ಸಿಂದಗಿ –
ಸರ್ಕಾರಿ ಶಾಲೆಯ ಇಬ್ಬರು ಶಿಕ್ಷಕರನ್ನು ಡಿಡಿಪಿಐ ಅಮಾನತು ಮಾಡಿದ ಘಟನೆ ವಿಜಯಪುರದಲ್ಲಿ ನಡೆದಿದೆ. ಹೌದು ಇಂಗ್ಲಿಷ್ ವರ್ಣಾಕ್ಷರ ಬರೆಯಲು ಬಾರದ ಕಾರಣ ಕ್ಕಾಗಿ ತಾಲ್ಲೂಕಿನ ಗುಂದಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಇಬ್ಬರು ಸಹ- ಶಿಕ್ಷಕರನ್ನು ಶುಕ್ರವಾರ ಅಮಾನತು ಗೊಳಿಸಲಾಗಿದೆ.ಸಹ-ಶಿಕ್ಷಕ ದೌಲತ್ ದೇವಕುಳೆ ಮತ್ತು ಸಹ- ಶಿಕ್ಷಕಿ ಎಂ.ಎನ್.ರಾಂಪೂರಮಠ ಅಮಾನತು ಗೊಂಡ ಶಿಕ್ಷಕರಾಗಿದ್ದಾರೆ.ಇಂಗ್ಲಿಷ್ ವರ್ಣಾಕ್ಷರಗಳನ್ನು ತಪ್ಪಾಗಿ ಬರೆದು,ಅದನ್ನೇ ಸರಿ ಎಂದು ಮಕ್ಕಳಿಗೆ ಹೇಳುತ್ತಿ ದ್ದರು.ಇದನ್ನು ಪ್ರಶ್ನಿಸಿದ ಪಾಲಕರು,ಗ್ರಾಮಸ್ಥರ ಜೊತೆ ವಾಗ್ವಾದ ಮಾಡಿದ್ದರು.
ಈ ಕುರಿತ ವಿಡಿಯೊ ವನ್ನು ಮಾಡಿ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಮಾಡಿದ್ದು ಹೀಗಾಗಿ ವಿಡಿಯೋ ವೈರಲ್ ಆಗಿತ್ತು ಇದನ್ನು ಗಂಭೀರವಾಗಿ ತಗೆದುಕೊಂಡ ಜಿಲ್ಲೆಯ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ವರದಿಯನ್ನು ಆಧರಿಸಿ ಇಬ್ಬರು ಶಿಕ್ಷಕರನ್ನು ಅಮಾನತು ಮಾಡಿದ್ದಾರೆ.ಮಕ್ಕಳ ಶೈಕ್ಷಣಿಕ ಪ್ರಗತಿ ಕುಂಠಿತವಾಗಲು ಕಾರಣಕರ್ತರಾಗಿದ್ದಾರೆ. ಇವರ ಮೇಲೆ ಶಿಸ್ತು ಕ್ರಮ ಜರುಗಿಸಲು ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎಸ್.ನೀರಲಗಿ ಅವರು ವರದಿ ಸಲ್ಲಿಸಿದ್ದರು. ಇಲಾಖಾ ವಿಚಾರಣೆ ಕಾಯ್ದಿರಿಸಿ ಅಮಾನತುಗೊಳಿಸಲಾಗಿದೆ.ಸಧ್ಯ ಈ ಒಂದು ಕ್ರಮವನ್ನು ಇಲಾಖೆಯಿಂದ ಕೈಗೊಂಡಿದ್ದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ಆದೇಶ ಹೊರಡಿಸಿ ದ್ದಾರೆ..