ಯಕವಾ ಗಿದ್ದು ಇದನ್ನು ತಗೆದುಕೊಳ್ಳಬೇಕೆಂದರೆ ಬಡತನ. ಹೀಗಿರುವಾಗ ಮೈಸೂರಿನಲ್ಲಿ ಒರ್ವ ಹತ್ತನೇಯ ತರಗತಿಯ ವಿದ್ಯಾರ್ಥಿನಿಯೊಬ್ಬಳು ತರಕಾರಿ ಮಾರಾಟ ಮಾರಾಟ ಮಾಡುತ್ತಿದ್ದಾಳೆ.
ಹೌದು ಹತ್ತನೇಯ ತರಗತಿಯಲ್ಲಿ ಓದುತ್ತಿರುವ ಕೀರ್ತಿನಿ ಎಂಬ ವಿದ್ಯಾರ್ಥಿನಿಯೇ ಆನ್ ಲೈನ್ ಕ್ಲಾಸ್ ಮೊಬೈಲ್ ಗಾಗಿ ತರಕಾರಿ ಮಾರಾಟ ಮಾಡುತ್ತಿದ್ದಾರೆ.ಮೊಬೈಲ್ ಖರೀದಿಗಾಗಿ ಸೊಪ್ಪು ಮಾರಾಟಕ್ಕೆ ಕುಳಿತಿದ್ದಾಳೆ ಈ ವಿದ್ಯಾರ್ಥಿನಿ.ಕರೊನಾ ಸಂಕಷ್ಟಕ್ಕೆ ಸಿಲುಕಿದೆ ಮೈಸೂರಿನಲ್ಲಿ ಈ ಒಂದು ಕುಟುಂಬ.ಆನ್‌ಲೈನ್ ಕ್ಲಾಸ್‌ಗಾಗಿ ಮೊಬೈಲ್ ಖರೀದಿಗೆ ಪರದಾಡುತ್ತಿದ್ದು ಹೀಗಾಗಿ 10ನೇ ತರಗತಿ ವ್ಯಾಸಂಗ ಮಾಡುತ್ತಿರುವ ಸಾತಗಳ್ಳಿ ವಿದ್ಯಾರ್ಥಿನಿ ಕೀರ್ತಿನಿ ಈಗ ರಸ್ತೆಯ ಪಕ್ಕದಲ್ಲಿಯೇ ತರಕಾರಿ ಮಾರಾಟ ಮಾಡುತ್ತಿದ್ದಾರೆ.
ಮೊಬೈಲ್ ಕೆಟ್ಟು ಹೋಗಿರುವ ಹಿನ್ನೆಲೆ ಆನ್ ಲೈನ್ ಕ್ಲಾಸ್ ಹಾಜರಾಗಲು ಸಮಸ್ಯೆಯಾಗಿದೆಯಂತೆ. ಕಳೆದ ನಾಲ್ಕೈದು ದಿನಗಳಿಂದ ಆನ್ ಲೈನ್ ತರಗತಿಗೆ ಗೈರಾದ ವಿದ್ಯಾರ್ಥಿನಿ ಈಗ ಸೋಪ್ಪು ತರಕಾರಿ ಮಾರಾಟ ಮಾಡುತ್ತಿದ್ದಾರೆ.
ಲ್ಯಾಪ್ ಟಾಪ್ ಇಲ್ಲ, ಟ್ಯಾಬ್ ಇಲ್ಲ ಎಂದು ಸೊಪ್ಪು ಮರಾಟಕ್ಕಿಳಿದ್ದಾಳೆ ವಿದ್ಯಾರ್ಥಿನಿ ಕೀರ್ತಿನಿ. ಬೆಳಗ್ಗೆ 6ರಿಂದ ಮಧ್ಯಾಹ್ನ 2 ಗಂಟೆಯವರಗೆ ಸೊಪ್ಪು ತರಕಾರಿ ಮಾರಾಟ ಮಾಡುತ್ತಿದ್ದಾರೆ.ಇನ್ನೂ ಮಾರಾ ಟದಿಂದ ಬಂದ ಹಣದಲ್ಲಿ ಟ್ಯಾಬ್ ಖರೀದಿಸುವ ಚಿಂತನೆಯನ್ನು ವಿದ್ಯಾರ್ಥಿನಿ ಇಟ್ಟುಕೊಂಡಿದ್ದಾರೆ
ಒಂದೆಡೆ ಅನಾರೋಗ್ಯಕ್ಕೀಡಾಗಿರುವ ತಾಯಿ, ಕೂಲಿ ಕೆಲಸವಿಲ್ಲದ ತಂದೆ. ಸಾತಗಳ್ಳಿಯ ಬಾಡಿಗೆ ಮನೆಯ ಲ್ಲಿರುವ ಕೀರ್ತಿನಿ ಕುಟುಂಬಕ್ಕೆ ಈಗ ದೊಡ್ಡ ಸಮಸ್ಯೆ ಎದುರಾಗಿದ್ದು ಕೀರ್ತನಿಯೇ ಓದಿನೊಂದಿಗೆದುಡಿಮೆ ಯನ್ನು ಮಾಡುತ್ತಿದ್ದಾರೆ.ತರಕಾರಿ ಸೊಪ್ಪು ಮಾರು ತ್ತಲೇ ಬೀದಿಯಲ್ಲೇ ಪುಸ್ತಕ ಹಿಡಿದು ಓದುತ್ತಿದ್ದಾರೆ ವಿದ್ಯಾರ್ಥಿನಿ.