ಶಿವಮೊಗ್ಗ –
ಹಿಜಾಬ್ ವಿಚಾರ ಕುರಿತಂತೆ ಶಿವಮೊಗ್ಗ ದಲ್ಲಿ 52 ವಿದ್ಯಾರ್ಥಿಗಳನ್ನು ಅಮಾನತು ಮಾಡಲಾಗಿದೆ.ಹೌದು ಹದಿನೈದು ದಿನಗಳ ಹಿಂದೆ ಭುಗಿಲೆದ್ದ ಹಿಜಾಬ್ ವಿವಾದ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು ಹೈಕೋರ್ಟ್ ಆದೇಶದ ಹೊರತಾಗಿಯೂ ಶನಿವಾರ ಹಲವು ಕಡೆ ಹಿಜಾಬ್ ಧರಿಸಿ ಬಂದಿದ್ದ ವಿದ್ಯಾರ್ಥಿನಿಯರಿಗೆ ಪ್ರವೇಶ ನಿರಾಕರಿಸಲಾಗಿದೆ.ಹೀಗಾಗಿ ಶಿವಮೊಗ್ಗ ಜಿಲ್ಲೆಯ ಶಿರಾಳಕೊಪ್ಪದಲ್ಲಿ ಹಿಜಾಬ್ ತೆಗೆಯಲು ನಿರಾಕರಿಸಿದ ವಿದ್ಯಾರ್ಥಿನಿಯರು ತಮಗೆ ಪ್ರವೇಶ ನಿರಾಕರಿಸಿದ ಸರ್ಕಾರಿ ಪದವಿ ಪೂರ್ವ ಕಾಲೇಜು ಆಡಳಿತ ಮಂಡಳಿ ವಿರುದ್ಧ ಪ್ರತಿಭಟನೆ ನಡೆಸಿದರು.

ಹಿಜಾಬ್ ನಮ್ಮ ಹಕ್ಕು, ಪ್ರಾಣ ಬಿಟ್ಟೇವು ಹಿಜಾಬ್ ಬಿಡೆವು ಎಂದು ಘೋಷಣೆ ಕೂಗುತ್ತಾ ಕಾಲೇಜ್ ಅವರಣದಲ್ಲಿ ವಿದ್ಯಾರ್ಥಿನಿಯರು ಪ್ರತಿಭಟನೆ ನಡೆಸಿದರು.ಶುಕ್ರವಾರವೇ ನಮ್ಮನ್ನು ಕಾಲೇಜ್ ನಿಂದ ಅಮಾನತು ಮಾಡಲಾಗಿದ್ದು, ಕಾಲೇಜಿಗೆ ಬರಬಾರದು ಎಂದು ತಿಳಿಸಲಾಗಿದೆ ಎಂದು ವಿದ್ಯಾರ್ಥಿಯೊಬ್ಬರು ಸುದ್ದಿಗಾರರಿಗೆ ತಿಳಿಸಿದ್ದಾರೆ. ಶನಿವಾ ರವೂ ಕಾಲೇಜಿಗೆ ಆಗಮಿಸಿ ಘೋಷಣೆಗಳನ್ನು ಕೂಗಿ ಹಿಜಾಬ್ ಧರಿಸಲು ಅವಕಾಶ ನೀಡುವಂತೆ ಒತ್ತಾಯಿಸಿ ದರು.ಆದರೆ ಅವರನ್ನು ಒಳಗೆ ಬಿಡಲಿಲ್ಲ.ನಾವು ಕಾಲೇಜ್ ಗೆ ಬಂದಿದ್ದೇವೆ.ಆದರೆ ಪ್ರಾಂಶುಪಾಲರು ನಮ್ಮನ್ನು ಅಮಾ ನತುಗೊಳಿಸಿದ್ದಾರೆ ಮತ್ತು ಕಾಲೇಜಿಗೆ ಬರುವ ಅಗತ್ಯವಿಲ್ಲ ಎಂದು ಹೇಳಿದರು.ಪೊಲೀಸರು ಸಹ ಕಾಲೇಜಿಗೆ ಬರಬೇಡಿ ಎಂದು ಹೇಳಿದರು.ಇಂದು ಯಾರೂ ನಮ್ಮೊಂದಿಗೆ ಮಾತ ನಾಡಲಿಲ್ಲ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.