ಯಾದಗಿರಿ –
ಸಮಯಕ್ಕೆ ಸರಿಯಾಗಿ ಬಾರದ ಬಸ್ ಇದರಿಂದಾಗಿ ವಿದ್ಯಾರ್ಥಿಗಳ ಕ್ಲಾಸ್ ಮೀಸ್ ಆಗುತ್ತಿದ್ದು ಪ್ರತಿದಿನ ಪರದಾಡುತ್ತಿದ್ದು ಹೀಗಾಗಿ ಇದೆಲ್ಲದರಿಂದಾಗಿ ಬೇಸತ್ತ ವಿದ್ಯಾರ್ಥಿಗಳು ದಿಢೀರ್ ಪ್ರತಿಭಟನೆ ಮಾಡಿದ ಘಟನೆ ಯಾದಗಿರಿಯಲ್ಲಿ ನಡೆದಿದೆ.ಗ್ರಾಮೀಣ ಭಾಗದ ವಿದ್ಯಾರ್ಥಿ ಗಳಿಗೆ ಬೆಳಗಿನ ದೊಡ್ಡ ಸಂಕಷ್ಟವಾಗಿದೆ
ಅಸಮಾಧಾನಗೊಂಡ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಶಾರದಹಳ್ಳಿ ಗ್ರಾಮದ ವಿದ್ಯಾರ್ಥಿಗಳು ಪ್ರತಿಭಟನೆ ಮಾಡಿದರು.ಗ್ರಾಮಕ್ಕೆ ಪ್ರತಿದಿನ ಸಮಯಕ್ಕೆ ಸರಿಯಾಗಿ ಬಸ್ ಬರುತ್ತಿಲ್ಲ ಅಲ್ಲದೇ ಇದರಿಂದಾಗಿ ಸಾಕಷ್ಟು ಪ್ರಮಾಣದಲ್ಲಿ ವಿದ್ಯಾರ್ಥಿಗಳು ಪರದಾಡುತ್ತಿದ್ದು ಪ್ರತಿದಿನ ಬೆಳಿಗ್ಗೆ 7.30 ಗಂಟೆಗೆ ಬರಬೇಕಾದ ಬಸ್ 9:30 ಕ್ಕೆ ಬರುತ್ತವೆ ಇದರಿಂದಾಗಿ ನಸುಕಿನ ಜಾವ ಎದ್ದು ಶಾಲೆ ಹಾಗೂ ಕಾಲೇಜ್ ತೆರಳಬೇಕೆಂದು ರೆಡಿಯಾಗಿ ರಸ್ತೆ ಭಾಗದಲ್ಲಿ ಬಂದ ವಿದ್ಯಾರ್ಥಿಗಳು ಬಾರದ ಬಸ್ ಗಾಗಿ ಕಾದು ಕಾದು ಸುಸ್ತಾಗುತ್ತಿದ್ದಾರೆ.
ವಿದ್ಯಾರ್ಥಿಗಳ ಪ್ರತಿ ದಿನ ಬಸ್ ಗಾಗಿ ಪರದಾಡುತ್ತಿದ್ದು ಈ ಒಂದು ಸಮಸ್ಯೆ ಯಾರಿಗೂ ಕಾಣದ ಹಿನ್ನಲೆಯಲ್ಲಿ ವಿದ್ಯಾರ್ಥಿಗಳು ಶಾರದಹಳ್ಳಿಯಿಂದ ಶಹಾಪುರಗೆ ತೆರಳಬೇಕಾದ ವಿದ್ಯಾರ್ಥಿಗಳು ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆ ಅಧಿಕಾರಿಗಳ ನಿಷ್ಕಾಳಜಿಗೆ ಬೇಸತ್ತು ಇಂದು ಪ್ರತಿಭಟನೆ ಮಾಡಿದರು.
ವಿದ್ಯಾರ್ಥಿಗಳ ಓದಿಗೆ ಸಮಸ್ಯೆ ಸಮಯಕ್ಕೆ ಸರಿಯಾಗಿ ಬಸ್ ಬಾರದಕ್ಕೆ ವಿದ್ಯಾರ್ಥಿಗಳ ಅಕ್ರೋಶಕ್ಕೆ ಕೊನೆಗು ಬಸ್ ಬಾರದಕ್ಕೆ ತಡವಾಗಿ ಟಂಟಂ ಮೊರೆ ಹೋಗಿ ಶಾಲೆ ಹಾಗೂ ಕಾಲೇಜ್ ಗೆ ತೆರಳಿದರು. ಇನ್ನೂ ತಡವಾಗಿ ತೆರಳಿದ ಹಿನ್ನೆಲೆ ಯಲ್ಲಿ ಕೆಲ ಕ್ಲಾಸ್ ಗಳು ಮೀಸ್ ಮಾಡಿಕೊಳ್ಳುತ್ತಿದ್ದಾರೆ ವಿದ್ಯಾರ್ಥಿಗಳು..