ಹುಬ್ಬಳ್ಳಿ –
ತಮ್ಮನ ಹುಟ್ಟುಹಬ್ಬಕ್ಕಾಗಿ ಐತಿಹಾಸಿಕ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಸುರೇಶ ಗೋಕಾಕ್ – ಸಹೋದರ ಕುಟುಂಬಕ್ಕೆ ಸಾಥ್ ನೀಡಿದ ಗೆಳೆಯರು…..ಕೇಕ್ ಪಾರ್ಟಿ ಎನ್ನದೇ ದೇವಸ್ಥಾನದಲ್ಲಿ ಸರಳವಾಗಿ ಪೂಜೆ ಪುನಸ್ಕಾರ ದೊಂದಿಗೆ ಹೊಸದೊಂದು ಸಂಪ್ರದಾಯಕ್ಕೆ ಮುನ್ನುಡಿ ಬರೆದ ಗೋಕಾಕ್ ಸಹೋದರರು
ಸಾಮಾನ್ಯವಾಗಿ ಹುಟ್ಟು ಹಬ್ಬ ಎಂದರೇ ಅಲ್ಲಿ ಕೇಕ್ ಕಟ್ ಮಾಡಿ ಭರ್ಜರಿಯಾದ ಪಾರ್ಟಿ ಆಯೋಜಿಸಲಾಗಿತ್ತದೆ.ಅದರಲ್ಲೂ ಸೆಲೆಬ್ರಿಟಿ ಗಳಿದ್ದರೂ ಸಾಕು ಅಭಿಮಾನಿಗಳು ಆಪ್ತರು ಗೆಳೆಯರು ಎನ್ನುತ್ತಾ ಕೇಕ್ ಕತ್ತರಿಸಿ ಅದ್ದೂ ರಿಯಾದ ಪಾರ್ಟಿಯನ್ನು ಆಯೋಜನೆ ಮಾಡ ಲಾಗುತ್ತದೆ ಇದ್ದೇ ಇರುತ್ತದೆ
ಇದೇಲ್ಲದರ ನಡುವೆ ಹುಬ್ಬಳ್ಳಿಯಲ್ಲೊಂದು ವಿಶೇಷವಾದ ಹುಟ್ಟು ಹಬ್ಬದ ಆಚರಣೆ ಕಾರ್ಯಕ್ರಮವೊಂದು ಕಂಡು ಬಂದಿತು.ಹೌದು ಪ್ರತಿಯೊಂದರಲ್ಲೂ ವಿಶೇಷವಾದ ಕಾರ್ಯಕ್ರಮ ಗಳೊಂದಿಗೆ ಗುರುತಿಸಿಕೊಂಡಿರುವ ಸುರೇಶ ಗೋಕಾಕ್ ತಮ್ಮ ಸಹೋದರ ಜಗದೀಶ್ ಗೋಕಾಕ್ ಅವರ ಹುಟ್ಟು ಹಬ್ಬವನ್ನು ಅದ್ದೂರಿ ಯಾಗಿ ಕೇಕ್ ಕತ್ತರಿಸಿ ಪಾರ್ಟಿ ಯನ್ನು ಮಾಡದೇ ಪ್ರತಿ ವರ್ಷದಂತೆ ಈವರ್ಷವೂ ಕೂಡಾ ದೇವಸ್ಥಾನದಲ್ಲಿ ವಿಶೇಷವಾಗಿ ಪೂಜೆಯನ್ನು ಸಲ್ಲಿಸಿ ಸರಳವಾಗಿ ಹುಟ್ಟು ಹಬ್ಬವನ್ನು ಆಚರಣೆ ಮಾಡಿ ಸಹೋದರನಿಗೆ ಪ್ರೀತಿಯ ಕೊಡುಗೆ ಯನ್ನು ನೀಡಿದರು
ಹೌದು ಸಹೋದರನ ಜನ್ಮದಿನದ ಅಂಗವಾಗ ದೇವರ ನಾಡು ಕೇರಳ ರಾಜ್ಯಕ್ಕೆ ತೆರಳಿ ಅಲ್ಲಿನ ಐತಿಹಾಸಿಕ ಅನಂತ ಪದ್ಮನಾಭ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಸಹೋದರನ ಒಳಿತಿಗಾಗಿ ಪ್ರಾರ್ಥನೆಯನ್ನು ಸಲ್ಲಿಸಿದರು.ಮಕ್ಕಳು ಮತ್ತು ಅಭಿಮಾನಿಗಳು ಗೆಳೆಯರೊಂದಿಗೆ ತೆರಳಿ ಐತಿಹಾಸಿಕ ದೇವಸ್ಥಾನದಲ್ಲಿ ಪೂಜೆಯನ್ನು ಮಾಡಿ ಸಹೋದರ ಜಗದೀಶ್ ಗೋಕಾಕ್ ನ ಹುಟ್ಟು ಹಬ್ಬವನ್ನು ಸರಳವಾಗಿ ಅರ್ಥಪೂರ್ಣ ವಾಗಿ ಆಚರಣೆ ಮಾಡಿದ್ದು ಕಂಡು ಬಂದಿತು.
ಇನ್ನೂ ಇದರೊಂದಿಗೆ ಇತ್ತ ಹುಬ್ಬಳ್ಳಿಯ ಗಬ್ಬೂರಿ ನಲ್ಲಿರುವ ವಸತಿ ನಿಲಯದ ಮಕ್ಕಳಿಗೆ ಅನ್ನ ಪ್ರಸಾದವನ್ನು ಮಾಡಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ಹುಟ್ಟು ಹಬ್ಬವನ್ನು ಆಚರಣೆ ಮಾಡಿದ್ದು ಕಂಡು ಬಂದಿತು.ಪ್ರತಿಯೊಂದರಲ್ಲೂ ವಿಶೇಷವಾಗಿ ನಾಲ್ಕು ಜನ ಮೆಚ್ಚುವಂತೆ ಕಾರ್ಯ ಕ್ರಮಗಳನ್ನು ಮಾಡುತ್ತಿರುವ ಸುರೇಶ್ ಗೋಕಾಕ್ ಸಧ್ಯ ಸಹೋದರನ ಹುಟ್ಟು ಹಬ್ಬವನ್ನು ಕೂಡಾ ವಿಶೇಷವಾಗಿ ಮಾಡುತ್ತಾ ಹೊಸ ಸಂಪ್ರದಾಯಕ್ಕೆ ಮುನ್ನುಡಿ ಬರೆದಿದ್ದಾರೆ.
ಸುರೇಶ್ ಗೋಕಾಕ್ ಅವರೊಂದಿಗೆ ಮಕ್ಕಳು, ಜಗದೀಶ್ ಗೋಕಾಕ್,ಯಲ್ಲಪ್ಪ ಅಂಬಿಗೇರ, ಕಿರಣ ಭಜಂತ್ರಿ,ಅಶೋಕ ಹಾದಿಮನಿ,ಸೇರಿದಂತೆ ಹಲವರು ಉಪಸ್ಥಿತರಿದ್ದು ಹುಟ್ಟು ಹಬ್ಬದ ಸಂಭ್ರಮದಲ್ಲಿರುವ ಜಗದೀಶ್ ಗೋಕಾಕ್ ಅವರಿಗೆ ಶುಭ ಹಾರೈಸಿದರು.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..