ಗೃಹ ಪ್ರವೇಶ,ಹುಟ್ಟು ಹಬ್ಬ,ಮದುವೆ ಏನೇ ಯಾವುದೇ ಕಾರ್ಯಕ್ರಮವಿರಲಿ ಪವಿತ್ರ ಭಗವದ್ಗೀತೆ ನೀಡಿ ಶುಭ ಹಾರೈಕೆ – ರಾಜ್ಯಕ್ಕೆ ಮಾದರಿಯಾಗುತ್ತಿದೆ ಸುರೇಶ ಗೋಕಾಕ್ ಮತ್ತು ಟೀಮ್ ಕಾರ್ಯ ಸಾರ್ವಜನಿಕರಿಂದ ಮೆಚ್ಚುಗೆ…..

Suddi Sante Desk
ಗೃಹ ಪ್ರವೇಶ,ಹುಟ್ಟು ಹಬ್ಬ,ಮದುವೆ ಏನೇ ಯಾವುದೇ ಕಾರ್ಯಕ್ರಮವಿರಲಿ ಪವಿತ್ರ ಭಗವದ್ಗೀತೆ ನೀಡಿ ಶುಭ ಹಾರೈಕೆ – ರಾಜ್ಯಕ್ಕೆ ಮಾದರಿಯಾಗುತ್ತಿದೆ ಸುರೇಶ ಗೋಕಾಕ್ ಮತ್ತು ಟೀಮ್ ಕಾರ್ಯ ಸಾರ್ವಜನಿಕರಿಂದ ಮೆಚ್ಚುಗೆ…..

ಹುಬ್ಬಳ್ಳಿ

ಗೃಹ ಪ್ರವೇಶ,ಹುಟ್ಟು ಹಬ್ಬ,ಮದುವೆ ಏನೇ ಯಾವುದೇ ಕಾರ್ಯಕ್ರಮವಿರಲಿ ಪವಿತ್ರ ಭಗವದ್ಗೀತೆ ನೀಡಿ ಶುಭ ಹಾರೈಕೆ – ರಾಜ್ಯಕ್ಕೆ ಮಾದರಿಯಾಗುತ್ತಿದೆ ಸುರೇಶ ಗೋಕಾಕ್ ಮತ್ತು ಟೀಮ್ ಕಾರ್ಯ ಸಾರ್ವಜನಿಕರಿಂದ ಮೆಚ್ಚುಗೆ.

ಸಾಮಾನ್ಯವಾಗಿ ಮದುವೆ ಹುಟ್ಟು ಹಬ್ಬ ಗೃಹ ಪ್ರವೇಶ ಹೀಗೆ ಏನಾದರೂ ಕಾರ್ಯಕ್ರಮಗಳಿದ್ದರೆ ಗಿಪ್ಟ್ ವೊಂದನ್ನು ತಗೆದುಕೊಂಡು ಹೋಗಿ ಶುಭಾಶಯ ಹೇಳೊದು ಸರ್ವೆ ಸಾಮಾನ್ಯ. ಸಾಲದಂತೆ ಪೊಟೊ ವೊಂದನ್ನು ತಗೆದುಕೊಂಡು ಫೇಸ್ ಬುಕ್ ಗೆ ಸ್ಟೇಟಸ್ ಗೆ ಹಾಕುತ್ತೇವೆ ಇದು ಸರ್ವೆ ಸಾಮಾನ್ಯ ಆದರೆ ಇಲ್ಲೊಬ್ಬರು ಮಾತ್ರ ವಿಚಿತ್ರವಾಗಿದ್ದಾರೆ.ಹೌದು ಹುಬ್ಬಳ್ಳಿಯ ಸುರೇಶ್ ಗೋಕಾಕ್.

ಸಂಗೋಳ್ಳಿ ರಾಯಣ್ಣ ವೇದಿಕೆಯನ್ನು ಹುಟ್ಟು ಹಾಕಿ ಆ ಒಂದು ಸಂಘಟನೆಯ ಮೂಲಕ ಕೆಲವೊಂದಿಷ್ಟು ಸಾಮಾಜಿಕ ಕೆಲಸ ಕಾರ್ಯಗ ಳನ್ನು ಮಾಡಿಕೊಂಡು ಬರುತ್ತಿರುವ ಇವರು ಸಧ್ಯ ಕೆಲ ದಿನಗಳಿಂದ ಮತ್ತೊಂದು ವಿಶೇಷವಾದ ಕೆಲಸದ ಮೂಲಕ ರಾಜ್ಯಕ್ಕೆ ಮಾದರಿಯಾಗಿ ದ್ದಾರೆ.ಹೌದು ಯಾರೇ ಕಾರ್ಯಕ್ರಮಕ್ಕೆ ಆಹ್ವಾನ ಮಾಡಿದರೆ ಸಾಕು ಎಲ್ಲರ ಹಾಗೇ ಕೈಯಲ್ಲೊಂದು ಗಿಪ್ಟ್ ವೊಂದನ್ನು ತಗೆದುಕೊಂಡು ಹೋಗಿ ವಿಷ್ ಮಾಡಿ ಬರದೇ ಭಗವದ್ಗೀತೆಯನ್ನು ನೀಡಿ ವಿಶೇಷ ವಾಗಿ ಅವರಿಗೆ ಶುಭಾಶಯಗಳನ್ನು ವಿನಿಮಯ ಮಾಡುತ್ತಿದ್ದಾರೆ ಸುರೇಶ ಗೋಕಾಕ್.

