ಬೆಂಗಳೂರು –

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಮತ್ತು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಮುಖಂಡರಲ್ಲಿ ಕೇಳಿಕೊಳ್ಳುವುದೆನೆಂದರೆ ಮಾನ್ಯರೆ ತಾವುಗಳೆಲ್ಲ ಗಮನಿಸುತ್ತಿರಬಹುದು ಕರ್ನಾಟಕ ರಾಜ್ಯದ ಎಲ್ಲ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು ತಮ್ಮ ತಮ್ಮ ತಾಲೂಕಿನ ಖಾಲಿ ಹುದ್ದೆಗಳ ಪಟ್ಟಿ ಯನ್ನು ಮಾಡಿದ್ದಾರೆ.

ಆದರೆ ಯಾವ ತಾಲೂಕಿ ನಲ್ಲಿಯೂ ಹಿಂದಿ ವಿಷಯ ಶಿಕ್ಷಕರ ಹುದ್ದೆ ಖಾಲಿ ಇಲ್ಲಾ ಎಂದು ನಮೂದಿಸಿರು ವುದು ಇದರಿಂದ ಗೊತ್ತಾಗುತ್ತಿರುವುದೆನೆಂದರೆ ಹಿಂದಿ ಭಾಷಾ ಶಿಕ್ಷಕರು,ಶಿಕ್ಷಕರಲ್ಲ ಇವರಿಗೆ ಯಾರು ಇಲ್ಲಾ ಅಂದರೆ ಇವರೆಲ್ಲ ಅನಾಥರು,ಇವರಿಗೆಲ್ಲ ಹೆಂಡತಿ,ಮಕ್ಕಳು,ತಂದೆ,ತಾಯಿ, ಸಹೋದರ, ಸಹೋದರಿಯರು ಯಾರು ಇಲ್ಲಾ ಎಂದು ಭಾವಿಸಿ ದಂತಿದೆ.15 ವರ್ಷಗಳಿಂದ ಒಂದೇ ಜಾಗದಲ್ಲಿ ಸೇವೆ ಸಲ್ಲಿಸುತ್ತಾ ಬರುತಿದ್ದೇವೆ ದಯಮಾಡಿ ನಮಗೂ ವರ್ಗಾವಣೆಯಲ್ಲಿ ಒಮ್ಮೆ ಯಾದರೂ ಅವಕಾಶ ಮಾಡಿಕೊಡಿ ಎಂದು ತಮ್ಮಲ್ಲಿ ವಿನಂತಿಸಿಕೊಳ್ಳು ತ್ತೇವೆ.

15 ವರ್ಷಗಳಿಂದ ವರ್ಗಾವಣೆ ವಂಚಿತ ಶಿಕ್ಷಕ ಬಂಧುಗಳು