ವಿಜಯಪುರ –
ಆಳಂದ ತಾಲ್ಲೂಕಿನಲ್ಲಿ ಕಳೆದ ಒಂದು ವಾರದಿಂದ ಸುರಿ ಯುತ್ತಿರುವ ಮಳೆಯಿಂದ ವಿವಿಧ ಗ್ರಾಮದಲ್ಲಿ 17 ಮನೆ ಗಳಿಗೆ ಹಾನಿಯಾಗಿರುವ ವರದಿಯಾಗಿದೆ.ಅಲ್ಲದೆ ತಡೋಳಾ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ ಕಟ್ಟಡದ ಛಾವಣಿಯಿಂದ ನೀರು ಒಸರುತ್ತಿರುವದು ಹೆಚ್ಚಿದ್ದು ವಿದ್ಯಾರ್ಥಿಗಳು ಹೊರಗೆ ಕುಳಿತುಕೊಂಡಿದ್ದಾರೆ.ತಡೋಳಾ ಗ್ರಾಮದ ಹೊರವಲಯದಲ್ಲಿ 2011 ರಲ್ಲಿ ಸರ್ಕಾರಿ ಪ್ರೌಢ ಶಾಲೆ ಕಟ್ಟಡ ನಿರ್ಮಾಣಗೊಂಡಿದೆ.ಮರಾಠಿ ಮಾಧ್ಯಮ ಪ್ರೌಡಶಾಲೆಯಲ್ಲಿ 80ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ.ಛಾವಣಿಮೆ ಮೇಲೆ ನೀರು ಸಂಗ್ರಹಗೊಂ ಡು ಕೋಣೆಗಳ ಒಳಗೆ ಜಿಣುಗುತ್ತಿದ್ದು ಆತಂಕ ಹೆಚ್ಚಾಗಿದೆ.
ಗ್ರಾ.ಪಂ ಅಧ್ಯಕ್ಷ ಮೈಲಾರಿ ಜೋಗೆ ನೇತೃತ್ವದಲ್ಲಿ ಪಾಲಕರು ಶಾಲೆಗೆ ಇಂದು ಭೇಟಿ ನೀಡಿ ಪರಿಶೀಲಿಸಿದರು.ಬಳಿಕ ಕ್ಷೇತ್ರ ಶಿಕ್ಷಣಾಧಿಕಾರಿ ಶಾಲೆಗೆ ಭೇಟಿ ನೀಡಿ ವಿಕ್ಷಣೆ ಮಾಡಲು ಮನವಿ ಮಾಡಿದರು.ಶಾಲಾ ಕಟ್ಟಡದ ಕಾಮಗಾರಿ ಕಳಪೆ ಯಾಗಿದ್ದರಿಂದ ಈ ಸ್ಥಿತಿ ನಿರ್ಮಾಣವಾಗಿದೆ.
ಎಂಜಿನಿಯರ್ ಕರೆಯಿಸಿ ಕಟ್ಟಡದ ಬಾಳಿಕೆ ಪರಿಶೀಲಿಸಿ ಎಂದು ಹೋರಾ ಟಗಾರ ಮೌಲಾ ಮುಲ್ಲಾ ಒತ್ತಾಯಿಸಿ ದರು.ಡಿಡಿಪಿಐಗಳಿಗೆ ತಕ್ಷಣ ವರದಿ ಸಲ್ಲಿಸಲಾಗುವುದು ತಾತ್ಕಾಲಿಕವಾಗಿ ಸಮೀ ಪದಲ್ಲಿನ ಸರ್ಕಾರಿ ಕಟ್ಟಡದಲ್ಲಿ ಪ್ರೌಢಶಾಲೆ ತರಗತಿಗಳು ನಡೆಸುವ ವ್ಯವಸ್ಥೆ ಮಾಡುವು ದಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಚಿತ್ರಶೇಖರ ದೇಗಲಮುಡಿ ಭರವಸೆ ನೀಡಿದರು.
ಆಳಂದ-40 ಮಿಮೀ, ನಿಂಬರ್ಗಾ-41 ಮಿ.ಮೀ, ಕೊರಳ್ಳಿ 34, ಮಾದನ ಹಿಪ್ಪರಗಿ-42, ಸರಸಂಬಾ-47, ನರೋಣಾ 36, ಖಜೂರಿ-72 ಮಿ.ಮೀ ಮಳೆ ದಾಖಲಾಗಿದೆ.
























