ವಿಜಯಪುರ –
ಎಲ್ಲವೂ ಯಾಂತ್ರಿಕವಾಗುತ್ತಿರುವ ಇಂದಿನ ದಿನಮಾನಗ ಳಲ್ಲಿ ಗುರು ಶಿಷ್ಯ ಸಂಬಂಧಕ್ಕೆ ಬೆಲೆ ಇಲ್ಲದಂತಾಗಿದೆ ಎನ್ನುವ ತರ್ಕಗಳ ನಡುವೆಯೇ ವಿಜಯಪುರ ಜಿಲ್ಲೆಯು ಒಂದು ಅಪೂರ್ವ-ಗುರು ಶಿಷ್ಯ ಸಂಬಂಧಕ್ಕೆ ಸಾಕ್ಷಿಯಾ ಗಿದೆ.ಹೌದು ವರ್ಗಾವಣೆಗೊಂಡ ಶಿಕ್ಷಕರಿಗೆ ಬೀಳ್ಕೊಡುವ ವೇಳೆ ವಿದ್ಯಾರ್ಥಿಗಳು ಬಿಕ್ಕಿ-ಬಿಕ್ಕಿ ಅತ್ತಿದ್ದು ಗುರು-ಶಿಷ್ಯರ ಸಂಬಂಧಕ್ಕೆ ಹಿಡಿದ ಕೈಗನ್ನಡಿಯಂತಾಗಿದೆ.ವಿಜಯಪುರ ಜಿಲ್ಲೆ ಕೋಲ್ಹಾರ ತಾಲೂಕಿನ ಬೋಳತಿ ಗ್ರಾಮದಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕಿ ಪಿ ಎಸ್ ತೊರವಿ ತಮ್ಮ 11 ವರ್ಷದ ಸುದೀರ್ಘ ಸೇವೆಯ ನಂತರ ಬೇರೆಡೆಗೆ ರ್ವಾವಣೆಯಾಗಿದ್ದಾರೆ ಹೀಗಾಗಿ ಅವರಿಗೆ ಬೀಳ್ಕೋಡುಗೆ ಸಮಾರಂಭ ಏರ್ಪಡಿಸಲಾಗಿತ್ತು.ಕಾರ್ಯಕ್ರಮ್ಕೆ ಹಾಜರಾ ಗಿದ್ದ ವಿದ್ಯಾರ್ಥಿಗಳು ತಮ್ಮ ನೆಚ್ಚಿನ ಶಿಕ್ಷಕರು ವರ್ಗಾವಣೆ ಯಾಗಿದ್ದಕ್ಕೆ ಬಿಕ್ಕಿ ಬಿಕ್ಕಿ ಅಳುತ್ತಿದ್ದರು, ಮಕ್ಕಳ ಜೊತೆಗೆ ಪೋಷಕರು ಕೂಡ ದುಃಖದಲ್ಲಿದ್ದರು.
ಪಿಎಸ್ ತೊರವಿ ಅವರು ವಿದ್ಯಾರ್ಥಿಗಳನ್ನು ತಮ್ಮ ಮಕ್ಕ ಳಂತೆ ನೋಡಿಕೊಳ್ಳುತ್ತಿದ್ದರು.ಕೇವಲ ಬೋಧನೆಗಾಗಿ ತಮ್ಮ ಸೇವೆ ಸೀಮಿತಗೊಳಿಸಿರಲಿಲ್ಲ ವಿದ್ಯಾರ್ಥಿಗಳಿಗೆ ನೈತಿಕ ಪಾಠ,ಶಿಸ್ತು,ಸಂಸ್ಕೃತಿಗಳ ಬಗ್ಗೆ ಹೇಳಿಕೊಡುತ್ತಿದ್ದರು, ರಾಷ್ಟ್ರೀಯ ನಾಯಕರು ಮತ್ತು ತತ್ವಜ್ಞಾನಿಗಳಿಗೆ ಸಂಬಂಧಿ ಸಿದ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದರು.ಇದರ ಜೊತೆಗೆ ಗ್ರಾಮಸ್ಥರು ಮತ್ತು ವಿದ್ಯಾರ್ಥಿಗಳ ಪೋಷಕರ ಜೊತೆಗೆ ಉತ್ತಮ ಭಾಂದವ್ಯ ಹೊಂದಿದ್ದರು.ಶಾಲೆ ಆರಂಭ ವಾದಾಗಿನಿಂದ ಇಂತಹ ಶಿಕ್ಷಕಿಯರನ್ನು ನಾವು ನೋಡಿರ ಲಿಲ್ಲ. ಪಠ್ಯೇತರ ಚಟುವಟಿಕೆಗಳನ್ನು ಸಕ್ರಿಯವಾಗಿ ಆಯೋಜಿ ಸುತ್ತಿದ್ದರು.ಇದೇ ವೇಳೆ ಮಾತನಾಡಿದ ತೋರವಿ ಅವರು ನಾನು ಈ ಊರಿಗೆ ಶಾಲೆಗೆ ಬಂದಾಗ ಇಡೀ ಗ್ರಾಮಸ್ಥರು ನನ್ನನ್ನು ಮಗಳಂತೆ ನೋಡಿಕೊಂಡಿ ದ್ದಾರೆ. ಗ್ರಾಮ ಮತ್ತು ಶಾಲೆ ಬಿಟ್ಟು ಹೋಗುತ್ತಿರುವುದು ವಯಕ್ತಿಕವಾಗಿ ನನಗೆ ತುಂಬಾ ನೋವು ತರುತ್ತಿದೆ. ಗ್ರಾಮಸ್ಥರೊಂದಿಗೆ ಭಾವನಾ ತ್ಮಕ ಬಾಂಧವ್ಯವಿತ್ತು ಯಾವುದೇ ಶಾಲೆಗೆ ನನ್ನ ನ್ನು ವರ್ಗಾ ವಣೆ ಮಾಡಿದರೂ ಅಲ್ಲಿಯೂ ಇದೇ ಬದ್ಧತೆಯಿಂದ ಕೆಲಸ ಮಾಡುತ್ತೇನೆ ಎಂದು ಭಾವುಕರಾಗಿ ನುಡಿದರು.