ಯಾದಗಿರಿ –
ಮುಖ್ಯಶಿಕ್ಷಕ ಅಮಾನತು ಮುಖ್ಯಶಿಕ್ಷಕ ಸೂರ್ಯಕಾಂತ್ ರನ್ನ ಅಮಾನತು ಮಾಡಿ ಆದೇಶ ಮಾಡಿದ DDPI ಹೌದು
ಕ್ಷೀರಭಾಗ್ಯ ಯೋಜನೆಯ ಹಾಲಿನ ಪ್ಯಾಕೇಟ್ ಗಳನ್ನು ಮಾರಾಟ ಮಾಡುತ್ತಿದ್ದ ಮುಖ್ಯಶಿಕ್ಷಕರೊ ಬ್ಬರನ್ನು ಅಮಾನತು ಮಾಡಿರುವ ಘಟನೆ ಯಾದಗಿರಿಯಲ್ಲಿ ನಡೆದಿದೆ.ಯಾದಗಿರಿಯ ಲಿಂಗೇರಿ ತಾಂಡಾದ ಮುಖ್ಯ ಶಿಕ್ಷಕ ಸೂರ್ಯ ಕಾಂತ್ ಅಮಾನತುಗೊಂಡಿರುವ ಮುಖ್ಯ ಶಿಕ್ಷಕರಾಗಿದ್ದಾರೆ
ಶಾಲೆಯಲ್ಲಿನ ಕ್ಷೀರಭಾಗ್ಯ ಯೋಜನೆಯ ಹಾಲಿನ ಪ್ಯಾಕೇಟ್ ಗಳನ್ನು ಮಾರಾಟ ಮಾಡುತ್ತಿರುವ ಕುರಿತಂತೆ ವಿಡಿಯೋ ಗಳು ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದ್ದವು.ಈ ಒಂದು ವಿಡಿಯೋಗಳು ಸಧ್ಯ ಸಾಮಾಜಿಕ ಜಾಲ ತಾಣ ಗಳಲ್ಲಿ ಸಾಕಷ್ಟು ವೈರಲ್ ಆಗಿದ್ದು
ಈ ಒಂದು ಕುರಿತಂತೆ ದೂರುಗಳು ಬಂದ ಹಿನ್ನಲೆಯಲ್ಲಿ ಡಿಡಿಪಿಐ ಅವರು ಮುಖ್ಯಶಿಕ್ಷಕ ನನ್ನು ಅಮಾನತು ಮಾಡಿದ್ದಾರೆ.ಮುಖ್ಯಶಿಕ್ಷಕನ ಬಣ್ಣ ವಿಡಿಯೋ ದ ಮೂಲಕ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗುತ್ತಾ ಬಟಾಬಯ ಲಾಗಿತ್ತು ಶಿಕ್ಷಕನ ಕಾರ್ಯ.
ಯಾದಗಿರಿಯ ಲಿಂಗೇರಿ ತಾಂಡಾದ ಮುಖ್ಯ ಶಿಕ್ಷಕ ಸೂರ್ಯಕಾಂತ್ ನನ್ನು ದೂರಿನ ಹಿನ್ನಲೆಯಲ್ಲಿ ಸಧ್ಯ ಅಮಾನತು ಮಾಡಲಾಗಿದೆ.ಯಾದಗಿರಿ ಡಿಡಿಪಿಐ ಮಂಜುನಾಥ ಅವರು ಅಮಾನತು ಮಾಡಿ ಆದೇಶವನ್ನು ಮಾಡಿದ್ದಾರೆ.
ಯಾದಗಿರಿ ನಗರದ ಕಿರಾಣಿ ಅಂಗಡಿಯೊಂದ ರಲ್ಲಿ ಹಾಲಿನ ಪ್ಯಾಕೇಟ್ ಗಳನ್ನು ಮಾರಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಪ್ರಕರಣ ವನ್ನ ಗಂಭೀರವಾಗಿ ಪರಿಗಣಿಸಿ ಅಕ್ಷರ ದಾಸೋಹ ಯೋಜನಾಧಿಕಾರಿಗಳಿಗೆ ವರದಿ ನೀಡಲು ಸೂಚನೆ ನೀಡಲಾಗಿದೆ
ಸುದ್ದಿ ಸಂತೆ ನ್ಯೂಸ್ ಯಾದಗಿರಿ…..