ನಾಳೆ ರಾಜ್ಯದಲ್ಲಿ ಸೇವಾ ನಿರತ ಪದವೀದರ ಶಿಕ್ಷಕರಿಂದ ಸಾಂಕೇ ತಿಕ ಪ್ರತಿಭಟನೆ – ಹಿಂಬಡ್ತಿ ವಿರುದ್ದ ಪ್ರತಿಭಟನೆ ಮಾಡಲಿರುವ ಸೇವಾ ನಿರತ ಪದವೀದರ ಶಿಕ್ಷಕರು…..

Suddi Sante Desk

ಬೆಂಗಳೂರು –

ಹಿಂಬಡ್ತಿ ವಿಚಾರದಲ್ಲಿ ರಾಜ್ಯದ ಪ್ರಾಥಮಿಕ ಶಾಲೆ ಗಳಲ್ಲಿ ಕರ್ತವ್ಯವನ್ನು ನಿರ್ವಹಿಸುತ್ತಿರುವ ಪದವೀ ಧರ ಶಿಕ್ಷಕರಿಗೆ ದೊಡ್ಡದಾದ ಅನ್ಯಾಯವಾಗುತ್ತಿದೆ. ಈಗಾಗಲೇ ತಮಗೆ ಆಗುತ್ತಿರುವ ಅನ್ಯಾಯದ ಕುರಿತಂತೆ ಈಗಾಗಲೇ 2006ರಲ್ಲಿ ರಾಜ್ಯದಲ್ಲಿ ದೊಡ್ಡ ಪ್ರಮಾಣದಲ್ಲಿ ಹೋರಾಟ ಮಾಡಿ ಸಿಡಿದೆದ್ದಿದ್ದರು ಶಿಕ್ಷಕರು ಈಗ ಮತ್ತೆ ಹೋರಾಟಕ್ಕೆ ಮುಂದಾಗುತ್ತಿ ದ್ದಾರೆ.ಇವರಿಗೆ ಭಡ್ತಿಯನ್ನು ನೀಡದೆ ಹಿಂಬಡ್ತಿಯನ್ನು ನೀಡಲಾಗುತ್ತಿದೆ.

ಹೀಗಾಗಿ ಇದರಿಂದಾಗಿ ಮತ್ತೆ ಸೇವಾ ನಿರತ ಪದವೀ ದರ ಶಿಕ್ಷಕರು ನಾಳೆ ರಾಜ್ಯದಲ್ಲಿ ಪ್ರತಿಭಟನೆ ಮಾಡ ಲಿದ್ದಾರೆ. ಸಾಂಕೇತಿಕವಾಗಿ ರಾಜ್ಯದ ಎಲ್ಲಾ ಬಿಇಓ ಕಚೇರಿಗಳ ಮುಂದೆ ಪ್ರತಿಭಟನೆ ಮಾಡಿ ಬೇಡಿಕೆಗಳ ಈಡೇರಿಕೆಗೆ ಕುರಿತಂತೆ ಧ್ವನಿ ಎತ್ತಲಿದ್ದಾರೆ. ಹೌದು ಭಡ್ತಿ ವಿಚಾರದಲ್ಲಿ ಅನ್ಯಾಯವನ್ನು ಮಾಡುತ್ತಿರುವ ಇಲಾಖೆಯ ವಿರುದ್ದ ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಕಾರ್ಯವನ್ನು ನಿರ್ವಹಿಸುತ್ತಿರುವ ಸೇವಾ ನಿರತ ಪದವೀದರ ಶಿಕ್ಷಕರು ಸಿಡಿದೆದ್ದಿದ್ದಾರೆ. ಏನೇಲ್ಲಾ ಪದವಿ ಮುಗಿಸಿದರು ಕೂಡಾ ಸಧ್ಯ ಇವರಿಗೆ ಮತ್ತೆ ಹಿಂಬಡ್ತಿಯ್ನನು ನೀಡಿ ಅನ್ಯಾಯವಾಗುತ್ತಿರುವ ವಿಚಾರ ಕುರಿತಂತೆ ಅಸಮಧಾನಗೊಂಡಿದ್ದಾರೆ ಶಿಕ್ಷ ಕರು.ಸಧ್ಯ ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಸಾವಿರಾ ರು ಪದವೀದರ ಶಿಕ್ಷಕರು ಕಾರ್ಯವನ್ನು ನಿರ್ವಹಿಸು ತ್ತಿದ್ದಾರೆ.ಸೇವಾ ನಿರತ ಪದವೀದರ ಶಿಕ್ಷಕರು ಪ್ರಾಥ ಮಿಕ ಶಾಲೆಗಳಲ್ಲಿ ಶಿಕ್ಷಕರಾಗಿ ಕಾರ್ಯವನ್ನು ನಿರ್ವ ಹಿಸುತ್ತಿದ್ದು ಸಧ್ಯ ಇವರಿಗೆ ಹಿಂಬಡ್ತಿಯನ್ನು ನೀಡಲಾ ಗುತ್ತಿದ್ದೆ.ಹೀಗಾಗಿ ಇದರಿಂದ ಅಸಮಾಧನಗೊಂಡಿ ರುವ ಪದವೀದರ ಶಿಕ್ಷಕರು ನಾಳೆ ಸಾಂಕೇತಿಕವಾಗಿ ಮನವಿಯನ್ನು ನೀಡಿ ನಂತರ ಭೌತಿಕವಾಗಿ ವರ್ಗ ಗಳು ಆರಂಭಗೊಂಡ ನಂತರ 6 ,7,8 ನೇ ತರಗತಿ ಬಹಿಷ್ಕರಿಸಲು ನಿರ್ಧಾರವನ್ನು ಮಾಡಿದ್ದಾರೆ.

