This is the title of the web page
This is the title of the web page

Live Stream

[ytplayer id=’1198′]

December 2024
T F S S M T W
 1234
567891011
12131415161718
19202122232425
262728293031  

| Latest Version 8.0.1 |

State News

ಭವ್ಯ ಭಾರತದ ಕನಸು ಕಂಡಿದ್ದ ಆದರ್ಶ ರಾಜ್ಯಮಟ್ಟದ ಅತ್ಯುತ್ತಮ ಶಿಕ್ಷಕ ಸೈಯದ್ ಹುಸೇನ್ ಇನ್ನೂ ನೆನಪು ಮಾತ್ರ…..

WhatsApp Group Join Now
Telegram Group Join Now

ಹೊಸಪೇಟೆ –

ಗಣಿನಾಡು ಬಳ್ಳಾರಿಯ ಹೊಸಪೇಟೆಯಲ್ಲಿ ಯಾವು ದೇ ಮೂಲೆಯಲ್ಲಿ ನಿಂತುಕೊಂಡು ಹಲೋ ಇಲ್ಲಿ ಸೈಯದ್ ಹುಸೇನ್ ಎಂದರೆ ಯಾರು ಅಂತಾ ಕೇಳಿದರೆ ಸಾಕು ಅಯ್ಯೋ ಅವರೇನಾ ಬನ್ನಿ ಸಾರ್ ಅವರ ಮನೆಗೆ ನಾವು ಕರೆದುಕೊಂಡು ಹೋಗುತ್ತೆವೆ ಬನ್ನಿ ಅವರೊಬ್ಬರು ವೃತ್ತಿಯಲ್ಲಿ ಪ್ರೌಢ ಶಾಲೆಯ ಶಿಕ್ಷಕರು ಆದರೆ ಅವರ ಬಗ್ಗೆ ಹೇಳುತ್ತಾ ಹೋದರೆ ಸಾಕಷ್ಟ್ರು ಪ್ರಮಾಣದಲ್ಲಿ ಇದೆ ಎನ್ನುತ್ತಾ ಅವರ ಸಂಪೂರ್ಣವಾದ ಜಾತಕವನ್ನು ಚಿಕ್ಕದಾಗಿ ಚೋಕ್ಕ ದಾಗಿ ಹೇಳುವವರೇ ಹೆಚ್ಚು.

ಅಷ್ಟೊಂದು ಹೆಸರಾಗಿದ್ದರು ಶಿಕ್ಷಕ ಸೈಯದ್ ಹುಸೇ ನ್ ಅವರು.ಹೊಸಪೇಟೆಯ ಸ್ಥಳೀಯ ಪಟ್ಟಣದ ನಿವಾಸಿಯಾಗಿರುವ ಇವರು ಮೂಲತಃ ಬಳ್ಳಾರಿ ಜಿಲ್ಲೆಯ ಹಡಗಲಿಯ ಕಾರಿಗನೂರಿನವರಾಗಿದ್ದು ಕ್ರಿಯಾಶೀಲ ಶಿಕ್ಷಕರಾಗಿದ್ದರು ಸೈಯದ್ ಹುಸೇನ್‌ ರವರು.ಕೊರೋನಾ ರೋಗದಿಂದ ಇಂದು ಬೆಳಗಿನ ಜಾವ ನಿಧನರಾಗಿದ್ದಾರೆ ಎಂದರೆ ಈ ಒಂದು ಸುದ್ದಿ ಯನ್ನು ನಂಬಲು ಸಾಧ್ಯವಾಗುತ್ತಿಲ್ಲ.

