ನರಗುಂದ –
ಗದಗ ಜಿಲ್ಲೆಯ ನರಗುಂದ ತಾಲ್ಲೂಕಿನ ಹದ್ಲಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ನಡೆದ ಘಟನೆ ಕುರಿತಂತೆ ಭಯಗೊಂಡಿರುವ ಶಾಲಾ ಮಕ್ಕಳು ಶಾಲೆಗಳತ್ತ ಬರುತ್ತಿಲ್ಲ.ಕಳೆದ ನಾಲ್ಕೈದು ದಿನಗ ಳಿಂದ ಅತಿಥಿ ಶಿಕ್ಷಕ ಮುತ್ತಪ್ಪ ಹಡಗಲಿ ಏಕಾ ಎಕಿಯಾಗಿ ಎಂದಿನಂತೆ ನಡೆಯುತ್ತಿದ್ದ ಶಾಲೆ ಯಲ್ಲಿ ಹುಚ್ಚಾಟವನ್ನು ಪ್ರದರ್ಶನ ಮಾಡಿದ್ದಾನೆ
ಯಾವುದೇ ಒಂದು ಕಾರಣವನ್ನಿಟ್ಟುಕೊಂಡು ಮುತ್ತಪ್ಪ ಸಲಿಕೆಯಿಂದ ಶಿಕ್ಷಕಿಯೊಬ್ಬರ ಮಗ ಭರತ್ ನನ್ನು ಹೊಡೆದು ಶಾಲೆಯ ಮೇಲಿಂದ ತಳ್ಳಿದ್ದು ಇನ್ನೂ ಈ ಒಂದು ಸಮಯದಲ್ಲಿ ಉಳಿಸಿ ಕೊಳ್ಳಲು ಬಂದ ಬಾಲಕನ ತಾಯಿ ಶಿಕ್ಷಕಿ ಮತ್ತು ಇನ್ನೊರ್ವ ಶಿಕ್ಷಕನ ಮೇಲೂ ಅತಿಥಿ ಶಿಕ್ಷಕ ಹಲ್ಲೆ ಯನ್ನು ಮಾಡಿದ್ದು ಸಧ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಯನ್ನು ಪಡೆದುಕೊಳ್ಳುತ್ತಿದ್ದ ಇಬ್ಬರಲ್ಲಿ ಶಿಕ್ಷಕಿ ನಿಧನರಾಗಿದ್ದು ಶಾಲೆಯಲ್ಲಿ ನಡೆದ ಈ ಒಂದು ಘಟನೆಯಿಂದಾಗಿ ಶಾಲಾ ವಿದ್ಯಾರ್ಥಿಗಳು ಭಯ ಗೊಂಡು ಶಾಲೆಗೆ ಬರುತ್ತಿಲ್ಲ.
ಹೌದು ಅತಿಥಿ ಶಿಕ್ಷಕನ ಹುಚ್ಚಾಟದ ಈ ಒಂದು ಕೆಲಸದಿಂದಾಗಿ ಶಾಲೆಯತ್ತ ಸುಳಿಯುತ್ತಿಲ್ಲ ಶಾಲಾ ವಿದ್ಯಾರ್ಥಿಗಳು.ಘಟನೆ ನಡೆದ ಬಳಿಕ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆರಂಭವಾಗಿದ್ದು ಶಾಲೆಯಲ್ಲಿ ನಡೆದ ಘಟನೆಯಿಂದಾಗಿ ಭಯ ಗೊಂಡ ವಿದ್ಯಾರ್ಥಿಗಳು ಶಾಲೆಯತ್ತ ಸುಳಿಯು ತ್ತಿಲ್ಲ.
ಶಿಕ್ಷಕರು ಮಾತ್ರ ಹಾಜರಾಗಿದ್ದು ಶಾಲಾ ಆವರ ಣದಲ್ಲಿ ಪೊಲೀಸ್ ಪಡೆ ಬೀಡು ಬಿಟ್ಟಿತ್ತು ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಪೊಲೀಸರು ಶಾಲೆಗೆ ಭೇಟಿ ನೀಡಿ ಮುಖ್ಯ ಶಿಕ್ಷಕರನ್ನು ಒಳ ಗೊಂಡಂತೆ ಎಲ್ಲಾ ಶಿಕ್ಷಕರ ಜೊತೆಗೆ ಚರ್ಚಿಸಿ ಮಾಹಿತಿ ಕಲೆ ಹಾಕುತ್ತಿದ್ದ ದೃಶ್ಯಗಳು ಶಾಲೆಯಲ್ಲಿ ಕಂಡು ಬರುತ್ತಿವೆ.
ಸುದ್ದಿ ಸಂತೆ ನ್ಯೂಸ್ ನರಗುಂದ…..