ನವದೆಹಲಿ –
ಹಬ್ಬದ ಸಮಯದಲ್ಲಿ ಕೇಂದ್ರ ಸರ್ಕಾರ ನೌಕರರಿಗೆ ಭರ್ಜರಿ ಸಿಹಿ ಸುದ್ದಿಯನ್ನು ನೀಡಿದೆ.ಹೌದು ಬಹಳ ದಿನಗಳಿಂದ ಡಿಎ ಗಾಗಿ ಕಾಯುತ್ತಿದ್ದ ನೌಕರರು ಪಿಂಚಣಿದಾರರಿಗೆ ಜುಲೈ 1 ರಿಂದ ಅನ್ವಯವಾಗು ವಂತೆ ಡಿಎ ಮತ್ತು ಡಿಆರ್ ಹೆಚ್ಚಳ ಮಾಡಲಾಗಿದೆ ಇದರೊಂದಿಗೆ ಕೇಂದ್ರ ಸರ್ಕಾರಿ ನೌಕರರಿಗೆ ಒಳ್ಳೆಯ ಸುದ್ದಿ ಸಿಕ್ಕಿದೆ.ಈ ತಿಂಗಳಲ್ಲಿ ಡಿಎ ಶೇಕಡ 3 ರಷ್ಟು ಹೆಚ್ಚಾಗಬಹುದು ಎನ್ನಲಾಗಿದೆ.ದೀಪಾವಳಿಗೆ ಮುಂಚಿತವಾಗಿ ಶೇ.3 ಡಿಎ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಯಿದೆ.ಇದು ಸಾಧ್ಯವಾದಲ್ಲಿ ಒಟ್ಟು ಡಿಯ ರ್ನೆಸ್ ಭತ್ಯೆ ಶೇ. 31 ಆಗಲಿದೆ.
ಹೌದು ಉದ್ಯೋಗಿಗಳು ಹಣದುಬ್ಬರದಿಂದ ಸ್ವಲ್ಪ ಪರಿಹಾರವನ್ನು ಪಡೆಯಲು ಸರ್ಕಾರವು ಶೀಘ್ರ ದಲ್ಲೇ ಶೇ.3 ರಷ್ಟು ಡಿಯರ್ನೆಸ್ ಭತ್ಯೆ ಹೆಚ್ಚಳ ಘೋಷಿಸಬೇಕು ಎಂದು ನೌಕರರ ಸಂಘವು ಒತ್ತಾಯಿಸುತ್ತಿದ್ದು ಎಐಸಿಪಿಐ ಸೂಚ್ಯಂಕದ ಡೇಟಾ 121.7 ಕ್ಕೆ ತಲುಪಿದೆ.ಇಂತಹ ಪರಿಸ್ಥಿತಿಯಲ್ಲಿ ಜೂನ್ 2021 ರ ಡಿಯರ್ನೆಸ್ ಭತ್ಯೆಯನ್ನು ಶೇ 3 ರಷ್ಟು ಹೆಚ್ಚಿಸಲು ನಿರ್ಧರಿಸಲಾಗಿದ್ದು, ಶೇಕಡ 31.18 ಕ್ಕೆ ಏರಿಕೆ ಆಗಲಿದ್ದು ಇದರೊಂದಿಗೆ ತನ್ನ ನೌಕರರಿಗೆ ಕೇಂದ್ರ ಸರ್ಕಾರವು ಸಿಹಿ ಸುದ್ದಿ ನೀಡಿದೆ.