ನವದೆಹಲಿ –
ದೇಶದಲ್ಲಿ ಕೋವಿಡ್ 2ನೇ ಅಲೆ ಹಿಂದೆಂದಿಗಿಂತಲೂ ಭೀಕರವಾಗಿದ್ದು ದೈನಂದಿನ ಕೇಸ್ ಗಳು 4 ಲಕ್ಷಕ್ಕಿಂ ತಲೂ ಹೆಚ್ಚು ಪತ್ತೆಯಾಗ್ತಿದೆ. ಮತ್ತೊಂದೆಡೆ ಚಿಕಿತ್ಸೆ ಸಿಗದೇ ಆಕ್ಸಿಜನ್ ಕೊರತೆ ಬೆಡ್ ಅಲಭ್ಯದಿಂದಾಗಿ ಜನ ಸಾಯುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ 2ನೇ ಅಲೆಯನ್ನು ತಡೆಗಟ್ಟಲು ಲಾಕ್ ಡೌನ್ ಉತ್ತಮ ಮಾರ್ಗ.ಹೀಗಾಗಿ ಲಾಕ್ ಡೌನ್ ಜಾರಿಗೊಳಿಸುವಂತೆ ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳಿಗೆ ಸಲಹೆ ನೀಡಿದೆ.
ಇದೇ ವೇಳೆ ಕೊರೊನಾ ಸೋಂಕಿತರನ್ನು ಆಸ್ಪತ್ರೆಗ ಳಲ್ಲಿ ದಾಖಲಿಸಿಕೊಳ್ಳಲು ಅಥವಾ ತುರ್ತು ವೈದ್ಯಕೀ ಯ ನೆರವು ನೀಡಲು ನಿರಾಕರಿಸಬಾರದು ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿ ದೆ.ಕೋವಿಡ್ 19 ಸೋಂಕಿತ ರೋಗಿಗಳ ದಾಖಲಾತಿ ಕುರಿತಂತೆ ಎರಡು ವಾರಗಳಲ್ಲಿ ರಾಷ್ಟ್ರೀಯ ನೀತಿ ಯನ್ನು ರೂಪಿಸುವಂತೆ ಸುಪ್ರೀಂಕೋರ್ಟ್ ನ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ನ್ಯಾಯಪೀಠ ಸೂಚನೆ ನೀಡಿರುವುದಾಗಿ ವರದಿ ತಿಳಿಸಿದೆ.ಕೇಂದ್ರ ಸರ್ಕಾರ ರೂಪಿಸುವ ನೀತಿಯನ್ನು ಎಲ್ಲಾ ರಾಜ್ಯ ಸರ್ಕಾರಗಳು ಅನುಸರಿಸಬೇಕು ಅಲ್ಲ ದೇ ಗುರುತ ಪತ್ರ ಸ್ಥಳೀಯ ನಿವಾಸಿ ದಾಖಲೆಯ ಇಲ್ಲದ ಕಾರಣ ನೀಡಿ ಯಾವುದೇ ರೋಗಿಗಳನ್ನು ಆಸ್ಪತ್ರೆಗಳಲ್ಲಿ ದಾಖಲಿಸಿಕೊಳ್ಳಲು ನಿರಾಕರಿಸಬಾ ರದು ಎಂದು ಎಚ್ಚರಿಕೆ ನೀಡಿದೆ
ವರದಿ ಸುದ್ದಿ ಸಂತೆ ಡೆಸ್ಕ್ ಬೆಂಗಳೂರು