ಬೆಂಗಳೂರು –
10 ದಿನ ಬ್ಯಾಗ್‌ರಹಿತ ದಿನಕ್ಕೆ ಅವಕಾಶ ನೀಡಿ ಆದೇಶ ವನ್ನು ಮಾಡುವಂತೆ NEP ಸಮಿತಿ ರಾಜ್ಯ ಸರ್ಕಾರಕ್ಕೆ ಸಲಹೆ ಯನ್ನು ನೀಡಿದೆ.ಹೌದು ಈಗಾಗಲೇ ಹತ್ತು ಹಲ ವಾರು ಸಲಹೆಗಳನ್ನು ನೀಡಿರುವ ಈ ಒಂದು ಸಮಿತಿ ಶೈಕ್ಷಣಿಕ ವರ್ಷದ ಕೊನೆಯ 10 ದಿನಗಳು ಬ್ಯಾಗ್ ರಹಿತ ದಿನವೆಂದು ಘೋಷಿಸಿ ಸುವಂತೆ ಒತ್ತಾಯವನ್ನು ಮಾಡಿದೆ
ಇನ್ನೂ ಆ ದಿನಗಳನ್ನು ಸೇವಾ ದಿನ ಎಂದು ಪರಿಗಣಿಸಿ ಮಕ್ಕಳನ್ನು ವೃತ್ತಿಪರ ಕುಶಲ ಕರ್ಮಿಗಳ ಬಳಿ ತರಬೇತಿಗೆ ಕಳುಹಿಸಬೇಕು.ಅಲ್ಲದೇ ಕುಂಬಾರ,ಮರಗೆಲಸ, ಕಲಾವಿ ದರ ಬಳಿಗೆ ಮಕ್ಕಳನ್ನು ಕರೆದೊಯ್ದು ಕಲೆ,ಕರಕುಶಲ ಕ್ಷೇತ್ರ ದಲ್ಲಿ ಆಸಕ್ತಿ ಮೂಡಿಸಬೇಕು ಎಂದು ಸಲಹೆ ನೀಡಲಾಗಿದೆ.