ಕೋಲಾರ –
ಕೋಲಾರ ಜಿಲ್ಲೆಯ ಮುಳಬಾಗಿಲು ತಾಲ್ಲೂಕಿನ ಕ್ಷೇತ್ರ ಶಿಕ್ಷ ಣಾಧಿಕಾರಿಗಳಿಬ್ಬರ ಗುದ್ದಾಟ ಮುಗಿಯುತ್ತಿಲ್ಲ ಮುಳಬಾ ಗಿಲು ತಾಲೂಕಿನ ಶಿಕ್ಷಣ ಇಲಾಖೆಯಲ್ಲಿ ಅಮಾನತುಗೊಂ ಡ ಬಿಇಒ ಗಿರಿಜೇಶ್ವರಿ ದೇವಿ ಸರ್ಕಾರದ ಅಮಾನತು ಆದೇಶಕ್ಕೆ ತಡೆ ತಂದು ಸರ್ಕಾರಿ ಅಧಿಕಾರಿಗಳನ್ನು ಲೆಕ್ಕಿ ಸದೇ ಬಿಇಒ ಕಚೇರಿಯಲ್ಲಿ ಕುಳಿತು ನಿತ್ಯ ಒಂದಿಲ್ಲೊಂದು ಅವಾಂತರ ಸೃಷ್ಟಿಸುತ್ತಿದ್ದಾರೆ.ಇದಕ್ಕೆ ಪೂರಕವಾಗಿ ಪ್ರಸ್ತುತ ತಾಲೂಕಿನಲ್ಲಿ ನಡೆಯುತ್ತಿರುವ ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆಗಾಗಿ ನಿನ್ನೆ ಬೆಳಗ್ಗೆ ಪ್ರೌಢ ಶಾಲೆಗಳಿಗೆ ಸಮಾಜ ವಿಜ್ಞಾನ ಪ್ರಶ್ನೆ ಪತ್ರಿಕೆಯನ್ನು ಸಾಗಿಸುವ ವಾಹನವನ್ನು ತೆಗೆದುಕೊಂಡು ಹೋಗಲು ಚಾಲಕ ಶಂಕರ್ 9.30ಕ್ಕೆ ಬಿಇಒ ಕಚೇರಿಗೆ ಬಂದಿದ್ದಾರೆ.ಈ ವೇಳೆ ಸ್ಥಳದಲ್ಲಿದ್ದ ಅಮಾನತಾದ ಬಿಇಒ ಗಿರಿಜೇಶ್ವರಿ ದೇವಿ ಅವರು ವಾಹನದ ಮುಂದೆ ಅಡ್ಡ ನಿಂತು ಅಡ್ಡಿಪಡಿಸಿದ್ದಾರೆ. ವಾಹನ ಚಾಲಕ ಎಷ್ಟು ವಿನಂತಿಸಿದರೂ ವಾಹನ ಬಿಡದ ಕಾರಣ ಬಿಇಒ ಅಶೋಕ್ ಅವರಿಗೆ ಮಾಹಿತಿ ನೀಡಿದ್ದರಿಂದ ಅವರು ಪೊಲೀಸರನ್ನು ಸ್ಥಳಕ್ಕೆ ಕರೆಸಿ ಪೊಲೀಸರು ಬಂದ ನಂತರ 10.30ಕ್ಕೆ ವಾಹನವನ್ನು ಬಿಟ್ಟಿದ್ದಾರೆ

ಇನ್ನೂ ಈ ಒಂದು ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಮೇಲಾಧಿಕಾರಿಗಳಿಗೆ ವರದಿ ನೀಡಲಾಗಿದೆ.ಹೌದು ಬಿಇಒ ಸಿ.ಆರ್.ಅಶೋಕ್ ಮಾತನಾಡಿ ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆಗಾಗಿ ಶಾಲೆಗಳಿಗೆ ಸಮಾಜ ವಿಜ್ಞಾನ ಪ್ರಶ್ನೆ ಪತ್ರಿಕೆ ಸಾಗಿಸಲು ಜೀಪ್ ಅಗತ್ಯವಿದೆ.ಚಾಲಕ ಶಂಕರ್ ನಿಗದಿತ ಸಮಯಕ್ಕೆ ಬಂದು ಜೀಪ್‌ನ್ನು ಶೆಡ್ ನಿಂದ ಹೊರಗಡೆ ತೆಗೆಯುತ್ತಿದ್ದಂತೆ ಅಲ್ಲಿಗೆ ಬಂದ ಗಿರಿಜೇಶ್ವರಿದೇವಿ ಜೀಪ್ ತೆಗೆದುಕೊಂಡು ಹೋಗದಂತೆ ಜೀಪ್ ಮುಂದೆ ಅಡ್ಡ ನಿಂತಿದ್ದರಿಂದ 45 ನಿಮಿಷಗಳು ತಡವಾಗಿದ್ದರಿಂದ ಶಾಲೆಗಳಿಗೆ ವೀಕ್ಷಣೆಗೆ ತೆರಳಲು ತಡವಾಗಿದ್ದು, ಸದರಿ ವಿಚಾರವನ್ನು ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸಲಾಗಿದೆ ಎಂದರು.