ಬೆಂಗಳೂರು –
ದಿನದಿಂದ ದಿನಕ್ಕೆ ಕಂಗ್ಗಂಟಾಗುತ್ತಿರುವ ಶಿಕ್ಷಕರ ವರ್ಗಾವಣೆ ವಿರುದ್ದ ನಾಡಿನ ಶಿಕ್ಷಕರು ಸಿಡಿದೆದ್ದಿದ್ದಾರೆ ಹೌದು ಇಂತಹ ದರಿದ್ರ ವರ್ಗಾವಣೆ ನೀತಿ ಶಿಕ್ಷಕ ಸಮುದಾಯಕ್ಕೆ ಮಾರಕ, ಯಾರಿಗಾದರೂ ಕಾಮನ್ ಸೆನ್ಸ್ ಇರುವವರು ಈ ನಿಯಮ ಮಾಡುವುದಕ್ಕೆ ಸಾಧ್ಯನಾ? ಎಂದು ಪ್ರಶ್ನೆ ಮಾಡತಾ ಇದ್ದಾರೆ.ಇವತ್ತಿನ ಪತಿ ಪತ್ನಿ ಪ್ರಕರಣದಲ್ಲಿ ವರ್ಗಾವಣೆ ನಡೆಯುತ್ತಿರುವುದು out district within unit ಬೇರೆ ಜಿಲ್ಲೆಯಿಂದ ಇನ್ನೊಂದು ಜಿಲ್ಲೆಗೆ ಆಗಬೇಕು ಆದರೆ ಪತ್ನಿ ಬೇರೆ ಜಿಲ್ಲೆಯಾಗಿದ್ದು ಪತಿ ಬೆಂಗಳೂರು ಉತ್ತರ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವಾಗ ಜಿಲ್ಲೆಗೆ ಕೊಡುವುದಿಲ್ಲವಂತೆ,ಅದೇ ತಾಲ್ಲೂಕು ಮಾತ್ರ ಅಂತೆ, ಪಕ್ಕದ ತಾಲ್ಲೂಕು ಖಾಲಿ ಇದ್ದರೂ ಕೊಡುವುದಿಲ್ಲವಂತೆ
ಹಾಗಾದರೆ out of district within unit ಎಂದು ಯಾಕೆ ಮಾಡಬೇಕಾಗಿತ್ತು out of district within taluk ಎಂದು ಮಾಡಬೇಕಾಗಿತ್ತು, ಬೆಂಗಳೂರು ವಲಯ ಎಂದು ತಾಲ್ಲೂಕು ನ್ನು ಘಟಕ ಎಂದು ಪ್ರೌಢಶಾಲೆಗೆ ಮಾಡಿದರೆ,ಕಳೆದ 15 ವರ್ಷಗಳಿಂದಲೂ ಈ ವರ್ಷ ಇದ್ದದ್ದು ಮುಂದಿನ ವರ್ಷ ಇರಲ್ಲ,ಹೋಗಲಿ ನ್ಯಾಯಯುತ ವಾದ ತಿದ್ದುಪಡೀನು ಆಗಲ್ಲ.ಕಡ್ಡಾಯದಲ್ಲಿ ಕೆಲಸಕ್ಕೆ ಸೇರಿದ 25 ವರ್ಷಗಳು ಎ ಕೇಂದ್ರ ಬೆಂಗಳೂರಿನಲ್ಲಿದ್ದು ಕೇವಲ 1 ವರ್ಷ ಹೊರಗೆ ಹೋದವರನ್ನು ಮತ್ತೆ ಇವರೇ ರತ್ನ ಗಂಬಳಿ ಹಾಸಿ ಕರೆತಂದ ಮಹಾನ್ ವ್ಯಕ್ತಿಗಳಿಗೆ ಇದೇ ಶಿಕ್ಷಕ ವರ್ಗ 16&17 ವರ್ಷಗಳಿಂದ ಕಪಲ್ ಕೇಸ್ ಇದ್ದರೂ ಹತ್ತಿರ ಬೇಡ ಒಂದು ಜಿಲ್ಲೆಗಾದರೂ ಬರುವುದಕ್ಕೆ ಅವಕಾಶ ಇಲ್ಲ ಎಂದರೆ ಇದು ಎಂತಹ ವರ್ಗಾವಣೆ ಇದನ್ನೆಲ್ಲ ನೋಡಿ ಕೊಂಡು ಜೈಜೈ ಎನ್ನುವ ಶಿಕ್ಷಕ ವರ್ಗ ಪ್ರತಿನಿಧಿ ವರ್ಗ ಕ್ಕೆ ಬಹಳ ನೋವಿನಿಂದ ಹೇಳುವೆ ಧಿಕ್ಕಾರವಿರಲಿ.ಈ ಒಂದು ಸಂದೇಶವೊಂದನ್ನು ಯಥಾವತ್ತಾಗಿ ಪ್ರಕಟ ಮಾಡಲಾಗಿದೆ