ಈಗಾಗಲೇ ಈಕುರಿತಂತೆ ಹಲವು ಬಾರಿ ಮನವಿ ನೀಡಿ ಬೇಡಿಕೆಗಳ ಈಡೇರಿಕೆಗೆ ಕುರಿತಂತೆ ಮನವಿ ಮಾಡಿದರು ಕೂಡಾ ಸ್ಪಂದಿಸದ ಹಿನ್ನಲೆಯಲ್ಲಿ ತಾವು ಬೋಧಿಸುವ ತರಗತಿಗಳನ್ನು ಬಹಿಷ್ಕಾರ ಮಾಡಲು ನಿರ್ಧಾರವನ್ನು ಮಾಡಿದ್ದು ಅದಕ್ಕೂ ಮುಂಚಿತವಾಗಿ ನಾಳೆ ರಾಜ್ಯದ ತುಂಬೆಲ್ಲಾ ಎಲ್ಲಾ ಬಿಇಓ ಕಚೇರಿಗಳ ಮುಂದೆ ಸಾಂಕೇತಿಕವಾಗಿ ಪ್ರತಿಭಟನೆ ಮಾಡಲಿದ್ದಾ ರೆನಾಳೆ ರಾಜ್ಯದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿಯನ್ನು ನೀಡಿ ಬೇಡಿಕೆಗಳ ಈಡೇರಿಕೆಗೆ ಒತ್ತಾಯವನ್ನು ಮಾಡಲಿದ್ದಾರೆ.

ಮುಂದೆ ಭೌತಿಕ ವಾಗಿ ವರ್ಗಗಳು ಆರಂಭಗೊಂಡ ನಂತರ 6,7 ಮತ್ತು 8 ನೇ ತರಗತಿಗಳಿಗೆ ಬೋಧಿಸು ವುದನ್ನು ಬಹಿಷ್ಕರಿಸಲು ನಿರ್ಧರಿಸಿದ್ದೇವೆ ಎಂದು ಮನವಿ ಪತ್ರವನ್ನು ನೀಡಿದರು.ಇನ್ನೂ ಪ್ರಮುಖ ವಾಗಿ 2016 ಕ್ಕೆ ಮೊದಲು ನೇಮಕವಾದ ಶಿಕ್ಷಕರನ್ನು ಸರಕಾರ ಪ್ರಾಥಮಿಕ ಶಾಲಾ ಶಿಕ್ಷಕರು (1 ರಿಂದ 7) ಎಂದು ನೇಮಕಾತಿ ಮಾಡಿಕೊಂಡಿದ್ದು. ನಂತರ 2016 ರಲ್ಲಿ ಸರಕಾರ ಏಕಾಏಕಿ ರಾಜ್ಯದ ಎಲ್ಲ ಶಿಕ್ಷಕರಿಗೆ ಹಿಂಬಡ್ತಿ ನೀಡಿ ಪ್ರಾಥಮಿಕ ಶಾಲಾ ಶಿಕ್ಷಕ (1 ರಿಂದ 5) ಎಂದು ಪರಿಗಣಿಸಿದೆ ಎಂದು ಸಂಘದ ರಾಜ್ಯಾಧ್ಯಕ್ಷ ಎಸ್ ವೈ ಸೊರಟಿ ಹೇಳಿದರು

ಪದವಿ,ಸ್ನಾತಕೋತ್ತರ ಪದವಿ ಪೂರ್ಣ ಗೊಳಿಸಿವ ರುವ ಶಿಕ್ಷಕರಿದ್ದರು ಸರಕಾರ ಯಾವುದನ್ನು ಪರಿಗಣಿ ಸದೆ 1 ರಿಂದ 5 ನೇ ತರಗತಿಗೆ ಸೀಮಿತಗೊಳಿಸಿದೆ ಹಾಗೇ C and R ರೂಲ್ಸ್ ತಿದ್ದುಪಡಿ ಮಾಡಿ ಪ್ರಾಥ ಮಿಕ ಶಾಲಾ ಶಿಕ್ಷಕರು 1 ರಿಂದ 7 ಎಂದು ಪರಿಗಣಿ ಸುವವರೆಗೂ ಶಿಕ್ಷಕರು ತರಗತಿ ಬಹಿಷ್ಕರಿಸಲು ನಿರ್ಧರಿಸಿದ್ದು ನಾಳೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಲಿದ್ದಾರೆ.ಸಧ್ಯ ರಾಜ್ಯದಲ್ಲಿ 80 ಸಾವಿರ ಪದವೀದರರು ಇದ್ದಾರೆ ನಾಳೆ ಸಾಂಕೇತಿಕವಾಗಿ ರಾಜ್ಯದ ಎಲ್ಲಾ ಬಿಇಓ ಕಚೇರಿಗಳಲ್ಲಿ ಹೋರಾಟ ಮಾಡಿ ಮನವಿ ನೀಡಿ ನಂತರ ಭೌತಿಕ ವರ್ಗಗಳು ಆರಂಭಗೊಂಡ ನಂತರ ತರಗತಿಗಳ ಬಹಿಷ್ಕಾರ ವನ್ನು ಮಾಡಲಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.