ಚಿತ್ರದುರ್ಗ –
ಮೊರಾರ್ಜಿ ದೇಸಾಯಿ ವಸತಿ ಶಾಲೆಯೊಂದರಲ್ಲಿ ಪ್ರವೇಶ ನೀಡಲು ಹಣಕ್ಕೆ ಬೇಡಿಕೆ ಇಟ್ಟಿದ್ದ ಶಾಲೆಯ ಮುಖ್ಯೋಪಾಧ್ಯಾಯ ರೊಬ್ಬರು ಎಸಿಬಿ ಬಲೆಗೆ ಬಿದ್ದ ಘಟನೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ನಲ್ಲಿ ನಡೆದಿದೆ. ತಾಲ್ಲೂಕಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಚಾರ್ಯ ಸೈಯದ್ ನಿಜಾಮುದ್ದಿನ್ ಅವರೇ ಬಲೆಗೆ ಬಿದ್ದ ವಸತಿ ಶಾಲೆಯ ಪ್ರಾಂಶುಪಾಲರಾಗಿದ್ದಾರೆ.
H S ಮೂರ್ತಿ ರೈತನಾಗಿದ್ದು ಹಿರಿಯೂರು ತಾಲ್ಲೂಕಿನ ನಿವಾಸಿಯಾಗಿರುವ ಇವರ ಮಗನಿಗೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಪ್ರವೇಶ ನೀಡಲು ಒಂದು ಮಾರ್ಕ್ಸ್ ಕಡಿಮೆ ಇದೆ ಹೀಗಾಗಿ ಪ್ರವೇಶ ಬೇಕಾದರೆ ಹತ್ತು ಸಾವಿರ ರೂಪಾಯಿ ನೀಡುವಂತೆ ಬೇಡಿಕೆ ಇಟ್ಟಿದ್ದರು. ಈ ಒಂದು ವಿಚಾರ ಕುರಿತು ರೈತ ಮೂರ್ತಿ ಅವರು ಎಸಿಬಿ ಗೆ ದೂರನ್ನು ನೀಡಿದ್ದರು.ದೂರಿನ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿದ ಎಸಿಬಿ ಅಧಿಕಾರಿಗಳು ಟ್ರ್ಯಾಪ್ ಮಾಡಿ ವಶಕ್ಕೆ ತೆಗೆದುಕೊಂಡಿದ್ದಾರೆ.
ಹತ್ತು ಸಾವಿರ ರೂಪಾಯಿ ತಗೆದುಕೊಳ್ಳುವಾಗ ಟ್ರ್ಯಾಪ್ ಮಾಡಿದ ಎಸಿಬಿ ಅಧಿಕಾರಿಗಳು ಪ್ರಾಂಶುಪಾಲ ಸೈಯದ್ ಅವರನ್ನು ಬಂಧನ ಮಾಡಲಾಗಿದೆ. ಎಸಿಬಿ ಎಸ್ಪಿ ಜಯಪ್ರಕಾಶ್ ಅವರ ಮಾರ್ಗದರ್ಶನದಲ್ಲಿ ಈ ಒಂದು ಕಾರ್ಯಾಚರಣೆ ನಡೆದಿದೆ.
ಕಾರ್ಯಾಚರಣೆಯಲ್ಲಿ ಡಿವೈಎಸ್ಪಿ ಬಸವರಾಜ ಮಗದುಮ್,ಬಸವರಾಜ ಬುದ್ನಿ,ಸಿಬ್ಬಂದಿ ಗಳು ಪಾಲ್ಗೊಂಡಿದ್ದರು.