ಮೈಸೂರು –
ಮೈಸೂರಿನ ಶಾರದಾವಿಲಾಸ ಫಾರ್ಮಸಿ ಕಾಲೇಜಿನ ವಿದ್ಯಾರ್ಥಿಗಳು ರಾಜ್ಯವೇ ಮೆಚ್ಚುವಂತಹ ಕೆಲಸ ವನ್ನು ಮಾಡತಾ ಇದ್ದಾರೆ.ಹೌದು ಫಾರ್ಮ್ ಡಿ ವಿದ್ಯಾರ್ಥಿಗಳು ವಿವಿಧ ಕೋವಿಡ್ ಮಿತ್ರ ಕೇಂದ್ರ ಗಳಲ್ಲಿ ಸ್ವಯಂ ಸೇವಕರಾಗಿ ಕಾರ್ಯನಿರ್ವಹಿಸುತ್ತಿ ದ್ದಾರೆ.ಇವರ ಕೆಲಸವನ್ನು ಗುರುತಿಸಿರುವ ‘ಫಾರ್ಮಾ ಬಿಝ್’ ರಾಷ್ಟ್ರೀಯ ಫಾರ್ಮಸಿ ನಿಯತಕಾಲಿಕೆಯು ವಿದ್ಯಾರ್ಥಿಗಳ ಕಾರ್ಯವನ್ನು ಶ್ಲಾಘಿಸಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಶಾರದಾ ವಿಲಾಸ ಫಾರ್ಮಸಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಹನುಮಂತಾಚಾರ್ ಜೋಷಿ, ನಮ್ಮ ಕಾಲೇಜಿನ ಸಾಕಷ್ಟು ವಿದ್ಯಾರ್ಥಿಗಳು ಕೋವಿಡ್ ಮಿತ್ರ ಕೇಂದ್ರ ಗಳಲ್ಲಿ ಕೆಲಸ ಮಾಡುತ್ತಿದ್ದಾರೆ.
ಅವರ ಸೇವೆಯನ್ನು ಪ್ರತಿಷ್ಠಿತ ‘ಫಾರ್ಮಾಬಿಝ್’ ನಿಯತಕಾಲಿಕೆ ಗುರುತಿ ಸಿರುವುದು ಬಹಳ ಖುಷಿಯ ಸಂಗತಿ.ಇಂತಹ ಸಂಕ ಷ್ಟದ ಸಮಯದಲ್ಲಿ ಸರ್ಕಾರದೊಂದಿಗೆ ಕೈಜೋಡಿ ಸುವುದು ನಮ್ಮೆಲ್ಲರ ಜವಾಬ್ದಾರಿ ಎಂದರು
ಕೋವಿಡ್ ಮಿತ್ರ ಕೇಂದ್ರಗಳಿಗೆ ಭೇಟಿ ನೀಡುವವರ ಆರೋಗ್ಯ ಸ್ಥಿತಿ, ವಿವರಗಳನ್ನು ದಾಖಲಿಸಿಕೊಂಡು ದಿನವಿಡೀ ಪಿಪಿಇ ಕಿಟ್ ಧರಿಸಿ ಕೆಲಸ ಮಾಡುತ್ತಿರುವ ವಿದ್ಯಾರ್ಥಿಗಳ ಸೇವೆ ಅಭಿನಂದನಾರ್ಹ ಎಂದು ‘ಫಾರ್ಮಾಬಿಝ್’ ತನ್ನ ಲೇಖನದಲ್ಲಿ ವಿದ್ಯಾರ್ಥಿಗ ಳಿಗೆ ಮೆಚ್ಚುಗೆ ವ್ಯಕ್ತಪಡಿಸಿದದ್ದು ರಾಜ್ಯದ ವಿದ್ಯಾರ್ಥಿ ಗಳ ಕಾರ್ಯಕ್ಕೆ ಇದು ಹಿಡಿದ ಕೈಗನ್ನಡಿಯಾಗಿದೆ