ಶಹಾಬಾದ್ –
ಕರ್ತವ್ಯ ಲೋಪದ ಹಿನ್ನಲೆ ಯಲ್ಲಿ ಶಿಕ್ಷಕಿಯೊಬ್ಬರನ್ನು ಅಮಾನತು ಗೊಳಿಸಿದ ಘಟನೆ ಶಹಾಬಾದ್ ತಾಲ್ಲೂಕಿನಲ್ಲಿ ನಡೆದಿದೆ ಹೊನಗುಂಟಾ ಗ್ರಾಮದಲ್ಲಿ ನ. 26ರಂದು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಸಂವಿಧಾನ ದಿನಾಚರಣೆಯಲ್ಲಿ ಡಾ. ಬಾಬಾ ಸಾಹೇಬ ಅಂಬೇಡ್ಕರ್ ಅವರ ಭಾವಚಿತ್ರ ಇಡದೇ ಮತ್ತು ಪೂಜೆ ಸಲ್ಲಿಸದೆ ಸಂವಿಧಾನ ಪೀಠಿಕೆ ಬೋಧಿಸಿದ್ದ ಆರೋಪದ ಮೇಲೆ ಶಿಕ್ಷಕಿ ಸಾವಿತ್ರಿ ಪಾಟೀಲ ಅವರನ್ನು ಅಮಾನತು ಮಾಡಲಾಗಿದೆ.
ಭಾವ ಚತ್ರ ಇಡದ ಘಟನೆ ಖಂಡಿಸಿ ದಲಿತ ವಿದ್ಯಾರ್ಥಿ ಒಕ್ಕೂಟದ ತಾಲ್ಲೂಕ ಸಂಚಾಲಕ ಪಿ. ಎಸ್. ಮೇತ್ರಿ ಮತ್ತು ಗ್ರಾಮದ ಮುಖಂಡರು ಕ್ಷೇತ್ರ ಶಿಕ್ಷಣಾಧಿಕಾರಿಗೆ ದೂರು ಸಲ್ಲಿಸಿದ್ದರು.ದೂರಿಗೆ ಸ್ಪಂದಿಸಿದ ತಾಲ್ಲೂಕು ಅಧಿಕಾರಿಗಳು ಹೊನಗುಂಟಾ ಗ್ರಾಮಕ್ಕೆ ಭೇಟಿ ನೀಡಿ ಶಿಕ್ಷಕಿಯ ಮೌಖಿಕ ಹೇಳಿಕೆ ಪಡೆದರು. ತಪ್ಪಾಗಿರುವು ದನ್ನು ಶಿಕ್ಷಕಿ ಒಪ್ಪಿಕೊಂಡಿದ್ದು, ಕರ್ತವ್ಯ ಉಲ್ಲಂಘಿಸಿ ದ್ದನ್ನು ಆಧರಿಸಿ ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಧರ ಬಿರಾದಾರ ಅವರು ಸಾವಿತ್ರಿ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಶಹಾಬಾದ್……