ಬೀದರ್ –
ಪ್ರಾಥಮಿಕ ಶಾಲೆಗೆ ಗ್ರುಪ್ ಡಿ ಶಿಕ್ಷಕರನ್ನು ನೇಮಕ ಮಾಡಬೇಕು ಎನ್ನುವುದು ಸೇರಿದಂತೆ 11 ಪ್ರಮುಖ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಕರ್ನಾಟಕ ರಾಜ್ಯ ಸರ್ಕಾರಿ ಹಿರಿಯ ಹಾಗೂ ಪದವೀಧರೇತರ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರ ಸಂಘ ಸರ್ಕಾರವನ್ನು ಆಗ್ರಹಿಸಿದ
ಸಂಘದ ಪದಾಧಿಕಾರಿಗಳು ಜಿಲ್ಲಾ ಘಟಕದ ಅಧ್ಯಕ್ಷ ಶಿವರಾಜ ಕಪಲಾಪುರೆ ಅವರ ನೇತೃತ್ವ ದಲ್ಲಿ ಔರಾದ್‍ನಲ್ಲಿ ಶಿಕ್ಷಣ ಸಚಿವ ಬಿ.ಸಿ. ನಾಗೇಶ ಅವರಿಗೆ ಈ ಕುರಿತು ಮನವಿ ಪತ್ರ ಸಲ್ಲಿಸಿದರು.
ಹಿರಿಯ ಪ್ರಾಥಮಿಕ ಶಾಲೆಗಳ ಮುಖ್ಯಶಿಕ್ಷಕರಿಗೆ ಪ್ರೌಢಶಾಲೆ ಸಹ ಶಿಕ್ಷಕರ ವೇತನ ಶ್ರೇಣಿ ಹಾಗೂ ಎರಡನೇ ಬಡ್ತಿಗೆ ಹಿರಿಯ ಮುಖ್ಯಶಿಕ್ಷಕರಿಗೆ ಪ್ರೌಢ ಶಾಲಾ ಮುಖ್ಯಶಿಕ್ಷಕರ ವೇತನ ಶ್ರೇಣಿ ನೀಡಬೇಕು. ಸೇವಾ ಹಿರಿತನ ಪರಿಗಣಿಸಿ ಶಿಕ್ಷಣ ಸಂಯೋಜಕ ಹುದ್ದೆಗೆ ನೇಮಕ ಮಾಡಬೇಕು. ಪ್ರೌಢಶಾಲಾ ಮುಖ್ಯಶಿಕ್ಷಕರ ಮಾದರಿಯಲ್ಲಿ ವರ್ಷಕ್ಕೆ 30 ಗಳಿಕೆ ರಜೆ ಕೊಡಬೇಕು.ನಿರ್ವಹಣೆಗಾಗಿ ಕಿರಿಯ ಪ್ರಾಥ ಮಿಕ ಶಾಲೆಗೆ ವಾರ್ಷಿಕ ₹ 50 ಸಾವಿರ ಹಿರಿಯ ಪ್ರಾಥಮಿಕ ಶಾಲೆಗೆ ₹ 1 ಲಕ್ಷ ಹಾಗೂ ಮಾದರಿ ಪ್ರಾಥಮಿಕ ಶಾಲೆಗೆ ₹ 1.5 ಲಕ್ಷ ಒದಗಿಸಬೇಕು.
ಬಿಸಿಯೂಟ ನಿರ್ವಹಣೆ ಅನುದಾನ ಪ್ರತಿ ತಿಂಗಳ 1ನೇ ದಿನಾಂಕದಂದೇ ಮುಖ್ಯಶಿಕ್ಷಕರ ಖಾತೆಗೆ ಜಮೆ ಮಾಡಬೇಕು.ನೂತನ ಪಿಂಚಣಿ ಯೋಜನೆ ರದ್ದುಪಡಿಸಿ ಹಳೆಯ ಪಿಂಚಣಿ ಯೋಜನೆಯನ್ನೇ ಜಾರಿಗೊಳಿಸಬೇಕು ಎಂದು ಒತ್ತಾಯವನ್ನು ಮಾಡಿದರು.