ಹುಣಸೂರು –
ಅಣ್ಣನ ಹೆಸರಿನಲ್ಲಿ ಶಿಕ್ಷಕ ವೃತ್ತಿ ಪಡೆದುಕೊಂಡು ಸಿಕ್ಕು ಬಿದ್ದಿರುವ ನಕಲಿ ಶಿಕ್ಷಕ ಲಕ್ಷ್ಮಣೇಗೌಡರ ಮತ್ತೊಂದು ಮುಖ ಬಯಲಾಗಿದೆ ಹೌದು ಇವರು ಓದಿದ್ದು 8ನೇ ತರಗತಿ ಅಷ್ಟೇ ಅಂತೆ.ತರಗತಿಗೆ ದಾಖಲಾದ ದಾಖಲೆ ಮಾತ್ರ ಶಿಕ್ಷಣ ಇಲಾಖೆಯಲ್ಲಿದ್ದು ಎಸ್ಸೆಸ್ಸೆಲ್ಸಿ ಪಾಸಾದ ಬಗ್ಗೆ ಯಾವುದೇ ದಾಖಲೆ ಇಲ್ಲ ಎಂದು ದೂರುದಾರ ಇಂಟೆಕ್ ರಾಜು ತಿಳಿಸಿದರು.
ಸಹೋದರನ ಅಂಕಪಟ್ಟಿ ಶಾಲಾ ದಾಖಲೆಗಳನ್ನು ಸೇವೆಗೆ ಸೇರುವ ಸಮಯದಲ್ಲಿ ಇಲಾಖೆಗೆ ನೀಡಿದ ಲಕ್ಷ್ಮಣೇಗೌಡ ನಂತರ ಹಿಂಪಡೆದಿದ್ದು ಇಲಾಖೆ ಅಧಿಕಾರಿಗಳು ಆರೋಪಿ ಯ ಶಿಕ್ಷಣದ ಹಿನ್ನೆಲೆ ಪರಿಶೀಲಿಸುವಲ್ಲಿ ವಿಫಲರಾಗಿದ್ದಾರೆ ಎಂದರು.ಹುಣಸೂರು ಕ್ಷೇತ್ರ ಶಿಕ್ಷಣಾಧಿಕಾರಿ ಸಕಾಲಕ್ಕೆ ಕ್ರಮ ವಹಿಸಿದ್ದರೆ ಮೂರು ವರ್ಷದ ಹಿಂದೆಯೇ ಆರೋಪಿ ಯನ್ನು ವಶಕ್ಕೆ ಪಡೆಯಬಹುದಾಗಿತ್ತು.ಆದರೆ ಇಲಾಖೆಯೇ ಆರೋಪಿಗೆ ಜಾಮೀನು ಪಡೆದುಕೊಳ್ಳಲು ಪರೋಕ್ಷ ಸಹ ಕಾರ ನೀಡಿತ್ತು ಎಂದು ಆರೋಪಿಸಿದರು.ಪ್ರಕರಣದ ತನಿಖೆ ಯಲ್ಲಿ ವಿಳಂಬ ಧೋರಣೆ ಅನುಸರಿಸಿದ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಉಪ ನಿರ್ದೇಶಕರಿಗೆ ಪತ್ರ ಬರೆದಿರುವೆ ಎಂದರು.