ಬೆಂಗಳೂರು –
ವರ್ಗಾವಣೆ ಸಿಗದೇ ನಾಡಿನ ಮೂಲೆ ಮೂಲೆಗಳ ಲ್ಲಿನ ಶಿಕ್ಷಕರ ನೋವು ಅನುಭವಿಸುತ್ತಿರುವ ವಿಚಾರ ಒಂದೆಡೆಯಾದರೆ ಇನ್ನೂ ನಿಯೋಜನೆ ಕೂಡಾ ಮಾಡುವಂತಿಲ್ಲ.ಹೀಗಿರುವಾಗ ಮೈಸೂರಿನ ಹೆಚ್ ಡಿ ಕೋಟಿ ಮತ್ತು ಸರಗೂರು ಕ್ಷೇತ್ರ ಶಿಕ್ಷಣಾಧಿಕಾರಿಗಳು ನಿಜವಾಗಿಯೂ ರಾಜ್ಯದ ಶಿಕ್ಷಕರು ಮೆಚ್ಚುವಂತಹ ಕೆಲಸವನ್ನು ಮಾಡಿದ್ದಾರೆ.
ಹೌದು ಸಧ್ಯದ ಕಷ್ಟದ ಪರಸ್ಥಿತಿಯಲ್ಲಿರುವ ಶಿಕ್ಷಕರ ಸಮಸ್ಯೆಗೆ ಸ್ಪಂದಿಸಿದ್ದಾರೆ. ಹೌದು ಶಿಕ್ಷಕರ ಮನವಿಗೆ ಬೇಡಿಕೆಗೆ ಸ್ಪಂದಿಸಿದ ಇವರು ತಮ್ಮ ವ್ಯಾಪ್ತಿಯಲ್ಲಿನ 31 ಶಿಕ್ಷಕರಿಗೆ ಕೇಳಿದ ಸ್ಥಳಕ್ಕೆ ನಿಯೋಜನೆ ಮಾಡಿ ಆದೇಶವನ್ನು ಮಾಡಿದ್ದಾರೆ.ಶೈಕ್ಷಣಿಕ ದೃಷ್ಟಿಯಿಂದ 31 ಶಿಕ್ಷಕರನ್ನು ಈ ಕೂಡಲೇ ಕರ್ತವ್ಯದಿಂದ ಬಿಡುಗಡೆಗೊಂಡು ನಿಯೋಜನೆ ಮಾಡಿದ ಸ್ಥಳಕ್ಕೆ ಹೋಗಿ ಹಾಜರಾಗುವಂತೆ ಆದೇಶವನ್ನು ಮಾಡಿದ್ದಾರೆ.
ಸಾಮಾನ್ಯವಾಗಿ ರಾಜ್ಯದಲ್ಲಿ ಒಂದು ಕಡೆ ವರ್ಗಾ ವಣೆ ಇಲ್ಲದೇ ಶಿಕ್ಷಕರು ಪರದಾಡುತ್ತಿದ್ದು ಇನ್ನೊಂದು ಕಡೆಗೆ ಕೊನೆಗೆ ನಿಯೋಜನೆ ಆದರೂ ಮಾಡುವಂತೆ ಕೇಳುತ್ತಿದ್ದಾರೆ ಇವೆಲ್ಲದರ ನಡುವೆ ಹೆಚ್ ಡಿ ಕೋಟೆ ಮತ್ತು ಸರಗೂರು ಬಿಇಓ ಅವರು ಕೊನೆಯ ಪಕ್ಷದ ಲ್ಲಿ ನಿಯೋಜನೆ ಮಾಡಿ ನೇರವಾಗಿದ್ದಾರೆ. ಸಮಸ್ಯೆ ಯ ಸುಳಿಯಲ್ಲಿ ಸಿಕ್ಕು ಪರದಾಡುತ್ತಿರುವ ಶಿಕ್ಷಕರಿಗೆ ತಾತ್ಕಾಲಿಕವಾಗಿ ತುಸು ನೆಮ್ಮದಿಯನ್ನು ನೀಡಿ ಉಳಿದವರಿಗೆ ದಾರಿಯನ್ನು ಮಾಡಿಕೊಟ್ಟಿದ್ದಾರೆ.
ಇನ್ನೂ ಈ ಒಂದು ವಿಚಾರ ಒಂದು ಕಡೆಯಾದರೆ ಇನ್ನೂ ಇದನ್ನೇ ಮುಂದಿಟ್ಟುಕೊಂಡು ರಾಜ್ಯದ ಇನ್ನೂಳಿದವರು ಹೀಗೆ ಆದರೂ ಮಾಡಿದರೆ ವರ್ಗಾವಣೆ ಇಲ್ಲದೇ ಒದ್ದಾಡುತ್ತಿರುವ ಶಿಕ್ಷಕರಿಗೆ ಅನುಕೂಲ ಮಾಡಿಕೊಟ್ಟಂತಾಗುತ್ತದೆ.ಇನ್ನಾದರೂ ಹೀಗೆ ಮಾಡಬಹುದಾದರೆ ದಯಮಾಡಿ ಶಿಕ್ಷಣ ಸಚಿವರೇ ಹೀಗೆ ಮಾಡಿ ಈಗಾಗಲೇ ವರ್ಗಾವಣೆ ಇಲ್ಲದೇ ರಾಜ್ಯದಲ್ಲಿ ಕಂಗಾಲಾಗಿರುವ ಶಿಕ್ಷಕರು ಇದರಿಂದಾದರೂ ಸಂತೋಷಗೊಂಡು ಶಿಕ್ಷಕರಿಗೆ ನಿಯೋಜನೆ ಮಾಡಿ ಅನುಕೂಲ ಮಾಡಿಕೊಟ್ಟರೇ ಗುಣಾತ್ಮಕ ಶಿಕ್ಷಣಕ್ಕೆ ಅನುಕೂಲ ಮಾಡಿ ನಾಂದಿ ಹಾಡಬಹುದು.
ಇನ್ನೂ ನಿಜವಾಗಿಯೂ ಇಂತಹ ಶಿಕ್ಷಣಾಧಿಕಾರಿ ಗಳನ್ನು ಪಡೆದ ತಾಲ್ಲೂಕಿನ ಶಿಕ್ಷಕರು ಧನ್ಯರು ಶಿಕ್ಷಣ ಸಚಿವರೇ ಈ ಬಿಇಓ ಮಾಡಿದ ಕೆಲಸವನ್ನು ನೋಡಿ ರಾಜ್ಯದ ಉಳಿದ ಕ್ಷೇತ್ರ ಶಿಕ್ಷಣಾಧಿಕಾರಿಗಳು ಈ ಹೀತಿ ಮಾಡಬಹುದಾದರೆ ಸಾದ್ಯವಾಗುತ್ತದೆ ಆದರೂ ಹೇಳಿ ಪುಣ್ಯವನ್ನು ಕಟ್ಟಿಕೊಂಡು ನೆರವಾಗಿದ್ದಾರೆ
ಸದ್ದಿಲ್ಲದೇ ಇವರು.