ಹರ್ತಿ –
ಹರ್ತಿ ಕ್ಲಸ್ಟರ್ ಮಟ್ಟದ 4 ನೇ SDMC ಸಭೆ ಇಂದು ಅತ್ಯಂತ ಯಶಸ್ವಿಯಾಗಿ ಜರುಗಿತು.ಇನ್ನೂ ಸಭೆಯ ಅಧ್ಯಕ್ಷತೆಯನ್ನು ಅಸುಂಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾದ ರೇಖಾ ತಿಮ್ಮನಗೌಡರ್ ವಹಿಸಿದ್ದರು ಮುಖ್ಯ ಅತಿಥಿಗಳಾಗಿ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಉಪನ್ಯಾಸಕರಾದ H B ರೆಡ್ಡೇರ ವಹಿಸಿಕೊಂಡು ಮಾತ ನಾಡುತ್ತಾ SDMC ಸಭೆಗಳ ಮಹತ್ವ ಮತ್ತು ಅದರಿಂದ ಆಗುವ ಪ್ರಯೋಜನಗಳ ಕುರಿತು ಮಾಹಿತಿಯನ್ನ ತಿಳಿಸಿ ಕೊಟ್ಟರು.
K F ಹಳ್ಯಾಳ ಪ್ರಧಾನ ಕಾರ್ಯದರ್ಶಿಗಳು ಸರ್ಕಾರಿ ನೌಕರರ ಸಂಘ ಜಿಲ್ಲಾ ಘಟಕ ಗದಗ ರವರು ಎಸ್ಡಿಎಂಸಿ ಕಾರ್ಯವೈಖರಿಗಳ ಬಗ್ಗೆ ಮಾಹಿತಿಯನ್ನು ತಿಳಿಸಿಕೊಟ್ಟರು. ಈ ಸಭೆಯಲ್ಲಿ 5 ಪ್ರಾಥಮಿಕ ಶಾಲೆಗಳ ಮತ್ತು ಒಂದು ಪ್ರೌಢಶಾಲೆಯ ಪ್ರಧಾನ ಗುರುಗಳು ಮತ್ತು ಎಸ್ಡಿಎಂಸಿ ಅಧ್ಯಕ್ಷರು ಮತ್ತು ಸದಸ್ಯರು ಭಾಗವಹಿಸಿದ್ದರು ಇದೇ ಸಮಯದಲ್ಲಿ ತಮ್ಮ ತಮ್ಮ ಶಾಲೆಯಲ್ಲಿ ಕೈಗೊಂಡ ವಿಶೇಷ ಕಾರ್ಯಕ್ರಮಗಳ ಕುರಿತು ಯಶೋಗಾಥೆಗಳನ್ನು ಹಂಚಿ ಕೊಂಡರು.
ಮುಂದಿನ ದಿನಗಳಲ್ಲಿ ಗುಣಾತ್ಮಕ ಶಿಕ್ಷಣಕ್ಕಾಗಿ ಭೌತಿಕ ಸೌಲಭ್ಯಗಳನ್ನು ಒದಗಿಸುವ ದೃಷ್ಟಿಯಲ್ಲಿ ಇನ್ನಷ್ಟು ಕೆಲಸ ಕಾರ್ಯಗಳನ್ನು ಮಾಡುವುದಾಗಿ ಎಸ್ಡಿಎಂಸಿ ಸದಸ್ಯರು ಈ ಸಂದರ್ಭದಲ್ಲಿ ಭರವಸೆ ನೀಡಿದರು ಸಂಪನ್ಮೂಲ ವ್ಯಕ್ತಿಗ ಳಾಗಿ I A ಗಾಡಗೋಳಿ CRP ಹರ್ತಿ ಹಾಗೂ V l ಶಾಂತ ಗೇರಿ ಶಿಕ್ಷಕರು ಕಾರ್ಯನಿರ್ವಹಿಸಿದರು.ಈ ಸಂದರ್ಭದಲ್ಲಿ ಸದಸ್ಯರಿಗೆ ಮ್ಯೂಸಿಕಲ್ ಚೇರ್ ಆಟವನ್ನು V F ಕಲಕಂಬಿ ಆಟ ಆಡಿಸಿದರು.