ಪ್ರತಿಯೊಂದರಲ್ಲೂ ವಿಶೇಷವಾಗಿರುವ ಸುರೇಶ ಗೋಕಾಕ್ ಈಗ ಹೊಸದೊಂದು ಸಂಪ್ರದಾಯ ವನ್ನು ಹುಟ್ಟು ಹಾಕಿದ್ದಾರೆ.ಯಾರಾದರೂ ಯಾವುದೇ ಕಾರ್ಯಕ್ರಮಕ್ಕೆ ಆಹ್ವಾನ ನೀಡಿದರೆ ಸಾಕು ತಪ್ಪದೇ ಹೋಗಿ ಯಾವುದೇ ಕಾರ್ಯಕ್ರಮ ವಿರಲಿ ಅವರಿಗೊಂದು ಪವಿತ್ರ ಭಗವದ್ಗಿತೆಯನ್ನು ನೀಡಿ ಶುಭಾಶಯವನ್ನು ಹೇಳಿ ಬರುತ್ತಾರೆ.

ಬದಲಾದ ವ್ಯವಸ್ಥೆಯ ನಡುವೆಯೂ ಕೂಡಾ ಸಧ್ಯ ಒದುವವರೂ ಕೂಡಾ ಕಡಿಮೆಯಾಗಿದ್ದಾರೆ ಆದರೂ ಕೂಡಾ ಪವಿತ್ರ ಭಗವದ್ಗೀತೆ ಪುಸ್ತಕೆ ಯನ್ನು ನೀಡುತ್ತಿದ್ದಾರೆ.ಯಾವುದೇ ಕಾರ್ಯಕ್ರಮ ವಿರಲಿ ಯಾವುದೇ ಧರ್ಮದ ಏನಾದರೂ ಕಾರ್ಯಕ್ರಮವಿರಲಿ ಆಹ್ವಾನ ಮಾಡಿದರೆ ಸಾಕು ತಪ್ಪದೇ ಅಲ್ಲಿಗೇ ಹೋಗಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ಭಗವದ್ಗೀತೆಯನ್ನು ನೀಡಿ ವಿಶೇಷ ವಾಗಿ ಈ ಒಂದು ಗ್ರಂಥದ ಕುರಿತಂತೆ ತಿಳುವಳಿಕೆ ಯನ್ನು ಮೂಡಿಸಿ ಪವಿತ್ರ ಪುಸ್ತಕದ ಬಗ್ಗೆ ಸಾರ್ವ ಜನಿಕರಲ್ಲಿ ಅರಿವನ್ನು ಮೂಡಿಸುತ್ತಿದ್ದಾರೆ

ಸುರೇಶ್ ಗೋಕಾಕ್, ಬೆನ್ನಿಗೆ ಯುವ ಉತ್ಸಾಹಿ ಪಡೆಯನ್ನು ಕಟ್ಟಿಕೊಂಡು ಅವರಿಗೂ ಕೂಡಾ ಈ ಒಂದು ಪುಸ್ತಕದ ಬಗ್ಗೆ ಮಾಹಿತಿಯನ್ನು ನೀಡುತ್ತಾ ಯುವ ಜನಾಂಗದಲ್ಲಿ ಹೊಸ ಸಂಸ್ಕ್ರತಿ ಸಂಪ್ರದಾ ಯನ್ನು ಹುಟ್ಟು ಹಾಕುತ್ತಿದ್ದಾರೆ ಇವರು, ಇದರೊಂ ದಿಗೆ ಸುರೇಶ್ ಗೋಕಾಕ್ ಅವರು ರಾಜ್ಯಕ್ಕೆ ಅದರಲ್ಲೂ ಹೈ ಪೈ ಗಿಪ್ಟ್ ಎನ್ನುತ್ತಿರುವವರಿಗೆ ಮಾದರಿಯಾಗಿದ್ದಾರೆ.

ಇನ್ನಾದರೂ ಇವರ ಈ ಒಂದು ಕಾರ್ಯವನ್ನು ನೋಡಿ ಕನ್ನಡ ಮತ್ತು ಸಂಸ್ಕ್ರತ ಇಲಾಖೆ ಅಥವಾ ರಾಜ್ಯ ಸರ್ಕಾರ ಪ್ರತಿಯೊಂದು ಕಾರ್ಯಕ್ರಮಗ. ಳಲ್ಲೂ ಹೀಗೆ ಮಾಡಿದರೆ ಅಳಿದು ಹೋಗುತ್ತಿರುವ ಪುಸ್ತಕ ಸಂಪ್ರದಾಯ ಜೀವಂತವಾಗುತ್ತದೆ ಮುಂದಿನ ಪೀಳಿಗೆಗೆ ಪರಿಚಯವಾಗಿ ಬೆಳೆಯು ತ್ತದೆ.ಇನ್ನೂ ಇದಕ್ಕೆ ಸಾಕ್ಷಿಯಾಗಿದ್ದು ಹುಬ್ಬಳ್ಳಿಯ ಗಣೇಶ್ ಪೇಟನ ಕುಂಬಾರ್ ಓಣಿಯಲ್ಲಿರುವ ಮಾನೆ ಬಂಧುಗಳ ನೂತನ ಗೃಹಪ್ರವೇಶ ಸಮಾ ರಂಭದಲ್ಲಿ ಪಾಲ್ಗೊಂಡು ಇವರು ಪವಿತ್ರ ಭಗವ ದ್ಗೀತೆಯನ್ನು ನೀಡುವ ಮುಖಾಂತರ ಶುಭಾಶಯ ಕೋರಿದರು. ಈ ಒಂದು ಸಮಯದಲ್ಲಿ ಸುರೇಶ್ ಗೋಕಾಕ್ ಅವರ ಆಪ್ತರು ಮಿತ್ರರು ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.