ಚಾಮರಾಜನಗರ –
ಬಿಸಿಯೂಟ ಸೇವನೆಯಿಂದ ಮಕ್ಕಳ ಅಸ್ವಸ್ಥತೆಗೆ ಕಾರಣ ವಾಗಿದ್ದ ಅಡುಗೆ ಸಿಬ್ಬಂದಿಗಳನ್ನು ತಕ್ಷಣದಿಂದಲೇ ಕೆಲಸದಿಂದ ವಜಾಗೊಳಿಸಿ ಸೂಕ್ತವಾದ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ಚಾಮರಾಜನಗರ ಜಿಲ್ಲೆಯ ಹನೂರು ಕ್ಷೇತ್ರ ಶಿಕ್ಷಣಾಧಿಕಾರಿ ಟಿ ಆರ್ ಸ್ವಾಮಿ ಆದೇಶ ಮಾಡಿದ್ದಾರೆ.ಜಿಲ್ಲೆಯ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ವಡಕೆಹಳ್ಳ ಸರ್ಕಾರಿ ಉನ್ನತೀಕರಿ ಸಿದ ಶಾಲೆಯಲ್ಲಿ ಬಿಸಿಯೂಟ ಸೇವಿಸಿದ ಮಕ್ಕಳು ಅಸ್ವಸ್ಥ ಗೊಂಡಿದ್ದರು

ಈ ಒಂದು ಘಟನೆ ಬೆನ್ನಲ್ಲೇ ಶಾಲೆಯಲ್ಲಿ ಆಯೋಜನೆ ಗೊಂಡಿದ್ದ ಪೋಷಕರು ಹಾಗೂ ಶಿಕ್ಷಕರ ಸಭೆಯಲ್ಲಿ ಗ್ರಾಮಸ್ಥರ ದೂರು ಆಲಿಸಿ ಮಾತನಾಡಿ ಶಾಲೆಯಲ್ಲಿ ಮಧ್ಯಾಹ್ನ ಸಾಂಬರಿಗೆ ಹಲ್ಲಿ ಬಿದ್ದ ಬಿಸಿಯೂಟವನ್ನು ಸೇವಿಸಿ 70 ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥಗೊಂಡು ರಾಮಾಪುರ ಹಾಗೂ ಕೌದಳ್ಳಿ ಸರ್ಕಾರಿ ಆಸ್ಪತ್ರೆಗೆ ದಾಖಲಾ ಗಿದ್ದರು.ಈ ವೇಳೆ ಸಂಬಂಧಪಟ್ಟವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಪೋಷಕರು ಒತ್ತಾಯಿಸಿದರು ಮಕ್ಕಳು ಊಟವನ್ನು ಸೇವನೆ ಮಾಡಿ ಇದರಲ್ಲಿ ಕೆಲ ಮಕ್ಕಳು ವಾಂತಿ ಮಾಡಿಕೊಂಡಿದ್ದರು. ಈ ಬಗ್ಗೆ ತಿಳಿದ ಅಡುಗೆ ಸಿಬ್ಬಂದಿ ಹಾಗೂ ಶಿಕ್ಷಕರು ಪೋಷಕರು ಯಾವುದೇ ಮಾಹಿತಿ ತಿಳಿಸಿಲ್ಲ ಅಲ್ಲದೆ ಈ ಬಗ್ಗೆ ಮನೆಯವರು ಹೇಳ ಬಾರದು ಎಂದು ಮಕ್ಕಳಿಗೆ ಬೆದರಿಕೆ ಒಡ್ಡಿದ್ದರಂತೆ.


ಈ ಎಲ್ಲಾ ವಿಚಾರವನ್ನು ತಿಳಿದು ಶಾಲೆಗೆ ಆಗಮಿಸಿದ ವೇಳೆ ನಿಜಾಂಶ ಗೂತ್ತಾಗಿದೆ ಕೂಡಲೇ ಆಸ್ಪತ್ರೆಗೆ ದಾಖಲು ಮಾಡಲಾಯಿತು ಈಗ ಚೇತರಿಸಿಕೊಂಡಿದ್ದಾರೆ ಹೆಚ್ಚು ಕಡಿಮೆ ಆಗಿದ್ದರೆ ನಮ್ಮ ಗತಿಯೇನು ಎಂದು ಆಕ್ರೋಶ ವ್ಯಕ್ತಪಡಿಸಿದ್ದರುಇನ್ನೂ ಶಾಲೆಯಲ್ಲಿ ಬಿಸಿಯೂಟ ಗುಣಮ ಟ್ಟದಿಂದ ಕೂಡಿಲ್ಲ ಸ್ವಚ್ಛತೆಯಿಲ್ಲ ಕುಡಿಯುವ ನೀರು ಶುದ್ಧವಾಗಿಲ್ಲ ಎಂದು ಆರೋಪಿಸಿದರು ಅಲ್ಲದೆ 2016 ರಲ್ಲೂ ಸಹ ಇಂತಹ ಘಟನೆ ನಡೆದಿದ್ದು ಇದೀಗ ಮತ್ತೆ ಮರುಕಳಿಸಿದೆ ಇದರಿಂದ ಮಕ್ಕಳ ಜೀವ ಭೀತಿ ನಮ್ಮನ್ನು ಕಾಡುತ್ತಿದೆ ಎಂದರು ಇದಕ್ಕೆ ಸ್ಪಂದಿಸಿದ ಬಿಇಒ ಟಿ ಆರ್ ಸ್ವಾಮಿ ಸೂಕ್ತವಾದ ಕ್ರಮವನ್ನು ಕೈಗೊಂಡದ್ದು ನಿರ್ಲಕ್ಷ್ಯ ವನ್ನು ತೋರಿದ ಅಡುಗೆ ಸಿಬ್ಬಂದಿಗಳಿಗೆ ಅಮಾನತು ಮಾಡಿ ಬಿಸಿ ಮುಟ್ಟಿಸಿದ್ದಾರೆ.