ಬೆಂಗಳೂರು –
ಶಿಕ್ಷಕರ ವರ್ಗಾವಣೆ ವಿಚಾರದಲ್ಲಿ ಈವರೆಗೆ ಕೇಳಿ ಕೇಳಿ ನೋಡಿ ನೋಡಿ ಬೇಸತ್ತ ಶಿಕ್ಷಕರ ನೋವಿನ ಧ್ವನಿಯಾಗಿ ಈಗ ಅವರ ಮಕ್ಕಳು ಧ್ವನಿ ಎತ್ತಿದ್ದಾರೆ ಹೌದು ತಂದೆ,ತಾಯಿಯ ನೌಕರಿ ಒಂದು ಕಡೆ ಮಕ್ಕಳು ಮತ್ತೊಂದು ಕಡೆಗೆ ವರ್ಗಾವಣೆ ಸಿಗದೇ ತಂದೆ ತಾಯಿ ಗಳಿಂದ ದೂರವಿರುವ ಮಕ್ಕಳು ದಯಮಾಡಿ ನಮ್ಮ ತಂದೆ ತಾಯಿ ಅವರನ್ನು ವರ್ಗಾವಣೆ ಮಾಡಿ ಎನ್ನುತ್ತಿದ್ದಾರೆ.

ಕಳೆದ ಹಲವಾರು ವರ್ಷಗಳಿಂದ ವರ್ಗಾವಣೆಗಾಗಿ ಕಾದು ಕಾದು ಬೇಸತ್ತು ಈಗ ಪೋಷಕರ ನರಕಯಾ ತನೆಯ ಧ್ವನಿಗೆ ಮಕ್ಕಳು ಧ್ವನಿ ಎತ್ತಿದ್ದಾರೆ

ದಯಮಾಡಿ ನಮ್ಮ ತಂದೆ ತಾಯಿ ಅವರನ್ನು ವರ್ಗಾವಣೆ ಮಾಡಿ ಎನ್ನುತ್ತಾ ಪೋಷಕರ ಧ್ವನಿ ಯಾಗಿ ಈಗ ರಾಜ್ಯಾದ್ಯಂತ ಅವರ ಮಕ್ಕಳು ಧ್ವನಿ ಎತ್ತಿದ್ದಾರೆ

25% ರಷ್ಟು ತೊಲಗಿಸಿ,ತಂದೆ ತಾಯಿ ಯೊಂದಿಗೆ ಮಕ್ಕಳನ್ನು ಒಂದುಗೂಡಿಸಿ ದಯಮಾಡಿ ಮಕ್ಕಳ ಮೇಲೆ ಕರುಣೆ ತೋರಿಸಿ ಎಂದು ಮಕ್ಕಳು ಶಿಕ್ಷಣ ಸಚಿವ ಸುರೇಶ್ ಕುಮಾರ್ ಬಳಿ ಕೇಳಿಕೊಂಡಿದ್ದಾರೆ
ವರ್ಗಾವಣೆಗೆ ನಾಳೆ ಈಗ ಸಂಜೆ ಆದೇಶ ಮಾರ್ಗ ಸೂಚಿ ಬರುತ್ತವೆ ಎಂದಿದ್ದಾರೆ ಆದರೂ ಬಂದಾಗ ಮಾತ್ರ ನಂಬಲು ಸಾಧ್ಯ ಎಂಬ ಮಾತಿನಲ್ಲಿ ನಾಡಿನ ಶಿಕ್ಷಕರು ಇದ್ದಾರೆ ಒಟ್ಟಾರೆ ಏನೇ ಆಗಲಿ ಮಕ್ಕಳ ಕೂಗಿಗೆ ಆದರೂ ಮಾನ್ಯ ಶಿಕ್ಷಣ ಸಚಿವರೇ ಸ್ಪಂದಿಸಿ ವರ್ಗಾವಣೆ ಭಾಗ್ಯ ಕಲ್ಪಿಸಿ