ಕರ್ನಾಟಕ ಆಡಳಿತ ಸುಧಾರಣಾ ಆಯೋಗದ 7ನೇ ವರದಿ ಸಲ್ಲಿಕೆಗೆ ಮಹೂರ್ತ ಫೀಕ್ಸ್ –  ಇಂದೇ ಸಲ್ಲಿಕೆಯಾಗಲಿದೆ ಮತ್ತೊಂದು ವರದಿ…..7ನೇ ವೇತನ ಆಯೋಗದ ವರದಿ ಏನಾಯಿತು ಹೇಳಿ…..

Suddi Sante Desk
ಕರ್ನಾಟಕ ಆಡಳಿತ ಸುಧಾರಣಾ ಆಯೋಗದ 7ನೇ ವರದಿ ಸಲ್ಲಿಕೆಗೆ ಮಹೂರ್ತ ಫೀಕ್ಸ್ –  ಇಂದೇ ಸಲ್ಲಿಕೆಯಾಗಲಿದೆ ಮತ್ತೊಂದು ವರದಿ…..7ನೇ ವೇತನ ಆಯೋಗದ ವರದಿ ಏನಾಯಿತು ಹೇಳಿ…..

ಬೆಂಗಳೂರು

7ನೇ ವೇತನ ಆಯೋಗದ ವರದಿ ಸಲ್ಲಿಕೆಗೆ ಮಹೂರ್ತ ಫೀಕ್ಸ್ ಆಗುವ ಲಕ್ಷಣಗಳು ಕಾಣುತ್ತಿಲ್ಲ ಈ ಹಿಂದೆ ರಚನೆ ಮಾಡಿದ ಎಲ್ಲಾ ಆಯೋಗದ ವರದಿ ಗಳು ಸಲ್ಲಿಕೆ ಆಗುತ್ತಿದ್ದು  ಈಗ ಕರ್ನಾಟಕ ಆಡಳಿತ ಸುಧಾರಣಾ ಆಯೋಗದ 7 ನೇ ವರದಿ ಕೂಡಾ  ಇಂದೇ ಸಲ್ಲಿಕೆಯಾಗಲಿದೆ ವರದಿ…..ಹೌದು

ಕೊನೆಗೂ 7ನೇ ವೇತನ ಆಯೋಗದ ಅವಧಿ ಮಾರ್ಚ್ 15 ಕ್ಕೆ ಮುಕ್ತಯವಾಗಲಿದ್ದು ವರದಿ ಸಲ್ಲಿಕೆಗೆ ಇನ್ನೂ ಕಾಲ ಕೂಡಿ ಬರಲು ಲಕ್ಷಣಗಳು ಕಾಣುತ್ತಿಲ್ಲ.ಹೌದು ರಾಜ್ಯ ಸರ್ಕಾರಿ ನೌಕರರ ವೇತನ ಪರಿಷ್ಕ್ರರಣೆ ವಿಚಾರ ಕುರಿತಂತೆ ರಾಜ್ಯ ಸರ್ಕಾರ ಈಗಾಗಲೇ 7ನೇ ವೇತನ ಆಯೋಗ ವನ್ನು ರಚನೆ ಮಾಡಿದೆ.

ಸುಧಾಕರ ಅವರ ನೇತ್ರತ್ವ ದಲ್ಲಿನ ಆಯೋಗವು ಈಗಾಗಲೇ ವರದಿಯನ್ನು ಸಂಪೂರ್ಣವಾಗಿ ಸಿದ್ದತೆಯನ್ನು ಮಾಡಿದ್ದು ಇದರ ನಡುವೆ ಎರಡು ಬಾರಿ ಅವಧಿಯನ್ನು ವಿಸ್ತರಣೆ ಮಾಡಿದ ಬೆನ್ನಲ್ಲೇ ಮಾರ್ಚ್ 15 ಕ್ಕೆ ಎರಡನೇಯ ಹಂತದ ಅವಧಿ ಮುಕ್ತಾಯವಾಗಲಿದೆ.

