ಬೆಂಗಳೂರು –
ಕೊರೋನಾ ಮಹಾಮಾರಿ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಶಿಕ್ಷಣ ಇಲಾಖೆ ಈ ವರ್ಷ ಪಿಯುಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸದೆ ಪಾಸ್ ಮಾಡಿದೆ.ಇನ್ನೂ ಈ ಒಂದು ಫಲಿತಾಂಶಕ್ಕೆ SSLC ಮತ್ತು ಪ್ರಥಮ ಪಿಯುಸಿ ಅಂಕಗಳನ್ನು ಗಣನೆಗೆ ತೆಗೆದುಕೊಂಡು ಜುಲೈ 20 ರಂದು ದ್ವಿತೀಯ ಪಿಯು ಫಲಿತಾಂಶವನ್ನು ಪ್ರಕಟ ಮಾಡಲಾಗಿತ್ತು.ರಿಸಲ್ಟ್ ನೀಡುವ ಮುನ್ನವೇ ಪಿಯು ಬೋರ್ಡ್ ವಿದ್ಯಾರ್ಥಿಗಳಿಗೆ ಸೂಚನೆಯೊಂದನ್ನು ನೀಡಿದ್ದು,ಈ ಫಲಿತಾಂಶವನ್ನು ಯಾರಾದರೂ ವಿದ್ಯಾರ್ಥಿಗಳು ತಿರಸ್ಕರಿಸುವವರಿದ್ದರೆ ಅಂಥಹ ವಿದ್ಯಾರ್ಥಿಗಳಿಗೆ ಆಗಸ್ಟ್ ತಿಂಗಳಲ್ಲಿ ಮತ್ತೆ ಪರೀಕ್ಷೆ ನಡೆಸಲಾಗುವುದು ಎಂದು ಹೇಳಲಾಗಿತ್ತು ಒಂದು ವೇಳೆ ಅಲ್ಲಿ ಅಂಕಗಳು ಕಡಿಮೆ ಬಂದರೆ ಮತ್ತೆ ಅವರಿಗೆ ಹಳೆ ಫಲಿತಾಂಶ ನೀಡಲಾಗುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿತ್ತು.
ಇದರ ನಡುವೆಯೂ ಕೂಡಾ ರಾಜ್ಯದಲ್ಲಿ 878 ವಿದ್ಯಾರ್ಥಿಗಳು ಪರೀಕ್ಷೆಯನ್ನು ತಿರಸ್ಕಾರ ಮಾಡಿದ್ದಾರೆ.ವಿದ್ಯಾರ್ಥಿಗಳು ಶಿಕ್ಷಣ ಇಲಾಖೆ ನೀಡಿದ ಫಲಿತಾಂಶವನ್ನು ತಿರಸ್ಕರಿಸಿ ಮತ್ತೆ ಪರೀಕ್ಷೆ ಬರೆಯಲು ಸಿದ್ದರಾಗಿದ್ದು ಇವರಿಗೆ ಇದೇ ಆಗಸ್ಟ್ 19 ರಂದು ಪಿಯುಸಿ ಪರೀಕ್ಷೆಯನ್ನು ನಡೆಸಲು ಪಿಯು ಬೋರ್ಡ್ ನಿರ್ಧಾರ ಮಾಡಿದೆ.ಶಿಕ್ಷಣ ಇಲಾಖೆ ಸುಮಾರು 6 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಪಾಸ್ ಮಾಡಿತ್ತು.ಇದೀಗ 878 ವಿದ್ಯಾರ್ಥಿಗಳು ಫಲಿತಾಂಶ ಸಮಾಧಾನ ತಂದಿಲ್ಲ ಎಂದು ತಿರಸ್ಕರಿಸಿ ದ್ದಾರೆ.ರಾಜ್ಯದಲ್ಲಿ ಬಳ್ಳಾರಿ ಜಿಲ್ಲೆಯೊಂದರಲ್ಲೇ 221 ವಿದ್ಯಾರ್ಥಿಗಳು ಪಿಯು ಫಲಿತಾಂಶವವನ್ನು ತಿರಸ್ಕಾರ ಮಾಡಿದ್ದಾರೆ.
ಜಿಲ್ಲೆಯ 221 ಫ್ರೆಶರ್ ಹಾಗೂ 16 ರಿಪೀಟರ್ಸ್ ವಿದ್ಯಾರ್ಥಿಗಳು ಪಿಯು ಫಲಿತಾಂಶವನ್ನು ತಿರಸ್ಕರಿಸಿ ದ್ದಾರೆ.ಇದರಲ್ಲಿ ಕೊಟ್ಟೂರು ಇಂದು ಪಿಯು ಕಾಲೇ ಜಿನ 104 ವಿದ್ಯಾರ್ಥಿಗಳು ಫಲಿತಾಂಶ ಸಮಾಧಾನ ತಂದಿಲ್ಲ ಎಂದು ತಿರಸ್ಕಾರ ಮಾಡಿದ್ದಾರೆ.ಪ್ರತಿ ವರುಷ ಈ ಕಾಲೇಜಿನ ಕಲಾ ವಿಭಾಗದ ವಿದ್ಯಾರ್ಥಿಗಳಿಗೆ ರ್ಯಾಂಕ್ ಬರುತ್ತಿತ್ತು ಎಂದು ತಿಳಿದುಬಂದಿದೆ ಪಿಯು ಬೋರ್ಡ್ ನೀಡಿದ ಅಂಕಗಳಿಗೆ ವಿದ್ಯಾರ್ಥಿ ಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.ನಮಗೆ SSLC, 1st PUC ಅಂಕ ಕಡಿಮೆ ಇದೆ.ಹೀಗಾಗಿ ಪರೀಕ್ಷೆ ಬರೆದೇ ಇನ್ನೂ ಹೆಚ್ಚಿನ ಅಂಕ ಪಡೆಯುವ ಕಾರಣದಿಂದ ಫಲಿತಾಂಶ ತಿರಸ್ಕರಿಸಿದ್ದೇವೆ ಎಂದು ವಿದ್ಯಾರ್ಥಿಗಳು ಹೇಳಿದ್ದು ಮುಂದೇನಾಗುತ್ತದೆ ಎಂಬುದನ್ನು ಕಾದು ನೊಡಬೇಕು.