ಶಿವಮೊಗ್ಗ –
ಶಿವಮೊಗ್ಗ ನಗರದ ಗೋಪಾಲ ಬಡಾವಣೆಯ ವಿದ್ಯಾನಿಕೇ ತನ ಶಾಲೆಯಲ್ಲಿ ಅನ್ಯಧರ್ಮೀಯ ಮಕ್ಕಳು ಹೆಚ್ಚಾಗಿ ಇರುವುದರಿಂದ ಶಾಲೆಯ ಮುಖ್ಯ ಶಿಕ್ಷಕಿ ಜಬೀನಾ ಪರ್ವಿನ್ ಮಕ್ಕಳಿಗೆ ನಮಾಜ್ ಮಾಡಲು ಅವಕಾಶ ಕಲ್ಪಿಸಿ ದ್ದರು.ಇಲ್ಲಿನ ಖಾಸಗಿ ಶಾಲೆಯಲ್ಲಿ ಇಸ್ಲಾಂ ಧರ್ಮೀಯ ಮಕ್ಕಳಿಗೆ ನಮಾಜ್ ಮಾಡಲು ಅವಕಾಶ ನೀಡಿದ ಮುಖ್ಯ ಶಿಕ್ಷಕಿಯನ್ನು ಅಮಾನತು ಮಾಡಲಾಗಿದೆ.ಜಬೀನಾ ಪರ್ವಿನ್ ಅಮಾನತುಗೊಂಡ ಮುಖ್ಯ ಶಿಕ್ಷಕಿಯಾಗಿದ್ದಾರೆ ಗೋಪಾಲ ಬಡಾವಣೆಯ ವಿದ್ಯಾನಿಕೇತನ ಶಾಲೆಯಲ್ಲಿ ಈ ಘಟನೆ ನಡೆದಿದೆ.
ಮುಸ್ಲಿಂ ಧರ್ಮೀಯ ಮಕ್ಕಳೇ ಹೆಚ್ಚಾಗಿರುವ ಕಾರಣಕ್ಕೆ ಜಬೀನಾ ಪರ್ವಿನ್ ನಮಾಜ್ ಮಾಡಲು ಅವಕಾಶ ಕಲ್ಪಿಸಿ ದ್ದರು.ಈ ವಿಚಾರ ತಿಳಿದ ಶಾಲೆಯ ಆಡಳಿತ ಮಂಡಳಿ ಕಠಿಣ ಕ್ರಮ ತೆಗೆದುಕೊಂಡಿದೆ. ಹಿಜಾಬ್ ವಿವಾದ ಇನ್ನೂ ಹಸಿರಾಗಿರುವಾಗಲೇ ಈ ಪ್ರಕರಣ ನಡೆದಿದೆ.