ಬೆಂಗಳೂರು –
1 ರಿಂದ 5 ತರಗತಿಯಲ್ಲಿ ಬೋಧಿಸುವ ಶಿಕ್ಷಕರ ಪರ ಧ್ವನಿ ಎತ್ತಿದ್ದಾರೆ ಶಿಕ್ಷಣ ಸಚಿವ ಸುರೇಶ್ ಕುಮಾರ್. ಹೌದು ಇವರಿಗೆ ಪ್ರೌಢ ಶಾಲಾ ಶಿಕ್ಷಕರ ಹುದ್ದೆಯ ವಿಚಾರದಲ್ಲಿ ಅನ್ಯಾಯ ಆಗುತ್ತಿರುವ ಕುರಿತು ಉಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಲಾಗಿದೆ ಎಂದಿದ್ದಾರೆ.
ಯಾವುದೇ ಶಿಕ್ಷಕರಿಗೂ ತೊಂದರೆ ಆಗದ ರೀತಿ ಯಲ್ಲಿ ಪೂರ್ವಭಾವಿ ಕ್ರಮಗಳನ್ನು ತಗೆದುಕೊಳ್ಳುವ ಮತ್ತು ಅಗತ್ಯ ಕ್ರಮಗಳನ್ನು ಕೈಗೊಳ್ಳುವ ಉದ್ದೇಶ ದಿಂದಾಗಿ ಸೂಚಿಸಲಾಗಿದೆ ಎಂದು ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ. ಕೊನೆಗೂ ಮೌನ ಮುರಿದು ಉಚ್ಚ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿ ಆ ಶಿಕ್ಷಕರ ಪರ ನಿಂತುಕೊಂಡಿದ್ದು ಇನ್ನೂ ಈ ಒಂದು ಕುರಿತು ಟಿಪ್ಪಣಿ ಪತ್ರ ವೈರಲ್ ಆಗಿದ್ದು ದಿನಾಂಕ ಮಾತ್ರ ಸಂಶಯವನ್ನು ಹುಟ್ಟು ಹಾಕಿದೆ