ಮೂವರು ಶಿಕ್ಷಕರ ಅಮಾನತು – ಡಿಡಿಪಿಐ ರಂಗಯ್ಯ ಅಮಾನತು ಮಾಡಿ ಆದೇಶ

Suddi Sante Desk
ಮೂವರು ಶಿಕ್ಷಕರ ಅಮಾನತು – ಡಿಡಿಪಿಐ ರಂಗಯ್ಯ ಅಮಾನತು ಮಾಡಿ ಆದೇಶ

ಮಧುಗಿರಿ

ಮೂವರು ಶಿಕ್ಷಕರನ್ನು ಅಮಾನತು ಮಾಡಿದ ಘಟನೆ ಮಧುಗಿರಿ ಯಲ್ಲಿ ನಡೆದಿದೆ.ಹೌದು ಮಧುಗಿರಿ ಶೈಕ್ಷಣಿಕ ಜಿಲ್ಲೆಯಲ್ಲಿನ ಪ್ರತ್ಯೇಕ ಪ್ರಕರಣಗಳಲ್ಲಿ ಮೂವರು ಶಿಕ್ಷಕರನ್ನು ಅಮಾನತು ಮಾಡಿದ ಡಿಡಿಪಿಐ ಕೆ.ಜಿ.ರಂಗಯ್ಯ ಆದೇಶ ಹೊರಡಿಸಿದ್ದಾರೆ.ತಾಲ್ಲೂಕಿನ ಚೌಳಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆ ಶಿಕ್ಷಕ ಜಗದೀಶ್,ಗಾಳಿಹಳ್ಳಿ ಸರ್ಕಾರಿ ಕಿರಿಯ ಪ್ರಾಥ ಮಿಕ ಪಾಠಶಾಲೆ ಶಿಕ್ಷಕ ಟಿ.ಎಸ್. ಸಿದ್ದೇಶ್ವರ, ಬೈರಾಪುರ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠ ಶಾಲೆ ಶಿಕ್ಷಕ ನಾಗರಾಜು ಅಮಾನತುಗೊಂಡವ ರಾಗಿದ್ದಾರೆ.

ತಾಲ್ಲೂಕಿನ ಚೌಳಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆ ಶಿಕ್ಷಕ ಜಗದೀಶ್ ಅನಧಿಕೃತವಾಗಿ ಗೈರು ಹಾಜರಾಗಿದ್ದರು.ಜೊತೆಗೆ ಮಕ್ಕಳಿಗೆ ಮೊಟ್ಟೆ ವಿತರಣೆ ಮಾಡದಿರುವ ಆರೋಪ ಕೇಳಿ ಬಂದಿತ್ತು.ಇನ್ನೂ ಗಾಳಿಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠ ಶಾಲೆ ಟಿ.ಎಸ್.ಸಿದ್ದೇಶ್ವರ ಅವರು 2022 ಡಿ. 9ರಂದು ಶಾಲೆಗೆ ಮದ್ಯಪಾನ ಮಾಡಿ ಬಂದಿದ್ದ ಕುರಿತಂತೆ ದೂರು ಆರೋಪ ಕೇಳಿ ಬಂದಿತ್ತು

ಅಲ್ಲದೇ ಪದೇ ಪದೇ ಗೈರು ಹಾಜರಾಗುತ್ತಿ ದ್ದರು ಮೂರನೇ ಪ್ರಕರಣದಲ್ಲಿ ಬೈರಾಪುರ ಶಾಲೆಯ ಸಹ ಶಿಕ್ಷಕ ನಾಗರಾಜು ಅವರು ಶಾಲೆಗೆ ನಿರಂತ ರವಾಗಿ ಗೈರು ಹಾಜರಾಗುವುದರ ಜೊತೆಗೆ ಇವರು ಸಹ ಮದ್ಯಪಾನ ಮಾಡಿ ಶಾಲೆಗೆ ಬರು ತ್ತಿದ್ದರು.ಹೀಗಾಗಿ ಇದೇಲ್ಲವನ್ನು ಅರಿತ ಡಿಡಿಪಿಐ ಮೂವರು ಶಿಕ್ಷಕರನ್ನು ಅಮಾನತು ಮಾಡಿ ಆದೇಶವನ್ನು ಮಾಡಿದ್ದು ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.

ಸುದ್ದಿ ಸಂತೆ ನ್ಯೂಸ್ ಮಧುಗಿರಿ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.