ಸರ್ಕಾರಿ ಪ್ರೌಢ ಶಾಲೆಯಲ್ಲಿ ಶಿಕ್ಷಕರಾಗಿ ಇದರೊಂ ದಿಗೆ ಸೇವೆ ಸಲ್ಲಿಸುತ್ತಿದ್ದ ಸೈಯದ್ ಹುಸೇನ್‌ ರವರು ಶಿಕ್ಷಕರ ಹಾಗೂ ವಿದ್ಯಾರ್ಥಿಗಳ ಪ್ರೀತಿಗೆ ಪಾತ್ರರಾಗಿ ದ್ದರು.ರಾಜ್ಯ ಮಟ್ಟದ ಅತ್ಯುತ್ತಮ ಏಕೈಕ ಪ್ರಶಸ್ತಿ ಯನ್ನು ಪಡೆದು ಕಾರಿಗನೂರು ಪ್ರೌಢ ಶಾಲೆಗೆ ಗೌರ ವವನ್ನು ತಗೆದುಕೊಂಡು ಬಂದಿದ್ದರು.ಪಟ್ಟಣದಲ್ಲಿ ವಾಸಿಸುತ್ತಾ ನಿವಾಸದಲ್ಲಿಯೇ ಚಿಕ್ಕದಾದ ಗ್ರಂಥಾಲ ಯವನ್ನು ಪ್ರಾರಂಭಿಸಿ ಆ ಗ್ರಂಥಾಲಯಕ್ಕೆ ಭವ್ಯ ಭಾರತದ ಕನಸು ಕಟ್ಟಿಕೊಂಡು ಅದರಲ್ಲಿಯೇ ಪ್ರಖ್ಯಾತ ವಿಜ್ಞಾನಿಗಳು ಮತ್ತು ದೇಶದ ಮಾಜಿ ರಾಷ್ಟ್ರಪತಿಗಳು ಆದ ಡಾ. ಅಬ್ದುಲ್ ಕಲಾಂರವರ ಹೆಸರನ್ನು ಇಟ್ಟು ಹಲಾವಾರು ಕ್ಷೇತ್ರಗಳ ಮಹನಿಯ ರ ಜೀವನ ಚರಿತ್ರೆ ಉಳ್ಳ ಪುಸ್ತಕಗಳು ಹಾಗೂ ಸ್ವಾತಂತ್ರ ಹೋರಾಟದಲ್ಲಿ ಭಾಗವಹಿಸಿದ ಮಹತ್ತರ ಕುರಿತ ಪುಸ್ತಕಗಳನ್ನು ಅಲ್ಲಿಟ್ಟು ಓದುಗರ ಜ್ಞಾನದಾ ಹವನ್ನು ತಣಿಸುತ್ತಿದರು.

ಇವರು ಸಮಾಜದ ಅಲ್ಲದೇ ಸಮಾಜದ ಸಮುದಾ ಯಗಳ ನಾಗರೀಕರ ವಿಶ್ವಾಸಕ್ಕೆ ಪಾತ್ರರಾಗಿ ತಮ್ಮ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದರು.ಕಳೆದ ಕೆಲ ದಿನ ಗಳಿಂದ ಕೊರೋನಾ ರೋಗದಿಂದ ಬಳಲುತ್ತಿದ್ದ ಶಿಕ್ಷಕ ಸೈಯದ್ ಹುಸೇನ್‌ರವರು ಇನ್ನಿಲ್ಲ ಎಂಬ ಮಾತು ಸುದ್ದಿ ಕೇಳಿ ಅವರ ಬಗ್ಗೆ ದೊಡ್ಡ ದೊಡ್ಡದಾಗಿ ಮಾತನಾಡಿದ ಬಾಯಲ್ಲಿ ಆ ಒಂದು ಸುದ್ದಿಯನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ.ಮೃತರ ಪತ್ನಿ ಗಂಗಾವತಿ ತಾಲೂಕಿನ ಜಂತಕಲ್ ಗ್ರಾಮದ ಸರ್ಕಾರಿ ಶಾಲೆಯ ಲ್ಲಿ ಶಿಕ್ಷಕಿ ಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದು ಜುಬೇದ ಬೇಗಂ ರಿಗೆ ಇಬ್ಬರು ಪುತ್ರಿಯರನ್ನು ಮತ್ತು ಅಪಾರ ಸಂಖ್ಯೆಯಲ್ಲಿ ಬಂದು ಬಳಗವನ್ನು ಅಗಲಿದ್ದಾರೆ ಮೃತರ ಅಂತ್ಯ ಸಂಸ್ಕಾರವನ್ನು ಅವರ ಹುಟ್ಟು ಹಡ ಗಲಿಯಲ್ಲಿ ಮಾಡಲಾಯಿತು.

ಇನ್ನೂ ಮೃತರಾದ ಶಿಕ್ಷಕ ವೃತ್ತಿಯೊಂದಿಗೆ ಪಟ್ಟಣದ ಎಲ್ಲಾ ಸಮುದಾಯಗಳ ನಾಗರೀಕರೊಂದಿಗೆ ಸಹೋದರತೆಯಿಂದ ಸಹಬಾಳ್ವೆ ನಡೆಸುತ್ತಿದ್ದ ಸರ್ವರ ಅಭಿಮಾನಕ್ಕೆ ಪಾತ್ರರಾಗಿದ್ದ ಶಿಕ್ಷಕ ವನ್ನು ಸೈಯದ್ ಹುಸೇನ್‌ರವರಿಗೆ ಶ್ರದ್ಧಾಂಜಲಿಯನ್ನು ಸಲ್ಲಿಸಿದರು. ಹುಸೇನ್‌ರವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮೃತರ ಆತ್ಮಕ್ಕೆ ಚಿರಶಾಂತಿ ನಿಮಿಷ ಗಳ ಕಾಲ ಮೌನಾಚರಣೆ ಆಚರಿಸಲಾಯಿತು. ಇದ ರೊಂದಿಗೆ ತಾಲೂಕಿನ ಸರ್ಕಾರಿ ಪ್ರೌಢ ಶಾಲೆಯ ಶಿಕ್ಷಕರು ವಿದ್ಯಾರ್ಥಿಗಳು ಸಂತಾಪವನ್ನು ವ್ಯಕ್ತಪಡಿಸಿ ದ್ದಾರೆ ವ್ಯಕ್ತಪಡಿಸಿದ್ದಾರೆ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಮೃತರ ಅಗಲಿಕೆಯನ್ನು ತಡೆದುಕೊಳ್ಳುವ ಶಕ್ತಿಯನ್ನು ಆ ದೇವರು ಕುಟುಂಬಕ್ಕೆ ನೀಡಲಿ ಎಂದು ಪ್ರಾರ್ಥಿಸಿದ್ದಾರೆ ಅಲ್ಲದೇ ನಾಡಿನ ಮೂಲೆ ಮೂಲೆ ಮೂಲೆಗಳಿಂದ ಶಿಕ್ಷಕರು ಕೂಡಾ ಸಂತಾಪ ವನ್ನು ಸೂಚಿಸಿದ್ದಾರೆ.

