ಬೆಂಗಳೂರು –
ಕೆಲವು ದಿನಗಳ ಹಿಂದೆ ಬೆಂಗಳೂರಿನ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯೊಬ್ಬರು ತಾವು ಮಾಡದಿರುವ ಕೃತ್ಯಕ್ಕೆ ಶಿಕ್ಷೆ ಅನುಭ ವಿಸುವ ಘಟನೆ ನಡೆದಿತ್ತು.ಆ ಶಾಲೆಯ ಮಕ್ಕಳ ಪೋಷಕ ರಲ್ಲದ ನೂರಾರು ಮಂದಿ ಶಾಲೆಯ ಮುಂದೆ ಜಮಾಯಿಸಿ ಆಧಾರರಹಿತ ಗಲಾಟೆ ಮಾಡಿದ್ದರು.ಸುಳ್ಳು ವದಂತಿ ಹಬ್ಬಿಸಿ ಈ ಗಲಾಟೆ ಮಾಡಿದ್ದರು.ನಂತರ ಶಿಕ್ಷಕಿ ರಾಜೀನಾಮೆ ಯನ್ನು ಕೂಡಾ ನೀಡಿದ್ದರು.ಹೌದು ಇದೆಲ್ಲಾ ಬೆಳವಣಿಗೆಯ ನಡುವೆ ಚಂದ್ರಾ ಲೇಔಟ್ ವಿದ್ಯಾಸಾಗರ್ ಶಾಲೆಯ ಶಿಕ್ಷಕಿ ಶಶಿಕಲಾ ಅವರ ಮನೆಗೆ ಮಾಜಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಭೇಟಿ ನೀಡಿ ದರು ಇದೇ ವೇಳೆ ಮಾತನಾಡಿ ಬೇರೆ ಕಡೆ ಉದ್ಯೋಗ ನೀಡುವ ಬಗ್ಗೆ ಮಾತನಾಡಿದ್ದು ಈ ವಿಚಾರದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ದೀರ್ಘವಾದ ಪೋಸ್ಟ್ ಪ್ರಕಟಿಸಿ ವಿಷಯವನ್ನು ಹಂಚಿಕೊಂಡಿದ್ದಾರೆ.

ಆಕೆಯ ಅಪ್ಪ ಅಮ್ಮನ ಅಳಲು ಆಲಿಸಿದ ನನಗೆ ಬೇಸರವಾಯಿತು.ವಿನಾಕಾರಣ ಗಲಾಟೆ ಮಾಡಿ ಈ ಶಿಕ್ಷಕಿಯ ಕುಟುಂಬದ ಅನ್ನ ಕಸಿದುಕೊಂಡ ಆ ಗುಂಪಿನ ಬಗ್ಗೆ ತೀವ್ರ ತಿರಸ್ಕಾರ ಮೂಡಿತು.ಈಗ ಶಿಕ್ಷಕಿ ರಾಜೀನಾಮೆ ಕೊಟ್ಟಿದ್ದಾರೆ.ಬದಲಿ ಶಿಕ್ಷಕಿ ಸದ್ಯಕ್ಕಂತೂ ಇಲ್ಲ.ಆ ಕುಟುಂ ಬದ ಜೊತೆ ಸುಮಾರು ಹೊತ್ತು ಮಾತನಾಡಿ ಒಂದಷ್ಟು ಧೈರ್ಯ ತುಂಬಿ ಬಂದಿದ್ದೇನೆ.ಶಾಲೆಯ ಮುಖ್ಯಸ್ಥರೊಂದಿಗೆ ಮಾತನಾಡಿ ಶಿಕ್ಷಕಿಗೆ ಅಗತ್ಯ ಆರ್ಥಿಕ ಸಹಾಯ ನೀಡು ವಂತೆ ಕೇಳಿದ್ದೇನೆ ಎಂದರು.ಅವರೂ ಪೂರಕವಾಗಿ ಸ್ಪಂದಿಸಿದ್ದಾರೆ.ಶಿಕ್ಷಕಿಗೆ ಬೇರೆಡೆ ಉದ್ಯೋಗ ಕೊಡಿಸುವ ಬಗ್ಗೆಯೂ ಮಾತನಾಡಿದ್ದೇನೆ.ತಪ್ಪು ಗ್ರಹಿಕೆ ಹಾಗೂ ಸಮೂಹ ಸನ್ನಿ ಯಿಂದ ಅಮಾಯಕರ ಜೀವನ ಹೇಗೆ ಸಂಪೂರ್ಣ ನಲುಗಿ ಹೋಗುತ್ತದೆ ಎಂಬುದಕ್ಕೆ ಈ ಶಿಕ್ಷಕಿಯ ಕುಟುಂಬವೇ ಸಾಕ್ಷಿಯಾಗಿದೆ ಎಂದು ಸುರೇಶ್ ಕುಮಾರ್ ಹೇಳಿದರು.