ಇದೇಲ್ಲದರ ನಡುವೆ ಸಧ್ಯ 7ನೇ ಆಯೋಗವು ಈ ಒಂದು ವರದಿಯನ್ನು ರಾಜ್ಯ ಸರ್ಕಾರಕ್ಕೆಮಾರ್ಚ್ 15 ಅವಧಿ ಮುಕ್ತಾಯವಾಗುತ್ತಾ ಬಂದರು ಕೂಡಾ ಇನ್ನೂ ಈ ಒಂದು ವಿಚಾರದ ಮಾತೆ ಇಲ್ಲ ಈ ಹಿಂದೆ ರಚನೆಗೊಂಡಿರುವ ಆಯೋಗದ ವರದಿಗಳು ಒಂದೊಂದಾಗಿ ಸಲ್ಲಿಕೆ ಯಾಗುತ್ತಿದ್ದು ಸಧ್ಯ ಕರ್ನಾಟಕ ಆಡಳಿತ ಸುಧಾರಣಾ ಆಯೋಗದ 7ನೇ ವರದಿ ಸಲ್ಲಿಕೆಯಾಗಲಿದೆ ಒಂದು ಕುರಿತಂತೆ ಮುಖ್ಯಮಂತ್ರಿ ಯವರ ಕಾರ್ಯಕಲಾ ಪಗಳ ಪಟ್ಟಿಯಲ್ಲಿ ಈ ಒಂದು ವಿಚಾರ ಕುರಿತಂತೆ ಉಲ್ಲೇಖವನ್ನು ಮಾಡಲಾಗಿದೆ

ಮಧ್ಯಾಹ್ನ 3 ಗಂಟೆಗೆ ಮುಖ್ಯಮಂತ್ರಿಯವರ ಕಾವೇರಿ ನಿವಾಸದಲ್ಲಿ ಈ ಒಂದು ವರದಿಯನ್ನು ನಾಡದೋರೆಗೆ ಸಲ್ಲಿಕೆ ಮಾಡಲಿದ್ದಾರೆ.

ಕಳೆದ ಫೆಬ್ರುವರಿ 27 ರಂದು ಬೆಂಗಳೂರಿನಲ್ಲಿ ರಾಜ್ಯ ಸರ್ಕಾರಿ ನೌಕರರ ಮಹಾ ಸಮ್ಮೇಳನ ಕಾರ್ಯಕ್ರಮದಲ್ಲೂ ಬಜೆಟ್ ನಲ್ಲೂ 7ನೇ ವೇತನ ಜಾರಿಗೆ ಕುರಿತಂತೆ ಯಾವುದೇ ಗುಡ್ ನ್ಯೂಸ್ ನ್ನು ಮುಖ್ಮಮಂತ್ರಿ ನೀಡಲಿಲ್ಲ ಹೀಗಾಗಿ ಮಹಾ ಸಮ್ಮೇಳನದ ಬೆನ್ನಲ್ಲೇ 7ನೇ ವೇತನ ಆಯೋಗ ಜಾರಿಗೆ ಮತ್ತು ಹಳೆ ಪಿಂಚಣಿ ಯೋಜನೆಯ ವಿಚಾರದಲ್ಲಿ ರಾಜ್ಯ ಸರ್ಕಾರಿ ನೌಕರರ ಅಸಮಾಧಾನಗೊಂಡಿದ್ದರು

ಅಲ್ಲದೇ ಹೋರಾಟಕ್ಕೂ ಸಿದ್ದತೆಯನ್ನು ಮಾಡಿಕೊಂಡಿದ್ದರು.ಹೋರಾಟಕ್ಕೆ ಮುಂದಾ ಗುತ್ತಿರುವ ವಿಚಾರವನ್ನು ತಿಳಿದುಕೊಂಡ ಗುಪ್ತ ಚರ ಇಲಾಖೆ ಈಗಾಗಲೇ ರಾಜ್ಯ ಸರ್ಕಾರಕ್ಕೆ ಮಾಹಿತಿ ಯನ್ನು ನೀಡಿತ್ತು ಇದೇಲ್ಲದರ ನಡುವೆ ಮಾರ್ಚ್ 15 ದಿನಾಂಕ ಮುಗಿಯುತ್ತಾ ಬಂದರು ಕೂಡಾ ಸರ್ಕಾರ ಮತ್ತು ಅಯೋಗವು ಈ ಒಂದು ವಿಚಾರ ಕುರಿತು ಮಾತನಾಡುತ್ತಿಲ್ಲ

ಎಲ್ಲಾ ಆಯೋಗದ ವರದಿಗಳು ಸಲ್ಲಿಕ  ಯಾಗು ತ್ತಿದ್ದು ಈಗ 7ನೇ ವೇತನ ಆಯೋಗದ ವರದಿ ವಿಚಾರದಲ್ಲಿ ಮೌನ ಯಾಕೆ ರಾಜ್ಯ ಸರ್ಕಾರಿ ನೌಕರರು ಮತ್ತೊಮ್ಮೆ ಸಿಡಿದೆಳುವ ಮುನ್ನ  ರಾಜ್ಯ ಸರ್ಕಾರ ಈ ಒಂದು ವಿಚಾರ ದಲ್ಲಿ ಕಣ್ತೇರೆದು ನೋಡಬೇಕಿದೆ.

ಸುದ್ದಿ ಸಂತೆ ನ್ಯೂಸ್ ಬೆಂಗಳೂರು……

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.