ಪವಾಡೆಪ್ಪ, ಗುರು ತಿಗಡಿ, ಎಸ್ ವಾಯ್ ಸೊರಟಿ, ಚಂದ್ರಶೇಖರ್ ಶೆಟ್ರು, ಅಶೋಕ ಸಜ್ಜನ, ಎಲ್ ಐ ಲಕ್ಕಮ್ಮನವರ, ಶಂಕರ ಘಟ್ಟಿ, ಶರಣಪ್ಪಗೌಡ ಆರ್ ಕೆ, ಎಸ್ ಎಫ್ ಪಾಟೀಲ, ಹನುಮಂತಪ್ಪ ಮೇಟಿ ಮಲ್ಲಿಕಾರ್ಜುನ ಉಪ್ಪಿನ, ಶರಣಬಸವ ಬನ್ನಿಗೋ ಳ, ಹನುಮಂತಪ್ಪ ಬೂದಿಹಾಳ, ಎಂ ವಿ ಕುಸುಮ ಜಿ, ಟಿ, ಲಕ್ಷ್ಮೀದೇವಮ್ಮ, ಕೆ ನಾಗರಾಜ, ರಾಮಪ್ಪ ಹಂಡಿ, ಸಂಗಮೇಶ ಖನ್ನಿನಾಯ್ಕರ, ಜೆ ಟಿ ಮಂಜುಳಾ, ಗೋವಿಂದ ಜುಜಾರೆ, ದಾವಣಗೆರೆ ಸಿದ್ದೇಶ,ನಾಗರಾಜ ಕಾಮನಹಳ್ಳಿ, ಹೊಂಬರಡಿ ಆರ್,ಡಿ, ಅಕ್ಬರಲಿ ಸೋಲಾಪುರ, ರಾಜೀವಸಿಂಗ ಹಲವಾಯಿ, ಕಾಶಪ್ಪ ದೊಡವಾಡ, ಸಿದ್ದಣ್ಣ ಉಕ್ಕಲಿ, ಕಿರಣ ರಘುಪತಿ ಚಂದ್ರಶೇಖರ್ ತಿಗಡಿ, ಎಂ ಐ ಮುನವಳ್ಳಿ, ಆರ್ ನಾರಾಯಣಸ್ವಾಮಿ ಚಿಂತಾಮ ಣಿ, ಫನೀಂದ್ರನಾಥ, ಡಿ ಎಸ್ ಭಜಂತ್ರಿ, ಬಿ ಎಸ್ ಮಂಜುನಾಥ, ರೇವಣ್ಣ ಎಸ್, ಎಸ್ ಆರ್ ಎಮ್ಮಿ ಮಠ, ತುಮಕೂರು ರವೀಶ, ಟಗರು ಪಂಡಿತ, ಕಲ್ಪನ ಚಂದನಕರ ರಾಜಶ್ರೀ ಪ್ರಭಾಕರ ಶಿವಲೀಲಾ ಪೂಜಾರ, ಶಿವಮೊಗ್ಗ ಸೋಮಶೇಖರ್,ಕೊಡಗು ರೋಜಿ, ಸುರೇಶ ಅರಳಿ ಅಶೋಕ ಬಿಸೆರೊಟ್ಟಿ, ಮಧುಗಿರಿ ದೇವರಾಜ ಲೀಲಾ ಮಹೇಶ್ವರ ಆರ್ ಐ ಹನಗಿ, ಕೋಲಾರ ಶ್ರೀನಿವಾಸ ಸೇರಿದಂತೆ ಹಲವರು ಸಂತಾಪ ಸೂಚಿಸಿದ್ದಾರೆ


Google News

 

 

WhatsApp Group Join Now
Telegram Group Join Now
Suddi Sante Desk