ಹಾನಗಲ್ –
ಸಾಮಾನ್ಯವಾಗಿ ಹಿಂದೆ ಮುಂದೆ ನಾಲ್ಕೈದು ಜನರನ್ನು ಅವರು ಇವರನ್ನು ಕರೆದುಕೊಂಡು ಹೋಗಿ ಅಬ್ಬರದ ಪ್ರಚಾರ ಮಾಡೊದನ್ನು ಕೇಳಿದ್ದೇವೆ ನೋಡಿದ್ದೆವೆ ಆದರೆ ಮಾಜಿ ಸಚಿವ ಸಂತೋಷ ಲಾಡ್ ಹಾವೇರಿ ಯ ಹಾನಗಲ್ ನಲ್ಲಿ ವಿಭಿನ್ನವಾದ ರೀತಿಯಲ್ಲಿ ಪ್ರಚಾರ ಮಾಡುತ್ತಿದ್ದಾರೆ
ಹೌದು ಸಧ್ಯ ಹಾನಗಲ್ ನಲ್ಲಿ ವಿಧಾನ ಸಭಾ ಕ್ಷೇತ್ರದ ಉಪ ಚುನಾವಣೆಯ ಕದನ ಕಣ ನಡೆಯುತ್ತಿದ್ದು ಹೀಗಾಗಿ ಮಾಜಿ ಸಚಿವ ಸಂತೋಷ ಲಾಡ್ ಹಾನಗಲ್ ನಲ್ಲಿ ಪ್ರಚಾರ ಮಾಡಿದರು
ಯುವಕರು ಆಪ್ತರು ಪಕ್ಷದ ಸ್ಥಳೀಯ ಕಾರ್ಯಕರ್ತರು ಮುಖಂಡರ ಮಧ್ಯೆ ಸಂತೋಷ ಲಾಡ್ ವಿಭಿನ್ನವಾಗಿ ಪ್ರಚಾರ ಮಾಡಿದರು. ತಾವೇ ಸ್ವತಃ ಘೋಷಣೆ ಗಳನ್ನು ಕೂಗುತ್ತಾ ವಿಶೇಷ ರೀತಿಯಲ್ಲಿ ಪ್ರಚಾರ ಮಾಡಿದರು
https://youtu.be/ctKDgoOnZ8A
ಒಟ್ಟಾರೆ ಅವರಿವರ ಹಾಗೇ ವೇದಿಕೆ ಭಾಷಣ ಕಾರ್ಯಕ್ರಮ ಮಾಡದೇ ಇವರು ವಿಶೇಷ ರೀತಿಯಲ್ಲಿ ಪ್ರಚಾರ ಮಾಡಿ ಪಕ್ಷದ ಅಭ್ಯರ್ಥಿ ಪರವಾಗಿ ಮತಯಾಚನೆ ಮಾಡಿದರು




