ಬೆಂಗಳೂರು –
ದರೋಡೆ ಸೇರಿದಂತೆ ಗಂಭೀರ ಅಪರಾಧ ಪ್ರಕರಣಗಳ ಸಂಬಂಧ ಆರೋಪಿ ಜ್ಞಾನೇಶ್ ಎಂಬಾತನನ್ನು ವಶಕ್ಕೆ ಪಡೆಯಲು ತೆರಳಿದ ಸಬ್ ಇನ್‍ಸ್ಪೆಕ್ಟರ್ ಹರಿನಾಥ್ ಮೇಲೆಯೇ ಮಾರಕಾಸ್ತ್ರಗ ಳಿಂದ ದಾಳಿ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ.
ಹಲ್ಲೆಯಿಂದ ಕೈಗೆ ಗಾಯಗೊಂಡಿರುವ ಮಹದೇವ ಪುರ ಠಾಣೆ ಸಬ್ ಇನ್‍ಸ್ಪೆಕ್ಟರ್ ಹರಿನಾಥ್ ಅವರು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಮಹದೇವಪುರ, ಎಚ್‍ಎಎಲ್, ಕೆ ಆರ್ ಪುರಂ, ಕಾಡುಗೋಡಿ ಸೇರಿ ನಗರದ ಹಲವು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ 25ಕ್ಕೂ ಹೆಚ್ಚು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ ಜ್ಞಾನೇಶ್, ಕೆಜಿಎಫ್‍ನ ಅಂಡರ್‍ಸನ್‍ಪೇಟೆಯಲ್ಲಿ ಗುರುವಾರ ಮುಂಜಾನೆ ಅಡಗಿರುವ ಮಾಹಿತಿಯಾಧರಿಸಿ ಸಬ್‍ಇನ್‍ಸ್ಪೆಕ್ಟರ್ ಹರಿನಾಥ್ ಐವರು ಸಿಬ್ಬಂದಿ ಯೊಂದಿಗೆ ಬಂಧಿಸುವ ಕಾರ್ಯಾಚರಣೆ ಕೈಗೊಂಡಿದ್ದಾರೆ.

ಪೊಲೀಸ್ ವಾಹನವನ್ನು ಕಂಡ ಜ್ಞಾನೇಶ್ ಮತ್ತವನ ಸಹಚರರು ಓಡಲು ಯತ್ನಿಸಿದ್ದು ಆತನ ಬೆನ್ನಟ್ಟಿ ಬಂಧಿಸಲು ಹೋದಜತೆಗಿದ್ದ ಹರಿನಾಥ್ ಅವರ ಕೈಗೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಪರಾರಿಯಾಗಿ ದ್ದಾನೆ. ಆತನ ಮತ್ತೊಬ್ಬ ಸಹಚರ ಪರಾರಿಯಾಗಿದ್ದು ಅವರಿಬ್ಬರಿಗಾಗಿ ಬೆಳಗ್ಗೆವರೆಗೆ ನಡೆಸಿದ ಕಾರ್ಯಾಚರ ಣೆ ವಿಫಲವಾಗಿದೆ.ಇನ್ನೂ ಸಬ್ ಇನ್ಸ್ಪೆಕ್ಟರ್ ಮೇಲೆ ಹಲ್ಲೆ ನಡೆಸಿದ ಜ್ಞಾನೇಶ್ ಬಂಧನಕ್ಕೆ ವಿಶೇಷ ಪೊಲೀಸ್ ತಂಡಗಳನ್ನು ರಚಿಸಲಾಗಿದ್ದು, ಕಾರ್ಯಾಚರಣೆ ತೀವ್ರಗೊಳಿಸ ಲಾಗಿದೆ ಎಂದು ವೈಟ್‍ಫೀಲ್ಡ್ ವಿಭಾಗದ ಡಿಸಿಪಿ ದೇವರಾಜ್ ತಿಳಿಸಿದ್ದಾರೆ.